Site icon Vistara News

Power Cut: ಬೆಂಗಳೂರಿನ ಇಂದು, ನಾಳೆ ಪವರ್‌ ಕಟ್;‌ ಇಲ್ಲೆಲ್ಲ ಕರೆಂಟ್‌ ಇರಲ್ಲ

Power Cut in Bangalore

ಬೆಂಗಳೂರು: ಬೆಂಗಳೂರಿನ ವಿವಿಧ ಕಡೆ ಬುಧವಾರ ಹಾಗೂ ಗುರುವಾರ (ಜ. 24-25) ವಿದ್ಯುತ್‌ ವ್ಯತ್ಯಯ (Power Cut in Bangalore) ಉಂಟಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಹಲವು ಕಡೆ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಪವರ್‌ ಕಟ್‌ (Power Cut) ಮಾಡಲಾಗುತ್ತಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್‌ ವ್ಯತ್ಯಯ ನಡೆಯಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಲಾಗಿದೆ.

ಜನವರಿ 24ರಲ್ಲಿ ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯ?

ಮಲೇಬೆನ್ನೂರು, ಹಾಲಿವಾಣ, ಕುಂಬಳೂರು, ಬೂದಿಹಾಳ, ನಂದಿತಾವರ, ಕೊಕ್ಕನೂರು, ಗೋವಿನಹಾಳ, ಕುಣೆಬೆಳಕೆರೆ, ಹಿಂದೂಘಟ್ಟ, ಕುಮಾರನಹಳ್ಳಿ, ಗುಡ್ಡದಹಳ್ಳಿ, ದೇವರಬೆಳಕೆರೆ, ಮೆಳೆಕಟ್ಟೆ, ಜರಿಕಟ್ಟಿ, ಮುದಹದಡಿ, ಸಾಲಕಟ್ಟಿ, ಕೆ.ಬೇವಿನಹಳ್ಳಿ, ಕಡಲೆಗುಂಡಿ, ಬೂದಿಹಳ್ಳಿ, ಛತ್ರ, ಮಾರಲವಾಡಿ, ಗೋದೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಇದನ್ನೂ ಓದಿ: Hiremagaluru Kannan : ಹೆಚ್ಚುವರಿ ವೇತನ; ಹಿರೇಮಗಳೂರು ಕಣ್ಣನ್ ತಪ್ಪಿಲ್ಲ, ತಹಸೀಲ್ದಾರ್‌ರಿಂದ ಹಣ ವಸೂಲಿ: ಸಿದ್ದರಾಮಯ್ಯ

ಜನವರಿ 25ರಂದು ಎಲ್ಲೆಲ್ಲಿ ಪವರ್‌ ಕಟ್?

ದೊಡ್ಡಬಳ್ಳಾಪುರ ಪಟ್ಟಣ, ರಾಜಘಟ್ಟ, ತಿಪ್ಪೂರು, ರಘುನಾಥಪುರ, ತಲಗವಾರ, ಗಂಡರಾಜಪುರ, ಕೊಣಘಟ್ಟ, ಮುದ್ದನಾಯಕನಪಾಳ್ಯ, ಹನಬೆ, ಎಸ್.ಎಸ್.ಘಾಟಿ, ಅಂತರಹಳ್ಳಿ, ಕಾಂತನಕುಂಟೆ, ನೇರಲಘಟ್ಟ, ಹಾಡೋನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಓಬಳಾಪುರ, ದೊಡ್ಡಬೆಲೆ, ಕೊಡಿಗೆಹಳ್ಳಿ, ಮಣ್ಣೆ ಪಂಚತಿ, ಗೆಡ್ಲಹಳ್ಳಿ, ಕೆರೆಕಾತಿಗನೂರು, ಕೆ. ಕಾಸರಗೋಡು, ಮಹಿಮಾಪುರ, ಲಕ್ಕೇನಹಳ್ಳಿ, ಮೆಳೆಕಾತಿಗನೂರು, ಜಿ.ಜಿ.ಪಾಳ್ಯ, ಕೆ.ಅಗ್ರಹಾರ, ಅರೆಬೊಮ್ಮನಹಳ್ಳಿ, ಕೊಡಗಿ ಬೊಮ್ಮನಹಳ್ಳಿ, ಲಕ್ಕಸಂದ್ರ, ಸುಲ್ಕುಂಟೆ, ಹಲ್ಕೂರು, ತಿಮ್ಮಸಂದ್ರಗಳಲ್ಲಿ ಪವರ್‌ ಕಟ್‌ ಮಾಡುತ್ತಿರುವುದಾಗಿ ಬೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Exit mobile version