Site icon Vistara News

Oramax | ಕನ್ನಡದ ಟಾಪ್ 5 ನಟಿಯರ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್‌ ಪದ್ಮಾವತಿ

ಕನ್ನಡದ ಟಾಪ್ 5 ನಟಿಮಣಿಯರ ಲಿಸ್ಟ್‌

ಬೆಂಗಳೂರು: ಒರಾಮ್ಯಾಕ್ಸ್ ಸಂಸ್ಥೆಯು ಕನ್ನಡದ ಜನಪ್ರಿಯ ನಟಿಯರ ಪಟ್ಟಿ ಬಿಡುಗೆ ಮಾಡಿದ್ದು, ಅದರಲ್ಲಿ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ನಾಲ್ಕನೇ ಸ್ಥಾನ ಪಡೆದಿದ್ದಾರೆ. ತಮ್ಮ ಹೆಸರನ್ನು ಪರಿಗಣಿಸಿದ್ದಕ್ಕೆ ರಮ್ಯಾ ಅವರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಆ ಸಂಭ್ರಮವನ್ನು ಟ್ವೀಟ್‌ ಮಾಡಿ ಹಂಚಿಕೊಂಡಿದ್ದಾರೆ. “ನಾನು ಕಳೆದ 8 ವರ್ಷಗಳಿಂದ ಸಿನಿಮಾರಂಗದಿಂದ ದೂರ ಇದ್ದೇನೆ. ಆದರೂ ಈ ಪಟ್ಟಿಯಲ್ಲಿ ನನ್ನನ್ನು ಪರಿಗಣಿಸಿದ್ದಕ್ಕೆ ಧನ್ಯವಾದ ಎಂದು ಹೇಳಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಒರಾಮ್ಯಾಕ್ಸ್‌ ಸಂಸ್ಥೆ ಬಿಡುಗಡೆ ಮಾಡಿರುವ ಟಾಪ್ 5 ನಟಿಯರ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಮೊದಲನೇ ಸ್ಥಾನ ಪಡೆದಿದ್ದು, ರಚಿತಾ ರಾಮ್ ಎರಡನೇ ಸ್ಥಾನ, ರಾಧಿಕಾ ಪಂಡಿತ್ ಮೂರನೇ ಸ್ಥಾನ, ರಮ್ಯಾ ನಾಲ್ಕನೇ ಸ್ಥಾನ ಮತ್ತು ಆಶಿಕಾ ರಂಗನಾಥ್ 5ನೇ ಸ್ಥಾನ ಪಡೆದಿದ್ದಾರೆ.

ಇದನ್ನು ಓದಿ| Lucky Man Movie | ನಟ ಪುನೀತ್ ರಾಜಕುಮಾರ್ ಅಭಿನಯದ ಲಕ್ಕಿ ಮ್ಯಾನ್ ಸಿನಿಮಾದ ಟೀಸರ್ ಔಟ್‌

Exit mobile version