ಬೆಂಗಳೂರು: ವೀರ್ ದಾಸ್ ಕಾಮಿಡಿ ಶೋ ಬ್ಯಾನ್ ಮಾಡಲು ಹಿಂದೂಪರ ಸಂಘಟನೆಗಳು (Vir Das comedy show) ಒತ್ತಾಯಿಸಿವೆ.
ಭಾರತದ ವಿರುದ್ಧ ವಿದೇಶದಲ್ಲಿ ಅಪಪ್ರಚಾರ, ಹಿಂದೂ ಧರ್ಮದ ಹಾಗೂ ಹಿಂದೂ ಮಹಿಳೆಯರ ವಿರುದ್ಧ ಈ ಶೋದಲ್ಲಿ ಅವಹೇಳನ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ಇಂದು ಮಲ್ಲೇಶ್ವರಂನ ವಯ್ಯಾಲಿಕವಲ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗುವ ನಿರೀಕ್ಷೆ ಇದೆ. ಹಿಂದೂ ಮುಖಂಡ ಮೋಹನ್ ಗೌಡ ಮತ್ತು ಇತರರು ದೂರು ಸಲ್ಲಿಸುತ್ತಿದ್ದಾರೆ.
ವೀರ್ ದಾಸ್ ಕಳೆದ 2005ರಿಂದ ಕಾಮಿಡಿ ಶೋಗಳನ್ನು ನಡೆಸುತ್ತಿದ್ದಾರೆ. ವಾಂಟೆಡ್ ಎಂಬುದು ಅವರ ಕಾಮಿಡಿ ಶೋ ಆಗಿದ್ದು, ಬೆಂಗಳೂರಿನಲ್ಲಿ ನವೆಂಬರ್ 10ರಂದು ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಆಯೋಜಿಸಲಾಗಿದೆ. ಕೋಲ್ಕತಾ, ಮುಂಬಯಿ, ಲುಧಿಯಾನಾ, ಚಂಡೀಗಢದಲ್ಲೂ ನಡೆಸಲು ಉದ್ದೇಶಿಸಲಾಗಿದೆ.