Site icon Vistara News

Mann ki baat | ವೃಕ್ಷ ಸಂರಕ್ಷಕ, ಕನ್ನಡ ಹೋರಾಟಗಾರ ಸುರೇಶ್‌ ಕುಮಾರ್‌ಗೆ ಪ್ರಧಾನಿ ಮೋದಿ ಶ್ಲಾಘನೆ

mann ki baat

ನವ ದೆಹಲಿ: ಬೆಂಗಳೂರಿನಲ್ಲಿ ಸಾವಿರಾರು ವೃಕ್ಷಗಳನ್ನು ಸಂರಕ್ಷಿಸಿ ಪೋಷಿಸಿರುವ ಹಾಗೂ ಕನ್ನಡ ನಾಡು-ನುಡಿಯ ಬಗ್ಗೆ ಜನ ಜಾಗೃತಿ ಮೂಡಿಸುತ್ತಿರುವ ಸುರೇಶ್‌ ಕುಮಾರ್‌ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ( Mann ki baat) ಶ್ಲಾಘಿಸಿದ್ದಾರೆ.

ಪ್ರಧಾನಿ ಮೋದಿಯವರು ಭಾನುವಾರ ತಮ್ಮ ಬಾನುಲಿ ಕಾರ್ಯಕ್ರಮ ಮನ್‌ ಕಿ ಬಾತ್‌ನಲ್ಲಿ ಮಾತನಾಡುತ್ತಾ, ಸುರೇಶ್‌ ಕುಮಾರ್‌ ಅವರು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಮಾಡಿರುವ ಕಾರ್ಯಕ್ರಮಗಳು ಅನನ್ಯ. ಅವರಿಂದ ನಾವು ಕಲಿಯುವಂಥದ್ದು ಬಹಳಷ್ಟು ಇದೆ. 20 ವರ್ಷಗಳ ಹಿಂದೆ ಅವರು ಸಹಕಾರ ನಗರದಲ್ಲಿ ಗಿಡ ಮರಗಳನ್ನು ನೆಟ್ಟು ಸಂರಕ್ಷಣೆ ಮಾಡಲು ನಿರ್ಧರಿಸಿದರು. ಈ ಕೆಲಸ ಸುಲಭವಾಗಿರಲಿಲ್ಲ. ಆದರೆ ಈಗ ಅಲ್ಲಿ 40 ಅಡಿ ಎತ್ತರದ ದೊಡ್ಡ ಮರಗಳು ಚೆನ್ನಾಗಿ ಬೆಳೆದಿವೆ. ಪ್ರತಿಯೊಬ್ಬರೂ ಈ ಹಸಿರಿನ ಸೌಂದರ್ಯವನ್ನು ಮೆಚ್ಚುತ್ತಿದ್ದಾರೆ. ಅಲ್ಲಿನ ನಿವಾಸಿಗಳಿಗೂ ಇದು ಗರ್ವದ ಸಂಗತಿಯಾಗಿದೆ ಎಂದರು.

ಸುರೇಶ್‌ ಕುಮಾರ್‌ ಅವರು ಇನ್ನೂ ಒಂದು ಅದ್ಭುತ ಕೆಲಸವನ್ನು ಮಾಡಿದ್ದಾರೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪೋಷಿಸಲು ಸಹಕಾರ ನಗರದಲ್ಲಿ ಒಂದು ಬಸ್‌ ನಿಲ್ದಾಣವನ್ನು ಮಾಡಿದ್ದಾರೆ. ನಾಡು ನುಡಿಯ ಬಗ್ಗೆ ಅರಿವು ಮೂಡಿಸುವ ಫಲಕಗಳನ್ನು ಅಚ್ಚುಕಟ್ಟಾಗಿ ಅಳವಡಿಸಿದ್ದಾರೆ. ಪರಿಸರ ಸಂರಕ್ಷಣೆ ಮತ್ತು ನಾಡು-ನುಡಿಯ ಸಂರಕ್ಷಣೆಗೆ ಅವರು ಸಲ್ಲಿಸುತ್ತಿರುವ ಕೊಡುಗೆ ಮಾದರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುರೇಶ್‌ ಕುಮಾರ್‌ ಅವರು ಸಹಕಾರ ನಗರದಲ್ಲಿ ರೈಲ್ವೆ ಹಳಿಯ ಬದಿಗಳಲ್ಲಿನ ಖಾಲಿ ಜಾಗಗಳಲ್ಲಿ 2,000 ಗಿಡಗಳನ್ನು ನೆಟ್ಟಿದ್ದರು. ಬೇಸಗೆಯಲ್ಲಿ ಅಷ್ಟೂ ಗಿಡಗಳಿಗೆ ನೀರುಣಿಸಿ ಬೆಳೆಸಿದ್ದರು. ಅವುಗಳು ಈಗ ಮರಗಳಾಗಿ ನೆರಳು ನೀಡುತ್ತವೆ. ಪರಿಸರವನ್ನು ಅಂದಗೊಳಿಸಿವೆ.

Exit mobile version