ಬೆಂಗಳೂರು: ಸಾರ್ವಜನಿಕ ಜಾಗದಲ್ಲೇ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಅದರಲ್ಲೂ ಸೇಫ್ ಸಿಟಿ ಬೆಂಗಳೂರಲ್ಲೇ ಯುವತಿಯೊಬ್ಬಳು ಲೈಂಗಿಕ ದೌರ್ಜನ್ಯಕ್ಕೆ (Assault case) ಒಳಗಾಗಿದ್ದಾಳೆ. ಗೆಳೆಯನೊಂದಿಗೆ ಯುವತಿಯೊಬ್ಬಳು ಕಸ ಬಿಸಾಡಲು ಹೋದಾಗ, ನಾಲ್ವರು ಹುಡುಗರು ಮೈ-ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಕೋರಮಂಗಲ ಪಾಸ್ ಪೋರ್ಟ್ ಕಚೇರಿ ಸಮೀಪದಲ್ಲಿ (Physical Assault) ಈ ಘಟನೆ ನಡೆದಿದೆ.
ಯುವಕ-ಯುವತಿಯನ್ನು ಕಂಡ ನಾಲ್ವರು ಪುಂಡರು ರೇಗಿಸಲು ಶುರು ಮಾಡಿದ್ದಾರೆ. ನಂತರ ಏಕಾಏಕಿ ಯುವತಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ. ಈ ವೇಳೆ ಯುವತಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಆಕೆಯ ಮುಖಕ್ಕೆ ಪಂಚ್ ಮಾಡಿದ್ದಾರೆ. ಇದನ್ನೂ ತಡೆಯಲು ಹೋದ ಪ್ರಿಯಕರನ ಮೇಲೆ ಮರದ ತುಂಡಿನಿಂದ ಹಲ್ಲೆ ಮಾಡಿದ್ದಾರೆ.
ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿ ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರ್ಯಾಚರಣೆ ನಡೆಸಿ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಬಂಧಿತರೆಲ್ಲರೂ ಅಪ್ರಾಪ್ತರೆಂದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: Road Accident : ಅತಿ ವೇಗ ತಂದ ಆಪತ್ತು; ಬೆಂಗಳೂರಲ್ಲಿ ಬಸ್ ಹರಿದು ಬೈಕ್ ಸವಾರ ಸಾವು
ಎಚ್‌ಒಡಿಗೇ ಲೈಂಗಿಕ ಕಿರುಕುಳ ನೀಡ್ತಿದ್ದಾನೆ ಈ ಡಾಕ್ಟರ್
ಬೆಂಗಳೂರು: ಸಾಮಾನ್ಯವಾಗಿ ಸೀನಿಯರ್ ಅಧಿಕಾರಿಗಳು ಹೊಸದಾಗಿ ಕೆಲಸಕ್ಕೆ ಸೇರಿದ ಹೆಣ್ಮಕ್ಕಳನ್ನು ಪುಸಲಾಯಿಸುವುದು, ಬಳಸಿಕೊಳ್ಳಲು ಯತ್ನಿಸುವುದು, ಲೈಂಗಿಕ ಕಿರುಕುಳ ನೀಡುವುದರ ಬಗ್ಗೆ ದೂರುಗಳು ದಾಖಲಾಗುತ್ತವೆ. ಆದರೆ, ಇನ್ನೊಬ್ಬ ಜೂನಿಯರ್ ಸಿಬ್ಬಂದಿ (Junior Doctor Harass Senior) ತನ್ನ ವಿಭಾಗದ ಮುಖ್ಯಸ್ಥರಾಗಿರುವ ಮಹಿಳೆಗೇ ಲೈಂಗಿಕ ಕಿರುಕುಳ (Physical Abuse) ನೀಡುತ್ತಿದ್ದಾನಂತೆ.
ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಕಾಲೇಜು (Kempegowda Institute of Medical sciences-KIMS) ನಲ್ಲಿ ಇಂಥ ಘಟನೆಯೊಂದು ನಡೆದಿರುವ ಗಂಭೀರ ಆಪಾದನೆ ಕೇಳಿಬಂದಿದೆ. ಫಾರ್ಮಾ ಕಾಗ್ನಸಿ ವಿಭಾಗದ ಮುಖ್ಯಸ್ಥೆಯಾಗಿರುವ ಮಹಿಳಾ ಡಾಕ್ಟರ್‌ಗೆ (Woman Doctor) ಅದೇ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಡಾ. ರಾಜು ಎಂಬುವವರು ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ದಾಖಲಾಗಿದೆ.
ನನ್ನ ಜೂನಿಯರ್ ಆಗಿರುವ ಡಾ. ರಾಜು ನನ್ನ ಬಗ್ಗೆ ಕೆಟ್ಟ ಮಾತುಗಳನ್ನು ಆಡಿಕೊಂಡು ಬರುತ್ತಿದ್ದಾನೆ. ನನ್ನನ್ನು ಫಾಲೋ ಮಾಡ್ತಾನೆ, ಮೈಕೈ ಮುಟ್ಟಿ ಕಿರುಕುಳ ನೀಡುತ್ತಾನೆ ಎಂದು ಕಿಮ್ಸ್ ವೈದ್ಯೆ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಒಬ್ಬ ಜೂನಿಯರ್ ಡಾಕ್ಟರ್ ನಿಜಕ್ಕೂ ಹಿರಿಯ ಮಹಿಳಾ ವೈದ್ಯೆಯ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎನ್ನುವುದು ಭಯಾನಕ ವಿಚಾರವಾಗಿದೆ. ಇಂಥ ಪವರ್ ಫುಲ್ ಹುದ್ದೆಗಳಲ್ಲಿ ಇರುವ ಮಹಿಳೆಯರೇ ಈ ರೀತಿ ಹಿಂಸೆಗೆ ಒಳಗಾದರೆ ಉಳಿದವರ ಪಾಡೇನು ಎಂಬ ಪ್ರಶ್ನೆ ಇದೆ. ಅದೇ ಹೊತ್ತಿಗೆ ಇದು ನಿಜವಾದ ಪ್ರಕರಣವೋ ಅಥವಾ ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ ಎಂಬ ಕಾರಣಕ್ಕೆ ನೀಡಿದ ದೂರಾಗಿರಬಹುದಾ ಎಂಬ ಸಂಶಯವೂ ಇದೆ. ಹೀಗಾಗಿ ಪೊಲೀಸರು ಎರಡೂ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ