Site icon Vistara News

Railway Projects : ರಾಜ್ಯದಲ್ಲಿ ರೈಲ್ವೆ ಕ್ರಾಂತಿಗೆ ಮುನ್ನುಡಿ ಬರೆದ ಮೋದಿ,‌ 15 ನಿಲ್ದಾಣ ಮೇಲ್ದರ್ಜೆಗೆ

Railway projects Narendra Modi

ಬೆಂಗಳೂರು: 41 ಸಾವಿರ ಕೋಟಿ ರೂ. ವೆಚ್ಚದ 2000 ರೈಲ್ವೆ ಪ್ರಾಜೆಕ್ಟ್‌ಗಳನ್ನು (2000 Railway Projects) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೋಮವಾರ ವರ್ಚ್ಯುವಲ್‌ ಆಗಿ ಲೋಕಾರ್ಪಣೆ ಮಾಡಿದರು. ಇದರಲ್ಲಿ ಕರ್ನಾಟಕದ 15 ರೈಲು ನಿಲ್ದಾಣಗಳ ಪುನರುತ್ಥಾನ, ಉನ್ನತೀಕರಣ (Upgrading Railway station), ಹಲವು ಸೌಕರ್ಯಗಳನ್ನು ಒದಗಿಸುವ ಪ್ಲ್ಯಾನ್‌ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು 27 ರಾಜ್ಯಗಳಲ್ಲಿ 300ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 554 ರೈಲು ನಿಲ್ದಾಣಗಳ ಮರು ಅಭಿವೃದ್ಧಿಗೆ (Railway Projects) ಅಡಿಪಾಯ ಹಾಕಿದರು.

ಅಮೃತ್‌ ಭಾರತ್‌ ಸ್ಟೇಷನ್‌ ಯೋಜನೆಯಡಿ ನೈರುತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ 367.24 ಕೋಟಿ ರೂ.ವೆಚ್ಚದ ಕಾಮಗಾರಿ ನಡೆಯಲಿದ್ದರೆ, ನೈರುತ್ಯ ರೈಲ್ವೆ ವಿಭಾಗದಲ್ಲಿ 12 ರೈಲ್ವೆ ನಿಲ್ದಾಣಗಳ ಉನ್ನತೀಕರಣ ಹಾಗೂ ರೈಲ್ವೆ ಮಾರ್ಗದಲ್ಲಿ ಕೆಳ ಸೇತುವೆ ನಿರ್ಮಾಣಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.

ನೈರುತ್ಯ ರೈಲ್ವೆ ವಿಭಾಗದಲ್ಲಿ 12 ರೈಲ್ವೆ ನಿಲ್ದಾಣಗಳ ಉನ್ನತೀಕರಣ ಹಾಗೂ ರೈಲ್ವೆ ಮಾರ್ಗದಲ್ಲಿ ಕೆಳ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ 12 ಮೇಲ್ಸೇತುವೆ ಹಾಗೂ ಕೆಳಸೇತುವೆಯನ್ನು ಪ್ರಧಾನಿ ಉದ್ಘಾಟಿಸಿದರು.

ಬೆಂಗಳೂರು ರೈಲ್ವೆ ವಲಯದಲ್ಲಿ ಮೇಲ್ದರ್ಜೆಗೇರಿದ ನಿಲ್ದಾಣಗಳು

ಕೆ.ಆರ್‌. ಪುರ 21.1 ಕೋಟಿ ರೂ., ಕೆಂಗೇರಿ 21 ಕೋಟಿ ರೂ., ಮಲ್ಲೇಶ್ವರ 20 ಕೋಟಿ ರೂ., ಮತ್ತು ವೈಟ್‌ಫೀಲ್ಡ್‌ 23.3 ಕೋಟಿ ರೂ., ಬಂಗಾರಪೇಟೆ ನಿಲ್ದಾಣ 21.5 ಕೋಟಿ ರೂ., ಚನ್ನಪಟ್ಟಣ 20.9 ಕೋಟಿ ರೂ., ಧರ್ಮಪುರಿ 25.4 ಕೋಟಿ ರೂ., ದೊಡ್ಡಬಳ್ಳಾಪುರ 21.3 ಕೋಟಿ ರೂ., ಹಿಂದೂಪುರ 23.9 ಕೋಟಿ ರೂ., ಹೊಸೂರು 22.3 ಕೋಟಿ ರೂ., ಕುಪ್ಪಂ 17.5 ಕೋಟಿ ರೂ., ಮಾಲೂಧಿರು 20.4 ಕೋಟಿ ರೂ. , ಮಂಡ್ಯ 20.1 ಕೋಟಿ ರೂ., ರಾಮನಗರ 21 ಕೋಟಿ ರೂ. ಮತ್ತು ತುಮಕೂರು ನಿಲ್ದಾಣವನ್ನು 21.1 ಕೋಟಿ ರೂ. ಅನುದಾನದಲ್ಲಿ ಮರು ನಿರ್ಮಾಣ.

ಇದನ್ನೂ ಓದಿ : PM Narendra Modi: 2000 ರೈಲ್ವೆ ಪ್ರಾಜೆಕ್ಟ್‌ಗಳಿಗೆ ಪಿಎಂ ಚಾಲನೆ; ಜೂನ್‌ನಿಂದ 3ನೇ ಅವಧಿಗೆ ಸರ್ಕಾರ ಎಂದ ಮೋದಿ

ಬೆಂಗಳೂರು ನಗರದ ನಗರದ ಯಾವ್ಯಾವ ನಿಲ್ದಾಣ ಪುನರ್‌ನಿರ್ಮಾಣ ?

ಕೆ.ಆರ್‌. ಪುರ -21.1 ಕೋಟಿ ರೂ.
ಕೆಂಗೇರಿ – 21 ಕೋಟಿ ರೂ.
ಮಲ್ಲೇಶ್ವರ – 20 ಕೋಟಿ ರೂ.
ವೈಟ್‌ಫೀಲ್ಡ್‌ – 23.3 ಕೋಟಿ ರೂ.

ಬೊಂಬೆ ಮಾದರಿಯಲ್ಲಿ ಇರಲಿದೆ ಚನ್ನಪಟ್ಟಣ ರೈಲು ನಿಲ್ದಾಣ

ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆ, ಇದೀಗ ಅಮೃತ ಯೋಜನೆಯಡಿ ಚನ್ನಪಟ್ಟಣದ ರೈಲು ನಿಲ್ದಾಣವನ್ನು ಬೊಂಬೆ ಮಾದರಿಯಲ್ಲೇ ಆಧುನೀಕರಣಗೊಳಿಸಲು ಮುಂದಾಗಿದೆ. ಚನ್ನಪಟ್ಟಣ ನಿಲ್ದಾಣವನ್ನು 20.9 ಕೋಟಿ ರೂ. ಅಂದಾಜು ವೆಚ್ಚದಲ್ಲಿಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.

ಚಾಮರಾಜನಗರ ರೈಲು ನಿಲ್ದಾಣ ಅಭಿವೃದ್ಧಿಗೆ ಶಂಕುಸ್ಥಾಪನೆ

ಕರ್ನಾಟಕದ ಕಟ್ಟ ಕಡೆಯ ರೈಲು ನಿಲ್ದಾಣವಾದ ಚಾಮರಾಜನಗರ ರೈಲು ನಿಲ್ದಾಣದ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಚಾಮರಾಜನಗರ ರೈಲು ನಿಲ್ದಾಣ ಅಮೃತ ಭಾರತ ಸ್ಟೇಷನ್ ಯೋಜನೆ ವ್ಯಾಪ್ತಿಗೆ ಸೇರಿದ ಹಿನ್ನೆಲೆಯಲ್ಲಿ, 24.58 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳು ನಡೆಯಲಿವೆ. ಹೊಸ ಬುಕಿಂಗ್ ಆಫೀಸ್, ಮಹಿಳೆಯರಿಗೆ ಹಾಗು ಪುರುಷರಿಗೆ ಪ್ರತ್ಯೇಕ ವೇಯ್ಟಿಂಗ್ ರೂಂ, ಶಿಶುಪಾಲನ ಕೊಠಡಿ, ಪಾರ್ಸೆಲ್ ಆಫೀಸ್‌ಗಳು ಇರಲಿವೆ.

ಕೊಪ್ಪಳ ತಾಲೂಕಿನ ಮುನಿರಾಬಾದ್‌ ರೈಲ್ವೇ ನಿಲ್ವಾಣ

ಕೊಪ್ಪಳ ತಾಲೂಕಿನ ಮುನಿರಾಬಾದ್ ರೈಲ್ವೆ ನಿಲ್ದಾಣವನ್ನು ಅಮೃತ್ ಭಾರತ್ ಸ್ಟೇಷನ್ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಮುನಿರಾಬಾದ್‌ ರಸ್ತೆ ಮೇಲ್ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ವರ್ಚ್ಯುವಲ್‌ ಆಗಿ ನಡೆಯಿತು. ಮುನಿರಾಬಾದನ ಕಾರ್ಯಕ್ರಮದಲ್ಲಿ ಸಂಸದ ಕರಡಿ ಸಂಗಣ್ಣ ಸೇರಿ ರೈಲ್ವೆ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.

ತುಮಕೂರು ರೈಲು ನಿಲ್ದಾಣ ಅಭಿವೃದ್ಧಿ

ತುಮಕೂರು ರೈಲು ನಿಲ್ದಾಣವನ್ನು ಕೇಂದ್ರ ಸರ್ಕಾರದ ಅಮೃತ ಭಾರತ್ ನಿಲ್ದಾಣ ಯೋಜನೆಯಡಿ ಅಭಿವೃದ್ಧಿ ಮಾಡಲಾಗುತ್ತಿದ್ದು, ಇದಕ್ಕೆ 50 ಕೋಟಿ ವೆಚ್ಚ ನಿಗದಿಪಡಿಸಲಾಗಿದೆ.

ರೈಲ್ವೆ ನಿಲ್ದಾಣದಲ್ಲಿ ಸುಸಜ್ಜಿತ ಕಟ್ಟಡ, ವ್ಯವಸ್ಥಿತ ಪ್ಲಾಟ್ ಫಾರಂ, ಶೆಲ್ಟರ್, ಎಸ್ಕಲೇಟರ್‌, ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಆಧುನೀಕರಣ ರೈಲ್ವೆ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಕಾರ್ಯಕ್ರಮದಲ್ಲಿ ಸಂಸದ ಜಿಎಸ್ ಬಸವರಾಜು, ಶಾಸಕರಾದ ಜ್ಯೋತಿ ಗಣೇಶ್, ಸುರೇಶ್ ಗೌಡ, ಹಿರಿಯ ರೈಲ್ವೆ ಅಧಿಕಾರಿಗಳು, ಜಿಲ್ಲಾಧಿಕಾರಿ, ಎಸ್ ಪಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಶಿವಮೊಗ್ಗ ರೈಲು ನಿಲ್ದಾಣ ಉನ್ನತೀಕರಣಕ್ಕೆ ಶಂಕುಸ್ಥಾಪನೆ

ಶಿವಮೊಗ್ಗ ರೈಲ್ವೆ ನಿಲ್ದಾಣದ ಉನ್ನತೀಕರಣ ಕಾಮಗಾರಿಗೆ ಮೋದಿ ಚಾಲನೆ ನೀಡಿದರು. ಶಿವಮೊಗ್ಗ ಸಿಟಿ, ಸಾಗರ, ತಾಳಕೊಪ್ಪ ರೈಲ್ವೆ ನಿಲ್ದಾಣವೂ ಮೇಲ್ದರ್ಜೆಗೇರಲಿದೆ. ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ರಾಘವೇಂದ್ರ ಭಾಗಿಯಾಗಿದ್ದರು.

ಮಂಡ್ಯದ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಹಲವು ಗಣ್ಯರು

ಮಂಡ್ಯ ರೈಲ್ವೆ ನಿಲ್ದಾಣದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಯ ಸ್ಥಳೀಯ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಸಂಸದೆ ಸುಮಲತಾ ಅಂಬರೀಶ್, ಮಂಡ್ಯ ಶಾಸಕ ರವಿಕುಮಾರ್ ಗಣಿಗ ಭಾಗಿಯಾಗಿದ್ದರು.

Exit mobile version