ಬೆಂಗಳೂರು: ಸಾಕುಪ್ರಾಣಿ ಪ್ರಿಯರಿಗೆ ಅದರಲ್ಲಿಯೂ ಶ್ವಾನಪ್ರಿಯರಿಗೆ (Pet Dog) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಗುಡ್‌ನ್ಯೂಸ್ ನೀಡಿದೆ. ವಸತಿ ಕಲ್ಯಾಣ ಸಂಘಗಳು (RWA) ಹೌಸಿಂಗ್ ಸೊಸೈಟಿಗಳ ಒಳಗೆ ಯಾವುದೇ ರೀತಿಯ ಸಾಕುಪ್ರಾಣಿಗಳನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ನಾಗರಿಕ ಸಂಸ್ಥೆ ಕೂಡ ಇದನ್ನೇ ಒತ್ತಿ ಹೇಳಿದೆ. ಇದರ ಜತೆಗೆ ಬಿಬಿಎಂಪಿ ಸಾಕುಪ್ರಾಣಿಗಳಿಗೆ ಆಹಾರ ನೀಡುವ ಸಮುದಾಯಗಳಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ನಾಗರಿಕ ಸಂಸ್ಥೆ ಹೊರಡಿಸಿದ ಮಾರ್ಗಸೂಚಿಯಲ್ಲಿ ಸಾಕುಪ್ರಾಣಿಗಳ ಬಗ್ಗೆ ಆರ್‌ಡಬ್ಲ್ಯುಎಗಳ ವರ್ತನೆಯ ಬಗ್ಗೆ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದೆ. ಸಾಕುಪ್ರಾಣಿಗಳ ಕುರಿತಾದ ಆರ್‌ಡಬ್ಲ್ಯುಎಗಳ ಬೈಲಾಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ ಮತ್ತು ಹೌಸಿಂಗ್ ಸೊಸೈಟಿಯೊಳಗೆ ಪ್ರಾಣಿಗಳ ಅಸ್ತಿತ್ವಕ್ಕೆ ಹಾನಿ ಮಾಡಬಾರದು ಎಂದು ಬಿಬಿಎಂಪಿ ಹೇಳಿದೆ. ಸಾಕುಪ್ರಾಣಿಗಳನ್ನು ಸಾಮಾನ್ಯ ಪ್ರದೇಶಗಳ ಪ್ರವೇಶಕ್ಕೆ ಅನುಮತಿಸಬೇಕು ಮತ್ತು ಲಿಫ್ಟ್‌ನಲ್ಲಿ ತೆರಳುವಾಗ ಮಾಸ್ಕ್ ಕಡ್ಡಾಯವಲ್ಲ ಎಂದೂ ತಿಳಿಸಿದೆ. ಇದರಿಂದ ಸಾಕುಪ್ರಾಣಿ ಮಾಲೀಕರು ನಿಟ್ಟುಸಿರು ಬಿಡುವಂತಾಗಿದೆ.
ಇದೆಲ್ಲ ನಿಷೇಧ
ಇದರ ಜತೆಗೆ ಕೋಲುಗಳಿಂದ ನಾಯಿಗಳನ್ನು ಓಡಿಸುವುದು ಕಾನೂನುಬಾಹಿರ ಚಟುವಟಿಕೆ ಎಂದು ಪರಿಗಣಿಸಲಾಗುವುದು ಮತ್ತು ಎಲ್ಲ ಸಾರ್ವಜನಿಕ ಉದ್ಯಾನಗಳು, ಟೆಕ್ ಪಾರ್ಕ್‌ಗಳು ಮತ್ತಿತರ ಸಂಸ್ಥೆಗಳು ತಮ್ಮ ಆವರಣದಲ್ಲಿ ಸಾಕುಪ್ರಾಣಿಗಳ ಚಿಕಿತ್ಸೆಯನ್ನು ಮೇಲ್ವಿಚಾರಣೆ ಮಾಡಲು ಸಂಬಂಧಪಟ್ಟವರಿಗೆ ನಿರ್ದೇಶಿಸಬೇಕು ಎಂದು ಬಿಬಿಎಂಪಿ ಸೂಚಿಸಿದೆ.
ಆಹಾರ ನೀಡುವಾಗ ಪಾಲಿಸಬೇಕಾದ ಮಾರ್ಗಸೂಚಿ
- ಬೀದಿ ನಾಯಿಗಳಿಗೆ ಆಹಾರವನ್ನು ನೀಡುವವರು ಮಾಂಸ ಮತ್ತು ಸಕ್ಕರೆ ಬಿಸ್ಕೇಟುಗಳನ್ನು ತಪ್ಪಿಸಲು ಸೂಚಿಸಲಾಗಿದೆ. ಏಕೆಂದರೆ ಇವು ಅವುಗಳನ್ನು ಹೈಪರ್ ಆ್ಯಕ್ಟೀವ್ ಮಾಡುವ ಸಾಧ್ಯತೆ ಇದೆ.
- ರಾತ್ರಿ 11ರಿಂದ ಬೆಳಿಗ್ಗೆ 5ರವರೆಗೆ ಆಹಾರ ನೀಡಬಾರದು.
- ಸೌಮ್ಯ ಆಹಾರವನ್ನು ಒದಗಿಸಲು ಸೂಚಿಸಲಾಗುತ್ತದೆ. ಏಕೆಂದರೆ ಇದು ಪ್ರಾಣಿಗಳು ಆಕ್ರಮಣಕಾರಿಯಾಗಿ ವರ್ತಿಸುವುದನ್ನು ತಡೆಯುತ್ತದೆ.
- ಜಾಸ್ತಿ ಜನರ ಓಡಾಟ ಇದ್ದಾಗ ಆಹಾರವನ್ನು ನೀಡಬಾರದು.
- ಸಾಕುಪ್ರಾಣಿಗಳ ಮಾಲೀಕರು ನೈರ್ಮಲ್ಯವನ್ನು ಕಾಪಾಡಬೇಕು ಮತ್ತು ಅವುಗಳನ್ನು ನಿಯಮಿತವಾಗಿ ಸ್ನಾನ ಮಾಡಿಸಿ ಆರೋಗ್ಯ ಪರಿಶೀಲಿಸುತ್ತಿರಬೇಕು.
ಇದನ್ನೂ ಓದಿ: Buddy Bench Conversations; ಸಾಕುನಾಯಿ ಗೋಪಿ ಮೂರ್ತಿ ಜತೆ ಸುಧಾಮೂರ್ತಿ ಭಾಗಿ
ಸಾಕು ನಾಯಿ ನಿಮ್ಮ ಮುಖ ನೆಕ್ಕುತ್ತದೆಯೆ? ಹುಷಾರ್!
ನೆಕ್ಕುವುದು ಪ್ರಾಣಿಗಳ ಸಹಜ ಚರ್ಯೆ. ಅದನ್ನು ನಿಲ್ಲಿಸಲಾಗದು. ನೀರು, ಆಹಾರವನ್ನು ಅವು ನೆಕ್ಕುವಷ್ಟೇ ಸಹಜವಾಗಿ ತಂತಮ್ಮ ಕೈ, ಕಾಲು, ಆಟದ ವಸ್ತುಗಳಿಂದ ಹಿಡಿದು ತಮ್ಮ ಮರ್ಮಾಂಗ ಅಥವಾ ವಿಸರ್ಜನೆಗಳವರೆಗೆ ಎಲ್ಲವನ್ನೂ ನೆಕ್ಕುತ್ತವೆ. ಇವೆಲ್ಲ ಪ್ರಾಣಿಗಳ ಪಾಲಿಗೆ ನೈಸರ್ಗಿಕ ವಿಷಯಗಳು. ಆದರೆ ಅದೇ ಬಾಯಲ್ಲಿ ನಮ್ಮ ಮುಖ-ಮೂತಿಗಳನ್ನೂ ನೆಕ್ಕುವುದೆಂದರೆ? ತಮ್ಮ ಆತ್ಮೀಯತೆಯನ್ನು ಪ್ರೀತಿಯನ್ನು ತೋರಿಸಿಕೊಳ್ಳಲು ನಮ್ಮ ಭಾಷೆ ಬಾರದ ಅವುಗಳಿಗೆ ನೆಕ್ಕುವುದು ಸಹಜವೇ ಆದರೂ, ನಮ್ಮ ಬಗ್ಗೆ ನಾವು ಯೋಚಿಸಿಕೊಳ್ಳಬೇಡವೇ ಎಂಬುದು ಪ್ರಶ್ನೆ.
ಕೆಲವರ ಪಾಲಿಗೆ ಶ್ವಾನಗಳ ಎಂಜಲು ಅಪಾಯವನ್ನು ತಂದೊಡ್ಡಿದ ಉದಾಹರಣೆಗಳಿವೆ. ದೇಹದ ಪ್ರತಿರೋಧಕತೆ ಕಡಿಮೆ ಇರುವವರು, ವೃದ್ಧರು, ಪುಟ್ಟ ಮಕ್ಕಳು, ಗರ್ಭಿಣಿಯರು ಮತ್ತು ತೆರೆದ ಗಾಯಗಳು ಇರುವವರಿಗೆ ನಾಯಿಗಳಿಂದ ನೆಕ್ಕಿಸಿಕೊಳ್ಳುವುದು ತೊಂದರೆಗಳಿಗೆ ಕಾರಣವಾಗಬಹುದು. ಸಾಮಾನ್ಯವಾಗಿ, ಸಾಕು ನಾಯಿಗಳ ಬಾಯಲ್ಲಿರುವ ಬ್ಯಾಕ್ಟೀರಿಯಗಳು ಅವರ ಮಾಲೀಕರಿಗೆ ಅಂಥ ಅಪಾಯಕಾರಿಯಲ್ಲ ಎನ್ನಲಾಗುತ್ತದೆ. ಜೀವನುದ್ದಕ್ಕೂ ಪ್ರಾಣಿಗಳನ್ನು ಸಾಕುತ್ತಲೇ, ಅವುಗಳಿಂದ ಪಪ್ಪಿ ಕೊಡಿಸಿಕೊಳ್ಳುತ್ತಲೇ ಬದುಕಿದ ಬಹಳಷ್ಟು ಮಂದಿ ಆರೋಗ್ಯವಾಗಿಯೇ ಇದ್ದಾರೆ. ಆದಾಗ್ಯೂ, ಪ್ರಭೇದಗಳ ನಡುವೆ ವರ್ಗಾವಣೆಗೊಳ್ಳಬಹುದಾದ (ಉದಾ, ನಾಯಿಯಿಂದ ಮನುಷ್ಯರಿಗೆ) ರೋಗಾಣುಗಳು ಕೆಲವೊಮ್ಮೆ ತೀವ್ರ ಸಮಸ್ಯೆಗಳನ್ನು ತರುತ್ತವೆ.
ಇದರರ್ಥ ನಾಯಿ ಸಾಕುವ ಬಗ್ಗೆ, ಅವುಗಳನ್ನು ಪ್ರೀತಿಸುವ ಬಗ್ಗೆ ಅನುಮಾನ ಪಡಬೇಕು ಎಂದಲ್ಲ. ಣಿ ಪ್ರಿಯರ ಪಾಲಿಗೆ ಸಾಕು ಪ್ರಾಣಿಗಳನ್ನೊಮ್ಮೆ ಮುದ್ದಾಡುವುದು ದಿನದ ಮೆಚ್ಚಿನ ಕ್ಷಣಗಳಾಗಿರಬಹುದು. ಇದಾವುದೂ ತಪ್ಪಲ್ಲ. ಆದರೆ ಅವುಗಳಿಂದ ಮುಖ ನೆಕ್ಕಿಸಿಕೊಳ್ಳುವ ಮುನ್ನ ಜಾಗ್ರತೆ ಮಾಡಿ ಎನ್ನುತ್ತವೆ ಕೆಲವು ಅಧ್ಯಯನಗಳು.