Site icon Vistara News

Power Tariff : ರಾಜ್ಯದಲ್ಲಿ ವಿದ್ಯುತ್‌ ದರ ಭಾರಿ ಇಳಿಕೆ; ಗುಡ್‌ ನ್ಯೂಸ್‌ ನೀಡಿದ ಸರ್ಕಾರ!

power tariff hike

ಬೆಂಗಳೂರು: ರಾಜ್ಯದ ಜನತೆಗೆ ವಿದ್ಯುತ್‌ ಶಾಕ್‌ (Electricity Shock) ಖಚಿತವಾಗಿದೆ ಎಂದು ಅಂದುಕೊಳ್ಳುತ್ತಿರುವಾಗಲೇ ರಾಜ್ಯ ಸರ್ಕಾರ ಅಚ್ಚರಿಯ ಗುಡ್‌ ನ್ಯೂಸ್‌ ನೀಡಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (Karnataka Electricity Regulatory Commission) ಫೆ. 28ರಂದು (ಬುಧವಾರ) ವಿದ್ಯುತ್‌ ದರ ಪರಿಷ್ಕರಣೆ (Power Tariff) ಮಾಡಿದ್ದು ವಿದ್ಯುತ್‌ ದರವನ್ನು ಇಳಿಸಿದೆ.

ಎಸ್ಕಾಂ, ಬೆಸ್ಕಾಂಗಳು ನೀಡಿರುವ ದರ ಹೆಚ್ಚಳದ ಆಧಾರದ ಮೇಲೆ ಆಯೋಗವು ದರ ಪರಿಷ್ಕರಣೆಯನ್ನು ಪ್ರಕಟ ಮಾಡಲಿದೆ. ಸಂಜೆ 4 ಗಂಟೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ದರ ಹೆಚ್ಚಳ ಪ್ರಕಟವಾಗಲಿದೆ. ಅದರಲ್ಲಿ ದರ ಹೆಚ್ಚಳದ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ಅಚ್ಚರಿ ಎಂಬಂತೆ ವಿದ್ಯುತ್‌ ದರ ಇಳಿಕೆ ಮಾಡಲಾಗಿದೆ.

ಎಸ್ಕಾಂಗಳಿಗೆ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ವಿದ್ಯುತ್ ದರ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಲೋಕಸಭಾ ಚುನಾವಣೆ ಘೋಷಣೆ ಮುನ್ನವೇ ಹೊಸ ವಿದ್ಯುತ್ ದರ ಪರಿಷ್ಕರಣೆ ನಡೆಸುವುದು ಈ ಬಾರಿಯ ಕೆಆರ್‌ಇಸಿ ಪ್ಲ್ಯಾನ್‌ ಎನ್ನಲಾಗಿತ್ತು. ಆದರೆ, ಈ ಬಾರಿ ಲಾಭವಾಗಿರುವುದರಿಂದ ವಿದ್ಯುತ್‌ ದರ ಇಳಿಸಲಾಗಿದೆ.

ಇದನ್ನೂ ಓದಿ : Three phase power : ರೈತರಿಗೆ ಗುಡ್‌ ನ್ಯೂಸ್‌; ಇನ್ನು ಪ್ರತಿ ದಿನ ಏಳು ತಾಸು ವಿದ್ಯುತ್‌ ಪೂರೈಕೆ

ಗೃಹ ಜ್ಯೋತಿ ವಿದ್ಯುತ್‌ ಷರತ್ತಿನಲ್ಲಿ ಬದಲಾವಣೆ ಇಲ್ಲ

ವಿದ್ಯುತ್‌ ದರ ಪರಿಷ್ಕರಣೆಯಾದರೂ ಗೃಹ ಜ್ಯೋತಿ (Gruha Jyothi) ಉಚಿತ ವಿದ್ಯುತ್‌ ಬಳಕೆದಾರರಿಗೆ ಇದರ ಹೊರೆ ತಟ್ಟುವುದಿಲ್ಲ. ಯಾಕೆಂದರೆ, ಗೃಹಜ್ಯೋತಿಗೆ ಇರುವ ಷರತ್ತುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಗೃಹಜ್ಯೋತಿ ಯೋಜನೆಗೆ ವಾರ್ಷಿಕ ಸರಾಸರಿ ಮಾನದಂಡವಿದೆ. 12 ತಿಂಗಳ ಸರಾಸರಿ ಪಡೆದುಕೊಂಡು ಅದರ ಮೇಲೆ 10 ಯುನಿಟ್‌ ಉಚಿತವಾಗಿ ನೀಡಲಾಗುತ್ತದೆ. ಉದಾಹರಣೆಗೆ, ಕಳೆದ ವರ್ಷ ಸರಾಸರಿ ತಿಂಗಳಿಗೆ 100 ಯೂನಿಟ್ ಬಳಸುತ್ತಿದ್ದವರು ಈಗ 110 ಯೂನಿಟ್ ಬಳಸಿದರೆ ವಿದ್ಯುತ್‌ ಬಿಲ್‌ ಬರುವುದಿಲ್ಲ. ಅದೇ ರೀತಿ ಸರಾಸರಿ ಐವತ್ತು ಯುನಿಟ್‌ ಬಳಸುತ್ತಿದ್ದವರಿಗೆ 60 ಯುನಿಟ್‌ ವರೆಗೆ ಫ್ರೀ ಸಿಗಲಿದೆ. ಹೀಗೆ 200 ಯೂನಿಟ್‌ ವರೆಗೆ ವಿದ್ಯುತ್‌ ಬಳಸುವವರು ಬಿಲ್‌ ಕಟ್ಟುವಂತಿಲ್ಲ. 200 ಯುನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಸುವವರಿಗೆ ಬಿಲ್‌ ಬರುತ್ತದೆ.

Exit mobile version