ಬೆಂಗಳೂರು: ನಗರ ಪೊಲೀಸ್ ಇಲಾಖೆಯ ಸಿಬ್ಬಂದಿಯ ಪ್ರಮೋಷನ್, ಟ್ರಾನ್ಸ್‌ಫರ್‌ಗೆ ಕಳೆದ ನಾಲ್ಕು ದಿನಗಳಿಂದ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಆದರೆ ಕೌನ್ಸೆಲಿಂಗ್ ಪ್ರಕ್ರಿಯೆಯಿಂದಾಗಿ ಸಿಬ್ಬಂದಿ ಹೈರಾಣಾಗಿದ್ದಾರೆ.
ಇದನ್ನೂ ಓದಿ : ಪೊಲೀಸರ ವರ್ಗಾವಣೆಗೆ ಹೊಸ ಆದೇಶ ತಂದ ಸರ್ಕಾರ
ಜೂನ್ 27 ರಿಂದ ಎಲ್ಲಾ ಪೊಲೀಸ್ ಠಾಣಾ ವಿಭಾಗಕ್ಕೂ ಒಳಗೊಂಡಂತೆ ಕೌನ್ಸೆಲಿಂಗ್ ನಡೆಯುತ್ತಿದೆ. ಪ್ರತಿದಿನ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸುವುದು, ರಾತ್ರಿಯಿಡಿ ಕಾದು ಬೆಳಗಿನ ಜಾವದಲ್ಲಿ ವಾಪಾಸ್ ಆಗುವುದು. ಇದೇ ನಡೆಯುತ್ತಿದೆ. ಡಿಸಿಪಿ ನಿಶಾ ಜೇಮ್ಸ್ ಅವರು ಕಾನ್ಪರೆನ್ಸ್ ಹಾಲ್‌ನಲ್ಲಿ ಎಲ್ಲಾ ಪೊಲೀಸರನ್ನು ಕೂರಿಸಿ ರಾತ್ರಿಯಿಡಿ ಕೌನ್ಸೆಲಿಂಗ್ ಮಾಡುತ್ತಿರುವುದಕ್ಕೆ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೌನ್ಸೆಲಿಂಗ್ ಮಾಡಿ ಪ್ರಮೋಷನ್ ಕೊಟ್ಟು ಕಿರುಕುಳ
ಐದು ವರ್ಷಗಳಿಂದ ಒಂದೇ ಸ್ಟೇಷನ್‌ನಲ್ಲಿರುವ ಪೊಲೀಸರನ್ನು ವರ್ಗಾವಣೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದೇಶದಂತೆ ಸ್ಟೇಷನ್‌ನ ಹಳೆಯ ಸಿಬ್ಬಂದಿ ವರ್ಗಾವಣೆ ಮಾಡಲಾಗುತ್ತಿದೆ. ಪೊಲೀಸ್ ಕಾನ್ಸ್‌ಟೇಬಲ್‌ನಿಂದ ಹಿಡಿದು ಪಿಎಸ್‌ಐವರೆಗೂ ಟ್ರಾನ್ಸ್‌ಫರ್ ಮಾಡಲಾಗುತ್ತಿದೆ.
ಕೆಲವರಿಗೆ ಇದು ಸರಿ ಎನ್ನಿಸಿದರೆ ಉಳಿದವರು ವಿರೋಧ ವ್ಯಕ್ತಪಡಿಸಿದ್ದಾರೆ. ನಿವೃತ್ತಿ ಅಂಚಿನಲ್ಲಿರುವ ಪೊಲೀಸರಿಗೆ ಪ್ರಮೋಷನ್ ಹಾಗೂ ವರ್ಗಾವಣೆ ಮಾಡುವುದರಿಂದ ಕಚೇರಿ ಹಾಗೂ ಮನೆಗೆ ಓಡಾಡಲು ಕಷ್ಟವಾಗುತ್ತದೆ. ಈ ವಯಸ್ಸಿನಲ್ಲಿ 15-20 ಕಿಲೋಮೀಟರ್ ದೂರ ಇರುವ ಪೊಲೀಸ್ ಠಾಣೆಗೆ ವರ್ಗಾಯಿಸಿದರೆ ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ. ನಿವೃತ್ತಿ ಅಂಚಿನಲ್ಲಿರುವವರಿಗೆ ಪೊಲೀಸ್ ಇಲಾಖೆ ವಿನಾಯಿತಿ ನೀಡುವಂತೆ ಒತ್ತಾಯ ಕೇಳಿ ಬಂದಿದೆ.
ಇದನ್ನೂ ಓದಿ | ಪೊಲೀಸ್ ವರ್ಗಾವಣೆಯಲ್ಲೂ ಲಂಚ : ಬಿಜೆಪಿ ಶಾಸಕನ ಬಾಯಿಂದಲೇ ಹೊರಬಂದ ಸತ್ಯ !