Site icon Vistara News

Pink Bus for Women: ಫ್ರೀ ಬಸ್‌ ಬಳಿಕ ಇನ್ನೊಂದು ಆಫರ್ ; ಬರಲಿದೆ Ladies only ಪಿಂಕ್‌ ಬಸ್‌

Pink Bus for Women

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ (Karnataka Government) ಶಕ್ತಿ ಯೋಜನೆ (Shakti Scheme) ಎಲ್ಲ ಹೆಣ್ಮಕ್ಕಳಿಗೆ ಸಖತ್‌ ಪ್ರಿಯವಾಗಿದೆ. ಇದನ್ನು ಬಳಸಿಕೊಂಡು ಅವರು ಎಲ್ಲೆಡೆ ಸುತ್ತಾಡುವುದರ ಜತೆಗೆ, ನಿತ್ಯ ಪ್ರಯಾಣದ ಖರ್ಚಿನಲ್ಲಿ ಸಾಕಷ್ಟು ಹಣ ಉಳಿತಾಯ ಮಾಡುತ್ತಿದ್ದಾರೆ. ಇದರ ನಡುವೆಯೇ ರಾಜ್ಯ ಸರ್ಕಾರ ಮಹಿಳೆಯರಿಗೆ ವಿಶೇಷವಾದ ಇನ್ನೊಂದು ಕೊಡುಗೆ ನೀಡಲು ಮುಂದಾಗಿದೆ. ಅದುವೇ ಸ್ಪೆಷಲ್‌ ಮಹಿಳಾ ಬಸ್‌ (Special women Bus). ಅಂದರೆ ಸ್ಪೆಷಲ್‌ ಪಿಂಕ್‌ ಬಸ್‌ (Pink Bus for Women). ಅಂದರೆ ಮಹಿಳೆಯರು ಮಾತ್ರ ಪ್ರಯಾಣಿಸಲು ಅನುಕೂಲ ಇರುವ ವಿಶೇಷ ಬಸ್‌ಗಳನ್ನು ಸರ್ಕಾರ ರಸ್ತೆಗೆ ಇಳಿಸಲು ನಿರ್ಧರಿಸಿದೆ.

ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಮಾಣವೂ ಹೆಚ್ಚಾಗಿದೆ. ಇತ್ತೀಚಿನ ಲೆಕ್ಕಾಚಾರದ ಪ್ರಕಾರ, ನಾಲ್ಕೂ ನಿಗಮಗಳ ಬಸ್‌ಗಳಲ್ಲಿ ಒಟ್ಟಾರೆ 259 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಇದು ಹಿಂದಿಗಿಂತ ಹೆಚ್ಚು ಎನ್ನುವುದು ನಿಜವಾದರೂ ಹಿಂದೆ ಮಹಿಳೆಯರು ಮತ್ತು ಪುರುಷರು ಎಂದು ಪ್ರತ್ಯೇಕಗೊಳಿಸದ ಹಿನ್ನೆಲೆಯಲ್ಲಿ ಅಂಕಿ ಅಂಶಗಳು ಲಭ್ಯವಿಲ್ಲ.

ರಾಜ್ಯದಲ್ಲಿ ಪ್ರತಿದಿನ 60 ರಿಂದ 63 ಲಕ್ಷ ಮಹಿಳೆಯರು ಉಚಿತ ಬಸ್ ಯೋಜನೆಯ ಪ್ರಯೋಜನ ಪಡೆಯುತ್ತಿದ್ದು, ಎಲ್ಲ ಸರ್ಕಾರಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರು ತುಂಬಿ ತುಳುಕುತ್ತಿದ್ದಾರೆ. ಹೀಗಾಗಿ ಅವರಿಗಾಗಿಯೇ ವಿಶೇಷ ಮಹಿಳಾ ಸ್ಪೆಷಲ್‌ ಬಸ್‌ಗಳನ್ನು ‌ ಆರಂಭಿಸಲು ಚಿಂತನೆ ನಡೆದಿದೆ. ರಾಜ್ಯಾದ್ಯಂತ ಈ ರೀತಿ ಬಸ್‌ ಆರಂಭಿಸುವ ಮುನ್ನ ಪ್ರಾಯೋಗಿಕವಾಗಿ ಬಿಎಂಟಿಸಿಯಲ್ಲಿ ಸ್ಪೆಷಲ್‌ ಬಸ್‌ ಗಳು ಓಡಾಡಲಿವೆ.

Pink Bus for Women in Bangalore

ಮಹಿಳಾ ಬಸ್‌ಗಳ ಆರಂಭಕ್ಕೆ ಇನ್ನೊಂದು ಕಾರಣವೂ ಇದೆ. ಅದೇನೆಂದರೆ, ಸರ್ಕಾರಿ ಬಸ್‌ಗಳಲ್ಲಿ ಜನದಟ್ಟಣೆ ವಿಪರೀತವಾಗಿರುವುದರಿಂದ ಅಲ್ಲಿ ಹೆಣ್ಮಕ್ಕಳಿಗೆ ಸಿಕ್ಕಾಪಟ್ಟೆ ಕಿರುಕುಳ ನಡೆಯುತ್ತಿರುವ ಆರೋಪಗಳೂ ಕೇಳಿಬರುತ್ತಿವೆ. ಇದನ್ನು ಹೇಳಲೂ ಆಗದೆ, ಸಹಿಸಲೂ ಆಗದೆ ಹೆಣ್ಮಕ್ಕಳು ಕಷ್ಟಪಡುತ್ತಿದ್ದಾರೆ. ಬಿಎಂಟಿಸಿ ಬಸ್‌ಗಳಲ್ಲಿ ಕೆಲವು ಪಡ್ಡೆ ಹುಡುಗರು ತಾವೇ ಒತ್ತಡ ಸೃಷ್ಟಿ ಮಾಡಿ ಹೆಣ್ಮಕ್ಕಳ ಮೈಮೇಲೆ ಬೀಳುವುದು, ಅವರ ದೇಹವನ್ನು ಸ್ಪರ್ಶಿಸುವುದೇ ಮೊದಲಾದ ಕೃತ್ಯಗಳನ್ನು ನಡೆಸುತ್ತಾರೆ. ಇವುಗಳನ್ನು ತಡೆಯುವ ನಿಟ್ಟಿನಲ್ಲಿಯೂ ಈ ಯೋಜನೆ ಜಾರಿಗೆ ಬರಲಿದೆ ಎನ್ನಲಾಗಿದೆ.

ನಿಜವೆಂದರೆ, ಹಿಂದೆ ಬಿಎಂಟಿಸಿಯಲ್ಲಿ ಸ್ಪೆಷಲ್‌ ಮಹಿಳಾ ಬಸ್‌ಗಳು ಇದ್ದವು. ಆದರೆ, ಕಾಲಕ್ರಮೇಣ ಅವುಗಳ ಬೇಡಿಕೆ ಕಡಿಮೆಯಾಯಿತು. ಈಗ ಹೆಚ್ಚಿನ ಬಸ್‌ಗಳಲ್ಲಿ ಮಹಿಳೆಯರು ತುಂಬಿ ತುಳುಕುತ್ತಿರುವುದರಿಂದ ಈಗ ಬೇಡಿಕೆ ಹೆಚ್ಚಾಗಿದೆ. ಅದಕ್ಕಾಗಿಯೇ ವಿಶೇಷ ಬಸ್‌ ಯೋಜನೆ ಜಾರಿಗೆ ಬರಲಿದೆ.

ಇದನ್ನೂ ಓದಿ: Shakti Scheme : ಫ್ರೀ ಬಸ್‌ನಲ್ಲಿ ಮುಂದುವರಿದ ಹೊಡಿಬಡಿ; ಹೆಣ್ಮಕ್ಕಳ ಚಪ್ಪಲಿ ಫೈಟಿಂಗ್‌ ನೋಡಿ

1000 ಬಸ್‌ ಬರಲಿದೆ, ಅದರಲ್ಲಿ ಕೆಲವು ಪಿಂಕ್‌ ಬಸ್‌

ಬಿಎಂಟಿಸಿ ಈ ವರ್ಷದಲ್ಲಿ 1 ಸಾವಿರಕ್ಕೂ ಹೆಚ್ಚಿನ ಬಸ್‌ಗಳನ್ನು ಖರೀದಿ ಮತ್ತು ಜಿಸಿಸಿ ಆಧಾರದಲ್ಲಿ ಪಡೆಯಲು ಮುಂದಾಗಿದೆ. ಅವುಗಳಲ್ಲಿ ಕೆಲವು ಬಸ್‌ಗಳನ್ನು ಪಿಂಕ್ ಬಸ್‌ಗಳನ್ನಾಗಿ ಮಾಡಿ ಅವುಗಳನ್ನು ಮಹಿಳಾ ಪ್ರಯಾಣಿಕರಿಗಾಗಿಯೇ ಮೀಸಲಿಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದು ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಅಧಿಕಾರಿಗಳು ಸಭೆ ನಡೆಸಿ ಪ್ರಸ್ತಾವನೆ ಸಿದ್ಧಪಡಿಸಿ ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿ ಒಪ್ಪಿಗೆ ಪಡೆಯಬೇಕಿದೆ ಎನ್ನುತ್ತಾರೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು. ದೇಶದಲ್ಲಿ ಪಿಂಕ್‌ ಬಸ್‌ ವ್ಯವಸ್ಥೆ ಹಲವು ನಗರಗಳಲ್ಲಿ ಜಾರಿಯಲ್ಲಿವೆ.

Exit mobile version