Site icon Vistara News

Prakash Raj : ಪ್ರಕಾಶ್‌ ರೈ ಒಬ್ಬ ವಿಕೃತ ಮನುಷ್ಯ, ನಿಜ ಜೀವನದಲ್ಲೂ ಖಳ ನಾಯಕ ಎಂದ ಆರ್‌ ಅಶೋಕ್‌

Prakash Raj- Ashok

ಬೆಂಗಳೂರು: ಪ್ರಕಾಶ್ ರೈ (Prakash Raj) ಒಬ್ಬ ವಿಕೃತ ಮನುಷ್ಯ. ಸಿನಿಮಾದಲ್ಲಿ ವಿಲನ್‌ ಪಾರ್ಟ್‌ (Villain in life too) ಮಾಡೋ ಅವನು ಈಗ ಇಸ್ರೊ ವಿಜ್ಞಾನಿಗಳನ್ನು ಟೀಕಿಸಿ ನಿಜವಾಗ್ಲೂ ವಿಲನ್‌ ಆಗಿದ್ದಾನೆ: ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ ಮಾಜಿ ಸಚಿವ ಆರ್‌. ಅಶೋಕ್‌ (R Ashok).

ಚಂದ್ರಯಾನ-3 (Chandrayana-3) ಯೋಜನೆ ಬಗ್ಗೆ ಟ್ವಿಟರ್‌ನಲ್ಲಿ ವ್ಯಂಗ್ಯ ಭರಿತ ಪೋಸ್ಟ್​ ಹಂಚಿಕೊಂಡಿದ್ದ ನಟ ಪ್ರಕಾಶ್​ ರೈ (Prakash Raj) ವಿರುದ್ಧ ಎಲ್ಲೆಡೆ ಟೀಕೆಗಳು ಕೇಳಿಬರುತ್ತಿದ್ದು, ಆರ್‌ ಅಶೋಕ್‌ ಅವರಂತೂ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಲುಂಗಿ ಮತ್ತು ಶರ್ಟ್​​ ಧರಿಸಿದ ವ್ಯಕ್ತಿಯ ಫೋಟೋ ಧರಿಸಿದ್ದ ವ್ಯಕ್ತಿಯೊಬ್ಬರು ಚಂದ್ರ ಲೋಕದಲ್ಲಿ ಚಹಾ ಮಾರುತ್ತಿದ್ದಾರೆ ಎಂಬ ಚಿತ್ರ ಹಂಚಿಕೊಂಡ ನಟ ಪ್ರಕಾಶ್​ ರೈ ಅವರು “#VikramLander ಚಂದ್ರನಿಂದ ಬರುವ ಮೊದಲ ಚಿತ್ರ” ಎಂದು ಶೀರ್ಷಿಕೆಯನ್ನೂ ಕೊಟ್ಟಿದ್ದರು. ಪ್ರಕಾಶ್ ರೈ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರನ್ನು ‘ಚಾಯ್ ವಾಲಾ’ ಎಂದು ಕರೆದಿದ್ದರು. ಜತೆಗೆ ಅವರು ಇಸ್ರೋ ಅಧ್ಯಕ್ಷ ಶಿವನ್ ಅವರಿಗೂ ಹಾಸ್ಯ ಮಾಡಿದ್ದರು. ಇದೆಲ್ಲವನ್ನೂ ಜತೆಯಾಗಿಸಿ ಚಾಯ್‌ವಾಲ್‌ ಪೋಸ್ಟ್‌ ಮಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಪ್ರಕಾಶ್‌ ರೈ ಹಂಚಿಕೊಂಡ ಕಾರ್ಟೂನ್‌ ನಾನು ನೋಡಿದ್ದೇನೆ. ಟೀ ಮಾರುವ ಚಿತ್ರದ ಮೂಲಕ ವಿಜ್ಞಾನಿಗಳನ್ನು ಟೀಕೆ ಮಾಡುವುದನ್ನು ನೋಡಿದ್ರೆ ಇದು ಕೀಳು ಪ್ರವೃತ್ತಿ ಅನಿಸುತ್ತದೆ. ನಾನು ಸಾಕಷ್ಟು ಕಲಾವಿದರನ್ನು ನೋಡಿದ್ದೇನೆ. ಈತನೂ ಸಹ ಕಲಾವಿದನೇ. ಆದರೆ, ಆದರೆ ಡಾ.ರಾಜಕುಮಾರ್, ಪುನೀತ್‌ ರಾಜ್‌ ಕುಮಾರ್‌, ರಜನಿಕಾಂತ್ ಅವರೆಲ್ಲ ಮಹಾನ್‌ ಕಲಾವಿದರು. ಅವರ ನಡೆ ನುಡಿಗಳು ಹೇಗಿದ್ದವು, ಹೇಗಿವೆ ಎಂದು ನೋಡಿದ್ದೆವೆ. ಅವರ ಎದುರು ಇಂಥವರನ್ನೆಲ್ಲ ಕಲಾವಿದ ಅಂತ ಕರೆಯೋಕೇ ಆಗೊಲ್ಲ ಎಂದು ಅಶೋಕ್‌ ಹೇಳಿದರು.

ಪ್ರಕಾಶ್‌ ರೈಗೆ ಬುದ್ಧಿ ಬರಲ್ಲ. ಯಾವಾಗ ಬುದ್ಧಿ ಬರುತ್ತೆ ಅಂತ ಗೊತ್ತಿಲ್ಲ. ಸಿನಿಮಾದಲ್ಲಿ ವಿಲನ್‌ ಪಾತ್ರ ಮಾಡುತ್ತಿರುವ ಈತ ಈಗ ಇಸ್ರೋವನ್ನು ಟೀಕಿಸುವ ಮೂಲಕ ನಿಜ ಜೀವನದಲ್ಲೂ ವಿಲನ್‌, ಖಳನಾಯಕನಾಗಿದ್ದಾನೆ. ಅವನಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ಆಶಿಸುತ್ತೇನೆ ಎಂದರು ಆರ್‌. ಅಶೋಕ್‌.

ಚಂದ್ರಯಾನ -3 ಲ್ಯಾಂಡಿಂಗ್‌ಗೆ ಶುಭ ಕೋರುತ್ತೇನೆ

ನಾಳೆ ನಡೆಯುವ ಚಂದ್ರಯಾನ-3 ಲ್ಯಾಂಡಿಂಗ್‌ಗೆ ಶುಭ ಕೋರುತ್ತೇನೆ. ಆರಂಭದಲ್ಲಿ ತಿರುಪತಿ, ಕುಕ್ಕೆ, ಕಟೀಲು ಸೇರಿದಂತೆ ಎಲ್ಲ ಕಡೆ ಪೂಜೆಗಳು ನಡೆದಿವೆ. ಇಸ್ರೊ ವಿಜ್ಞಾನಿಗಳ ಸಾಹಸಕ್ಕೆ ಭಗವಂತನ ಆಶೀರ್ವಾದ ಇದೆ ಎಂದು ಅಶೋಕ್‌ ಹೇಳಿದರು.

ಇದನ್ನೂ ಓದಿ: Prakash Raj: ಚಂದ್ರಯಾನ-3 ಬಗ್ಗೆ ವ್ಯಂಗ್ಯಭರಿತ ಟ್ವೀಟ್‌ ಮಾಡಿದ ನಟ ಪ್ರಕಾಶ್‌ ರಾಜ್‌ ವಿರುದ್ಧ ದೂರು ದಾಖಲು

ಪ್ರಕಾಶ್ ರೈ ಒಬ್ಬ ವಿಕೃತ ಮನುಷ್ಯ ಪ್ರಕಾಶ್‌ ರೈ ವಿಕೃತ ಮನುಷ್ಯ ಎಂದ ಆರ್‌ ಅಶೋಕ್‌ Prakash Raj Actor Prakash Raj ನಿಜ ಜೀವನದಲ್ಲೂ ವಿಲನ್‌ Villain in life too ಮಾಜಿ ಸಚಿವ ಆರ್‌. ಅಶೋಕ್‌ R Ashok ಚಂದ್ರಯಾನ-3 Chandrayana-3

Exit mobile version