ಬೆಂಗಳೂರು : ರವಿಶಂಕರ್ ಗುರೂಜಿ ಆಶ್ರಮದ ಸಿಬಂದಿ ಎಂದು ಹೇಳಿ ವಂಚನೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರವಿಕುಮಾರ್ ಮತ್ತು ಜಾನ್ ಎಂಬುವವರನ್ನು ಹಲಸೂರ್ ಗೇಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಗಣೇಶ್ ಎಂಬಾತನಿಗೆ ಕಡಿಮೆ ಬೆಲೆಗೆ ಹೆಚ್ಚಿನ ಚಿನ್ನ ಕೊಡಿಸುವುದಾಗಿ ಆರೋಪಿಗಳು ನಂಬಿಸಿದ್ದರು. ತಾನು ರವಿಶಂಕರ್ ಗುರೂಜಿ ಆಶ್ರಮದ ಸಿಬ್ಬಂದಿ ನನ್ನನ್ನ ನಂಬಿ ಎಂದು ಗಣೇಶ್‌ನನ್ನು ಆರೋಪಿ ರವಿಕುಮಾರ್ ನಂಬಿಸಿದ್ದ. ರವಿಶಂಕರ್ ಗುರೂಜಿ ಆಶ್ರಮದ ಬಳಿ ಇರುವ ಕಾಫಿಡೇಗೆ ಮೂರು ಲಕ್ಷ ಹಣ ತರಲು ಹೇಳಿದ್ದ ರವಿಕುಮಾರ್ ಆರೋಪಿಯನ್ನ ನಂಬಿ ಮೂರು ಲಕ್ಷ ತೆಗೆದುಕೊಂಡು ಗಣೇಶ್ ಹೋಗಿದ್ದ.
ಇದನ್ನೂ ಓದಿ | PSI Scam | ಸಚಿವರ ಹೆಸರು ಹೇಳಿ ತಪ್ಪಿಸಿಕೊಂಡಿದ್ದ ಅಭ್ಯರ್ಥಿ ಬಂಧನ
ಇದೆ ವೇಳೆ ರವಿಕುಮಾರ್ ನಮ್ಮ ಇಬ್ಬರು ಸಿಬ್ಬಂದಿ ಇದ್ದಾರೆ. ಅವರ ಬಳಿ ಇರಿ ಎಂದು ಹೇಳಿದ್ದಲ್ಲದೆ ಆ ಇಬ್ಬರಲ್ಲಿ ಒಬ್ಬನಿಗೆ ಮೂರು ಲಕ್ಷ ರೂ.ಗಳನ್ನು ಗಣೇಶ್‌ನಿಂದ ಕೊಡಿಸಿದ್ದ. ಈ ವೇಳೆ ಒಬ್ಬನನ್ನ ಗಣೇಶ್ ಜತೆ ಬಿಟ್ಟು ಚಿನ್ನ ತರುವುದಾಗಿ ರವಿಕುಮಾರ್ ಎಸ್ಕೇಪ್ ಆಗಿದ್ದಾನೆ. ಹಣ ತೆಗೆದುಕೊಂಡು ಒಬ್ಬ ಎಸ್ಕೇಪ್ ಆಗಿದ್ದೇ ತಡ ಮತ್ತೊಬ್ಬ ಪೊಲೀಸ್ ವೇಷದಲ್ಲಿ ಬಂದು ಗಣೇಶ್ ಜತೆಯಲ್ಲಿದ್ದ ವ್ಯಕ್ತಿಯನ್ನ ಕರೆದೊಯ್ದಿದ್ದಾನೆ. ಡೌಟ್ ಬಂದು ಆರೋಪಿಗಳನ್ನು ಫೊಲೋ ಮಾಡಿದ್ದ ಗಣೇಶ್‌ಗೆ ಮೋಸ ಹೋಗಿರುವುದಾಗಿ ಗೊತ್ತಾಗಿದೆ. ಈ ಸಂಬಂಧ ಗಣೇಶ್ ಹಲಸೂರ್ ಗೇಟ್ ಠಾಣೆಗೆ ದೂರು ನೀಡಿದ್ದಾನೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ನೂಪುರ್ ಶರ್ಮಾ ಬಂಧನ ಆಗ್ರಹಿಸಿ ರಾಜ್ಯದ ಹಲವೆಡೆ ಪ್ರತಿಭಟನೆ, ಬೆಳಗಾವಿಯಲ್ಲಿ ಪ್ರತಿಕೃತಿಗೆ ಗಲ್ಲು