ಬೆಂಗಳೂರು: ಇಲ್ಲಿನ ಹೆಬ್ಬಾಳ ಸಿಬಿಐ ಸಮೀಪವಿರುವ ಎಚ್‌ಪಿ ಪೆಟ್ರೋಲ್ ಬಂಕ್‌ನಲ್ಲಿ ಶನಿವಾರ ವಾಹನ ಸವಾರರು ರೊಚ್ಚಿಗೆದ್ದಿದ್ದರು. ನೂರಕ್ಕೂ ಹೆಚ್ಚು ಜನರು ಪೆಟ್ರೋಲ್ ಬಂಕ್ ಮುಂದೆ ಪ್ರತಿಭಟನೆ ನಡೆಸಿದರು. ಪೆಟ್ರೋಲ್‌ನಲ್ಲಿ ಮೋಸ ಮಾಡಲಾಗಿದೆ ಎಂಬ ಆರೋಪವೇ ಪ್ರತಿಭಟನೆಗೆ ಕಾರಣವಾಗಿತ್ತು.
ನಿಗದಿತ ಬೆಲೆಗೆ ಪೆಟ್ರೋಲ್ ಹಾಕದೇ ವಂಚನೆ ಮಾಡಿದ್ದಾರೆಂದು ವಾಹನ ಸವಾರರು ಆರೋಪಿಸಿದ್ದಾರೆ. ಕಾರು ಚಾಲಕ ಮೋಹನ್ ಎಂಬುವವರು ೧ ಸಾವಿರ ರೂ ಪೆಟ್ರೋಲ್ ಹಾಕಿಸಿದ್ದರೆ, ಆದರೆ ಸಿಬ್ಬಂದಿ ೯೮೫ ಪೆಟ್ರೋಲ್ ಹಾಕಿ, ೧ ಸಾವಿರ ಬಿಲ್ ಕೊಟ್ಟಿದ್ದಾರೆ. ಇದರಿಂದ ಕೋಪಗೊಂಡ ವಾಹನ ಸವಾರರು ಪ್ರತಿಭಟಿಸಿದ್ದಾರೆ.
ಬಂಕ್‌ನಲ್ಲಿ ಸಾರ್ವಜನಿಕರು ಜಮಾಯಿಸುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿ, ಜನರನ್ನು ಚದುರಿಸಲು ಮುಂದಾದರು. ಈ ವೇಳೆ ಆಕ್ರೋಶಗೊಂಡ ಸಾರ್ವಜನಿಕರು, ತಪ್ಪು ಮಾಡಿದವರನ್ನು ಪ್ರಶ್ನಿಸುವುದು ಬಿಟ್ಟು ನಮ್ಮನ್ನು ಕಳುಹಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ಕಿಡಿಕಾರಿದರು. ಪೆಟ್ರೋಲ್ ಗನ್ ಮಿಷನ್ ಪರಿಶೀಲನೆಗೆ ಪಟ್ಟುಹಿಡಿದರು. ಸೂಕ್ತ ತನಿಖೆ ವಹಿಸುವುದಾಗಿ ಪೊಲೀಸರು ಹೇಳಿದರು. ಆದರೆ, ನಿಜವಾಗಿಯೂ ಕ್ರಮವಾಗುತ್ತದೆಯೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | ಕುಡಿದ ಮತ್ತಿನಲ್ಲಿ ಪತ್ನಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಾಕಿ, ಆತ್ಮಹತ್ಯೆಗೆ ಯತ್ನ