ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದ ಭೂ ಮಾಲಿಕತ್ವ ಕುರಿತ ವಿವಾದ ಇನ್ನೂ ಬಗೆಹರೆದಿಲ್ಲ.
ಇದರ ಮಧ್ಯೆ ಆಗಸ್ಟ್ 15ಕ್ಕೆ ವಕ್ಫ್ ಬೋರ್ಡ್ ನಿಂದ ಸ್ವಾತಂತ್ರ್ಯ ದಿನಾಚರಣೆ ಮಾಡಲು ತಯಾರಿ ನಡೆದಿದೆ.
ವಕ್ಫ್ ಬೋರ್ಡ್ ಕಡೆಯಿಂದ ಅದ್ಧೂರಿಯಾಗಿ ಸ್ವಾತಂತ್ರ್ಯೋತ್ಸವ ಆಚರಿಸಲು ಚಿಂತನೆ ನಡೆದಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರನ್ನೇ ಧ್ವಜಾರೋಹಣಕ್ಕೆ ಅಹ್ವಾನ ನೀಡುವ ಬಗ್ಗೆ ಚರ್ಚೆಯಾಗಿದೆ. ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಆಹ್ವಾನಿಸಿದ್ದಾರೆ ಎಂದು ವರದಿಯಾಗಿದೆ.
ಇದುವರೆಗೂ ಧ್ವಜಾರೋಹಣ ಆಗಿಲ್ಲ
ಈ ಹಿಂದೆ ಕನ್ನಡಪರ ಸಂಘಟನೆಗಳು ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ದಿಢೀರ್ ಕನ್ನಡ ಧ್ವಜಾರೋಹಣ ಮಾಡಿದ್ದವು. ಆದರೆ ಈ ಬಾರಿ ವಕ್ಫ್ ಬೋರ್ಡ್ ನಿಂದಲೇ ಮೈದಾನದಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಲು ಚಿಂತನೆ ನಡೆದಿದೆ.
ಸಿಎಂ ಧ್ವಜಾರೋಹಣ ಮಾಡಿದರೆ ಯಾವುದೇ ಸಂಘಟನೆಗಳು ವಿರೋಧಿಸುವ ಸಾಧ್ಯತೆ ಇಲ್ಲ. ಹೀಗಾಗಿ, ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಶಾಸಕ ಜಮೀರ್ ಯೋಚಿಸಿದ್ದಾರೆ ಎನ್ನಲಾಗಿದೆ.