Site icon Vistara News

ಹೋಟೆಲ್ ಕಾರ್ಮಿಕನ ಮೇಲೆ ಸಬ್ ಇನ್ಸ್‌ಪೆಕ್ಟರ್ ಮನಬಂದಂತೆ ಹಲ್ಲೆ

police beats

ಬೆಂಗಳೂರು: ಹೋಟೆಲ್‌ ಮುಚ್ಚಿ ಬಾಗಿಲು ಬಳಿ ನಿಂತಿದ್ದ ಹೋಟೆಲ್‌ ಕಾರ್ಮಿಕನದ ಮೇಲೆ ಜೆಜೆಆರ್ ನಗರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.

ಜೆಜೆಆರ್ ನಗರದ ಸಂಗಮ್ ಹೌಸ್ ಆಫ್ ಕಬಾಬ್ಸ್ ಹೋಟೆಲ್‌ನ ಕಾರ್ಮಿಕ ಸೈಯದ್ ಬಿಲಾಲ್‌ ಎಂಬಾತನ ಮೇಲೆ ಹಲ್ಲೆ ನಡೆದಿದೆ. 10ನೇ ತಾರೀಕು ರಾತ್ರಿ 11.45ಕ್ಕೆ ಘಟನೆ ನಡೆದಿದೆ. ಹೋಟೆಲ್ ಮುಚ್ಚಲು ರಾತ್ರಿ 12 ಗಂಟೆವರೆಗೂ ಸಮಯವಿದೆ. ಆದರೆ 11.45ಕ್ಕೆ ಹೋಟೆಲ್ ಬಾಗಿಲು ಮುಚ್ಚಿ ಡೋರ್ ಬಳಿ ಸೈಯದ್ ಬಿಲಾಲ್ ನಿಂತಿದ್ದ. ಈ ವೇಳೆ ಹೋಟೆಲ್ ಬಳಿ ಬಂದ ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ಲಾಠಿಯಲ್ಲಿ ಹಲ್ಲೆ ನಡೆಸಿದ್ದಾರೆ.

ಕಾರ್ಮಿಕನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಸಬ್ ಇನ್ಸ್‌ಪೆಕ್ಟರ್ ನಡವಳಿಕೆ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಕೆಸಿ ಜನರಲ್‌ ಆಸ್ಪತ್ರೆಯಲ್ಲಿ ಸೈಯದ್‌ ಚಿಕಿತ್ಸೆ ಪಡೆದಿದ್ದು, ಎಸ್‌ಐ ವರ್ತನೆಯ ಬಗ್ಗೆ ಮೇಲಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬ ಕುತೂಹಲವಿದೆ.

ಇದನ್ನೂ ಓದಿ | Bangalore gang war | ಬಾರ್‌ನಲ್ಲಿ ಲಾಂಗ್‌ ಬೀಸಿ ಪುಡಿ ರೌಡಿಗಳ ಅಟ್ಟಹಾಸ, ಇನ್ನೂ ಹಿಡಿಯದ ಪೊಲೀಸರು

Exit mobile version