Site icon Vistara News

Pollution Awareness | ಶಾಲೆಯಲ್ಲಿ ಟೀಚರ್‌ ಆದ ಆರ್‌ಟಿಓ ಅಧಿಕಾರಿಗಳು; ಮಕ್ಕಳಿಗೆ ವಾಯುಮಾಲಿನ್ಯ ನಿಯಂತ್ರಣ ಕುರಿತು ಜಾಗೃತಿ

Pollution Awareness

ಬೆಂಗಳೂರು: ಆರ್‌ಟಿಓ ಅಧಿಕಾರಿಗಳು ಈ ಶಾಲೆಯಲ್ಲಿ ಟೀಚರ್‌ಗಳಾಗಿದ್ದರು. ಮಕ್ಕಳಿಗೆ ವಾಯು ಮಾಲಿನ್ಯದ (Pollution Awareness) ಕುರಿತು ಪಾಠ ಮಾಡಿದರು. ರಾಜಧಾನಿ ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಸಾರಿಗೆ ಇಲಾಖೆ ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಮಕ್ಕಳ ಮೂಲಕವೇ ಜನರಿಗೆ ವಾಯುಮಾಲಿನ್ಯದ ಕುರಿತು ಜಾಗೃತಿ ಮೂಡಿಸಲಾಯಿತು.

ಸಾರಿಗೆ ಇಲಾಖೆಯು ಪ್ರತಿ ವರ್ಷ ನವೆಂಬರ್‌ ತಿಂಗಳಲ್ಲಿ ವಾಹನಗಳಿಂದುಂಟಾಗುವ ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆಯನ್ನು ನಡೆಸುತ್ತಿದೆ. ಬೆಂಗಳೂರು ಪೂರ್ವದ ಕಸ್ತೂರಿ ನಗರ ಆರ್‌ಟಿಓ ಅಧಿಕಾರಿಗಳು ಕೈರಳೀ ನಿಕೇತನ್‌ ಶಾಲೆಯ ಮಕ್ಕಳಿಗೆ ಮಾಲಿನ್ಯ ತಡೆಯೋಣ ಪರಿಸರ ಉಳಿಸೋಣ ಎಂಬ ಘೋಷವಾಕ್ಯದೊಂದಿಗೆ ಜಾಗೃತಿ ಮೂಡಿಸಿದರು.

ಮೋಟಾರು ವಾಹನಗಳ ಸಂಚಾರದಿಂದಾಗಿ ಮತ್ತು ಅವುಗಳು ಹೊರಸೂಸುವ ಹೊಗೆಯಲ್ಲಿ ವಿಷಾನಿಲಗಳಿಂದ ವಾತಾವರಣವೂ ಯಾವ ರೀತಿ ಹಾಳಾಗುತ್ತಿದೆ. ವಾಹನದ ಎಮಿಷನ್‌ ಟೆಸ್ಟ್‌ ಎಷ್ಟು ಮುಖ್ಯ? ವಾಹನ ಚಾಲನೆ ಮಾಡುವಾಗ ಸಂಚಾರಿ ನಿಯಮ ಪಾಲಿಸುವುದು ಸೇರಿದಂತೆ ಹಲವು ವಿಷಯದ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸಿದರು.

ಇದನ್ನೂ ಓದಿ | File Missing | ಸಿಎಂ ಕಚೇರಿಗೆ ಹೋದ ಕಡತ ನಾಪತ್ತೆ! ನಗರಾಭಿವೃದ್ಧಿ ಇಲಾಖೆಯ ಫೈಲ್‌ ನಿಜಕ್ಕೂ ಎಲ್ಲಿ ಹೋಯ್ತು?

Exit mobile version