Site icon Vistara News

Physical Abuse : ಬೆಂಗಳೂರಲ್ಲೊಂದು ಪೈಶಾಚಿಕ ಕೃತ್ಯ; 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ

Physical Abuse in Bengaluru

ಬೆಂಗಳೂರು: ಬೆಂಗಳೂರಿನಲ್ಲಿ (Bengaluru News) ಮನುಕುಲ ಮೆಚ್ಚದ ಪೈಶಾಚಿಕ ಪಾತಕ ಕೃತ್ಯವೊಂದು ನಡೆದಿದೆ. ಇನ್ನೂ ಜಗತ್ತು ಅಂದರೆ ಏನು ಎಂದು ತಿಳಿಯದ ಬಾಲಕಿ ಮೇಲೆ ಕಾಮುಕನೊಬ್ಬ ದೌರ್ಜನ್ಯವನ್ನು (physical Abuse) ನಡೆಸಿದ್ದಾನೆ. 6 ವರ್ಷದ ಬಾಲಕಿ‌ ಮೇಲೆ ಎರಗಿ ದುಷ್ಟ ಅತ್ಯಾಚಾರವೆಸಗಿದ್ದಾನೆ. ಬೆಂಗಳೂರಿನ ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಮೇಡಹಳ್ಳಿಯಲ್ಲಿ ಪೈಶಾಚಿಕ ಕೃತ್ಯ ನಡೆದಿದೆ.

ಪಶ್ಚಿಮ ಬಂಗಾಳ‌ ಮೂಲದ ಮಮಜನ್ ಎಂಬಾತನಿಂದ ಈ ಕೃತ್ಯ ನಡೆದಿದೆ. ಸಂತ್ರಸ್ತ ಬಾಲಕಿ‌ ಕುಟುಂಬ ಹಾಗೂ ಆರೋಪಿ ಒಂದೇ ಏರಿಯಾದಲ್ಲಿ ವಾಸವಾಗಿದ್ದರು. ಬಾಲಕಿ ತಂದೆ ಹಾಲು ತರಲು ಹೊರಗೆ ಹೋಗಿದ್ದರು. ಈ ವೇಳೆ ಬಾಲಕಿ ಮನೆಯಲ್ಲಿ ಒಬ್ಬಂಟಿಯಾಗಿದ್ದಳು. ಯಾರು ಇಲ್ಲದಿರುವುದು ತಿಳಿಯುತ್ತಿದ್ದಂತೆ ದುಷ್ಟ ಮಮಜನ್‌ ಮನೆಯೊಳಗೆ ನುಗ್ಗಿ ಬಾಲಕಿ‌ ಮೇಲೆ ಲೈಂಗಿಕ‌ ದೌರ್ಜನ್ಯವೆಸಗಿದ್ದಾನೆ.

ಪೋಷಕರು ಮನೆಗೆ ವಾಪಸ್‌ ಬಂದಾಗ ಕಾಮುಕನ ಪೈಶಾಚಿಕ ಕೃತ್ಯದಿಂದ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಕಂಡು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಗ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಸಂತ್ರಸ್ತೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪೋಕ್ಸೋ ಪ್ರಕರಣವನ್ನು ದಾಖಲಿಸಿಕೊಂಡಿರುವ ಕೆ.ಆರ್. ಪುರಂ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Road Accident : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ; ಒಂದೇ ಕುಟುಂಬದ ಇಬ್ಬರು ಸಾವು, ಮೂವರು ಗಂಭೀರ

ಸ್ಕೂಲ್‌ ಹುಡುಗಿಗೆ ಬೆದರಿಸಿ ರೂಮಿಗೆ ಕರೆದೊಯ್ಯುತ್ತಿದ್ದ ಯುವಕನನ್ನು ಹಿಡಿದ ಬಜರಂಗ ದಳ

ಬೀದರ್: ಖಾಸಗಿ ಫೋಟೊಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡುತ್ತೇನೆ ಎಂದು ಶಾಲಾ ವಿದ್ಯಾರ್ಥಿನಿಯನ್ನು ಬೆದರಿಸಿ ಲೈಂಗಿಕ ದೌರ್ಜನ್ಯ (Physical Abuse) ನಡೆಸಿರುವ ಘಟನೆ ನಡೆದಿದೆ. ಗಡಿಜಿಲ್ಲೆ ಬೀದರ್‌ನಲ್ಲಿ ಅನ್ಯಕೋಮಿನ ಯುವಕನಿಂದ ಅತ್ಯಾಚಾರ ಆರೋಪವೊಂದು ಕೇಳಿ ಬಂದಿದೆ. ಅಶ್ಲೀಲ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು ವಿದ್ಯಾರ್ಥಿನಿಗೆ ಬೆದರಿಸಿ ಅತ್ಯಾಚಾರವೆಸಗಿದ್ದಾನೆ. ಈ ಸಂಬಂಧ ಬೀದರ್ ನಗರದ ಮಹಿಳಾ ಠಾಣೆಯಲ್ಲಿ ವಿದ್ಯಾರ್ಥಿನಿಯ ತಾಯಿ ದೂರು ನೀಡಿದ್ದಾರೆ.

ಲಾಯಕ್ ಅಲಿ (20) ಬಂಧಿತ ಯುವಕ. ಲಾಯಕ್ ಅಲಿ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿನಿ ಹಿಂದೆ ಬಿದ್ದಿದ್ದ. 9ನೇ ತರಗತಿ ವಿದ್ಯಾರ್ಥಿನಿಗೆ ಪ್ರೀತಿಸುತ್ತೇನೆ ಎಂದು ನಂಬಿಸಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ. ಶಾಲೆ ಮುಗಿಸಿ ವಿದ್ಯಾರ್ಥಿನಿ ಮನೆಗೆ ತೆರಳುತ್ತಿದ್ದಳು. ಈ ವೇಳೆ ಬೈಕ್‌ನಲ್ಲಿ ಬಂದ ಲಾಯಕ್‌ ಅಲಿ ತನ್ನ ಬಾಡಿಗೆ ಮನೆಗೆ ಕರೆದೊಯ್ಯುತ್ತಿದ್ದ. ಈ ವಿಚಾರ ತಿಳಿದ ಬಜರಂಗ ದಳ ಕಾರ್ಯಕರ್ತರು ಯುವಕನನ್ನು ವಿಚಾರಿಸಿದಾಗ ಬ್ಲ್ಯಾಕ್‌ಮೇಲ್‌ ವಿಷಯ ಹೊರಬಿದ್ದಿದೆ. ಕೂಡಲೇ ಯುವಕನನ್ನು ಹಿಡಿದು, ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ.

Physical Abuse

ನಂತರ ಪೊಲೀಸರಿಗೆ ಮಾಹಿತಿ ನೀಡಿ ಕಾರ್ಯಕರ್ತರು ಇಬ್ಬರನ್ನು ಠಾಣೆಗೆ ಒಪ್ಪಿಸಿದ್ದಾರೆ. ಸದ್ಯ ವಿಚಾರಣೆ ವೇಳೆ ಲಾಯಕ್‌ ಅಲಿ ತನಗೆ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು ಬೆದರಿಸಿದ್ದ. ಹೀಗಾಗಿ ಭಯ ಪಟ್ಟು ನಾನು ತಾನೊಟ್ಟಿಗೆ ಹೋಗಿದ್ದೇನೆ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾಳೆ. ಸದ್ಯ ಆರೋಪಿ ಲಾಯಕ್ ಅಲಿ ವಿರುದ್ಧ ಮಹಿಳಾ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Mysuru News : ಗ್ರಾಮಸ್ಥರ ಬಹಿಷ್ಕಾರ; ಮಗನ ಅಂತ್ಯಕ್ರಿಯೆಗೆ ನಕಾರ, ಸ್ಕೂಟರ್‌ನಲ್ಲಿ ಶವದೊಂದಿಗೆ ಅಲೆದಾಟ

ಗರ್ಭಿಣಿಯನ್ನು ಮಂಚಕ್ಕೆ ಕಟ್ಟಿ ಬೆಂಕಿ ಹಚ್ಚಿದ ದುರುಳ ಪತಿ; ನರಳಿ ಜೀವ ಬಿಟ್ಟ ಮಹಿಳೆ

ಚಂಡೀಗಢ: ಪತ್ನಿ ಗರ್ಭಿಣಿ ಎಂಬ ಸುದ್ದಿ ತಿಳಿಯುತ್ತಲೇ ಪತಿಯಾದವನು ಹೆಚ್ಚು ಖುಷಿ ಪಡುತ್ತಾನೆ. ಆಕೆಯು ಮಗುವಿಗೆ ಜನ್ಮ ನೀಡುವವರೆಗೆ ಆಕೆಯನ್ನೇ ಮಗುವಿನಂತೆ ನೋಡಿಕೊಳ್ಳುತ್ತಾನೆ. ಪತ್ನಿಯ ಬಯಕೆಗಳನ್ನು ಈಡೇರಿಸುತ್ತಾನೆ. ಆದರೆ, ಪಂಜಾಬ್‌ನಲ್ಲಿ (Punjab) ದುರುಳ ಪತಿಯೊಬ್ಬ 6 ತಿಂಗಳ ಗರ್ಭಿಣಿಯಾಗಿರುವ (Pregnant Woman) ತನ್ನ ಪತ್ನಿಯನ್ನೇ ಮಂಚಕ್ಕೆ ಕಟ್ಟಿಹಾಕಿ ಬೆಂಕಿ ಹಚ್ಚಿದ್ದಾನೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಮಹಿಳೆಯು ನರಳಿ ನರಳಿ ಜೀವ ಬಿಟ್ಟಿದ್ದಾರೆ.

ಅಮೃತಸರ ನಗರದ ಬಳಿಯ ಬುಳೇದ್‌ ನಂಗಲ್‌ ಎಂಬ ಗ್ರಾಮದಲ್ಲಿ ಶುಕ್ರವಾರ (ಏಪ್ರಿಲ್‌ 19) ಗಂಡ-ಹೆಂಡತಿ ಮಧ್ಯೆ ಜಗಳ ನಡೆದಿದೆ. ಗರ್ಭಿಣಿ ಎಂಬುದನ್ನೂ ಲೆಕ್ಕಿಸದೆ ಬೈಯಲು ಶುರು ಮಾಡಿದ, ಕೆಟ್ಟ ಪದಗಳಿಂದ ನಿಂದಿಸಿದ ಕಾರಣ ಪತಿಯ ವಿರುದ್ಧ ಮಹಿಳೆಯು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತಿ ಎದುರು ಉತ್ತರ ಕೊಟ್ಟಿದ್ದಕ್ಕೆ ಕುಪಿತಗೊಂಡ ದುಷ್ಟನು, ಪತ್ನಿಯನ್ನು ಮಂಚಕ್ಕೆ ಕಟ್ಟಿ ಬೆಂಕಿ ಹಚ್ಚಿದ್ದಾನೆ. ಮಹಿಳೆಯನ್ನು ಪಿಂಕಿ ಎಂದು ಗುರುತಿಸಲಾಗಿದೆ. ದುಷ್ಟ ಪತಿಯನ್ನು ಸುಖದೇವ್‌ ಪರಾರಿಯಾಗಿದ್ದಾನೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

“ಕಳೆದ ಕೆಲ ದಿನಗಳಿಂದ ಸುಖದೇವ್‌ ಹಾಗೂ ಪಿಂಕಿ ಮಧ್ಯೆ ಜಗಳಗಳು ನಡೆಯುತ್ತಲೇ ಇದ್ದವು. ಪತ್ನಿ ಗರ್ಭಿಣಿ ಎಂಬುದನ್ನೂ ಲೆಕ್ಕಿಸದೆ ಆಕೆಯ ಜತೆ ಸುಖದೇವ್‌ ಜಗಳಕ್ಕಿಳಿಯುತ್ತಿದ್ದ. ಶುಕ್ರವಾರ ಇಬ್ಬರ ಮಧ್ಯೆ ಜೋರು ವಾಗ್ವಾದ ನಡೆದಿದೆ. ಇದೇ ವೇಳೆ ಕುಪಿತಗೊಂಡಿದ್ದ ಸುಖದೇವ್‌, ಪಿಂಕಿಯನ್ನು ಮಂಚಕ್ಕೆ ಕಟ್ಟಿ ಬೆಂಕಿ ಹಚ್ಚಿದ್ದಾನೆ. ಅಗ್ನಿಯ ಕೆನ್ನಾಲಗೆಗೆ ಸಿಲುಕಿದ ಪಿಂಕಿಯು ಸ್ಥಳದಲ್ಲೇ ಮೃತಪಟ್ಟಿದ್ದಾರೆ” ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಸುಖದೇವ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ವರದಿ ಕೇಳಿದ ಮಹಿಳಾ ಆಯೋಗ

ಗರ್ಭಿಣಿಯನ್ನು ಬೆಂಕಿ ಹಚ್ಚಿ ಕೊಂದ ಪ್ರಕರಣದ ಕುರಿತು ಪೊಲೀಸರು ವರದಿ ನೀಡಬೇಕು ಎಂಬುದಾಗಿ ರಾಷ್ಟ್ರೀಯ ಮಹಿಳಾ ಆಯೋಗ (NCW) ಸೂಚಿಸಿದೆ. “ಗರ್ಭಿಣಿಯನ್ನು ಮಂಚಕ್ಕೆ ಕಟ್ಟಿ, ಬೆಂಕಿ ಹಚ್ಚಿದ ಪ್ರಕರಣವು ಖಂಡನೀಯವಾಗಿದೆ. ಇಂತಹ ಪ್ರಕರಣಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಈ ಕುರಿತು ಪಂಜಾಬ್‌ ಡಿಜಿಪಿಗೆ ಪತ್ರ ಬರೆದಿದ್ದು, ಕೂಡಲೇ ದುಷ್ಟನನ್ನು ಬಂಧಿಸಬೇಕು ಎಂಬುದಾಗಿ ಸೂಚಿಸಿದ್ದಾರೆ. ಹಾಗೆಯೇ, ಮೂರು ದಿನಗಳಲ್ಲಿ ಪ್ರಕರಣದ ಕುರಿತು ವರದಿ ನೀಡಬೇಕು ಎಂಬುದಾಗಿ ಸೂಚಿಸಿದ್ದಾರೆ” ಎಂದು ಮಹಿಳಾ ಆಯೋಗ ಪೋಸ್ಟ್‌ ಮಾಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version