ಬೆಂಗಳೂರು: ಭಾರಿ ಮಳೆಯಿಂದ ಜಲಾವೃತವಾಗಿರುವ ಸರ್ಜಾಪುರ ರಸ್ತೆಯ ರೈನ್‌ಬೋ ಲೇಔಟ್ ಬಹುತೇಕ ನಿವಾಸಿಗಳು ಅಪಾರ್ಟ್‌ಮೆಂಟ್ ಖಾಲಿ ಮಾಡಿಕೊಂಡು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ಹೊರಟುಹೋಗಿದ್ದಾರೆ.
ಸರ್ಜಾಪುರ ರಸ್ತೆಯಲ್ಲಿರುವ ರೈನ್‌ಬೋ ಲೇಔಟ್ ಸೇರಿದಂತೆ ಎರಡು ಲೇಔಟ್‌ಗಳು ಬಹುತೇಕ ಖಾಲಿಯಾಗಿವೆ. ರೈನ್‌ಬೋ ಲೇಔಟ್ ನಲ್ಲಿ ಸುಮಾರು 350ಕ್ಕೂ ಹೆಚ್ಚು ಮನೆಗಳಿವೆ. ಸದ್ಯ ರೈನ್ ಬೋ ಲೇಔಟ್‌ನಲ್ಲಿ ೧೦ರಿಂದ ೧೨ ಮನೆಗಳಲ್ಲಿ ಮಾತ್ರ ನಿವಾಸಿಗಳು ಉಳಿದುಕೊಂಡಿದ್ದು, ಉಳಿದವರು ಆಚೆ ಹೋಗಿದ್ದಾರೆ. ಕಂಟ್ರಿ ಸೈಡ್ ಲೇಔಟ್‌ನಲ್ಲಿ ೩೫ಕ್ಕೂ ಹೆಚ್ಚು ಮನೆಗಳಿದ್ದು, ಲೇಔಟ್‌ನ ಎಲ್ಲಾ ನಿವಾಸಿಗಳು ಸಂಪೂರ್ಣವಾಗಿ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ.
ಮಳೆ ಕಡಿಮೆಯಾಗುವ ಹಾಗೂ ನೀರು ಇಳಿಯುವ ಯಾವುದೇ ಸೂಚನೆ ಕಾಣಿಸದಿರುವುದು, ತುರ್ತು ಕಾರ್ಯಾಚರಣೆ ನಡೆದರೂ ಯಾವುದೇ ಫಲ ಇಲ್ಲದಿರುವುದರಿಂದ ಹತಾಶರಾಗಿರುವ ನಿವಾಸಿಗಳು ಸ್ಥಳ ಖಾಲಿ ಮಾಡಿದ್ದಾರೆ. ಪ್ರತಿಷ್ಠಿತರೇ ಹೆಚ್ಚಾಗಿ ವಾಸವಾಗಿರುವ ಈ ಲೇಔಟ್ ನಿವಾಸಿಗಳು ಸುತ್ತಮುತ್ತಲಿನ ಐಟಿ ಕಂಪನಿಗಳ ಉದ್ಯೋಗಿಗಳಾಗಿದ್ದಾರೆ.
ಇದನ್ನೂ ಓದಿ | Bengaluru Rain | ಮುಳುಗಡೆಯಾದ ಬೆಂಗಳೂರು: ದೇಶದ ರಾಜಧಾನಿವರೆಗೂ ಚರ್ಚೆ