Site icon Vistara News

Registration troubles : ಅಮೆರಿಕಕ್ಕೆ ವಲಸೆ ಹೋಗಲು ಬಯಸಿದ ಬೆಂಗಳೂರಿನ ಉದ್ಯಮಿ, ಕಾರಣವೇನು?

start up

ಬೆಂಗಳೂರು: ಬೆಂಗಳೂರಿನಲ್ಲಿ ಕಂಪನಿಯೊಂದನ್ನು ಸ್ಥಾಪಿಸಲು ಬಯಸಿದ್ದ ಉದ್ಯಮಿಯೊಬ್ಬರು ನೋಂದಣಿ ಪ್ರಕ್ರಿಯೆಯಲ್ಲಿ ಉಂಟಾಗಿದ್ದ ವಿಳಂಬದಿಂದ ಬೇಸರಗೊಂಡು, (bangaluru based company) ಇದೀಗ ಅಮೆರಿಕಕ್ಕೆ ವಲಸೆ ( Registration troubles) ಹೋಗಲು ನಿರ್ಧರಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಈ ಉದ್ಯಮಿಯ ಹೆಸರು ಬ್ರಿಜ್‌ ಸಿಂಗ್.‌ (Brij Singh)

ಹಾಗಾದರೆ ಅವರು ಟ್ವೀಟ್‌ನಲ್ಲಿ ಹೇಳಿದ್ದೇನು? ನಾನು ಬೆಂಗಳೂರು ಮತ್ತು ಭಾರತವನ್ನು ಪ್ರೀತಿಸುತ್ತೇನೆ. ಆದರೆ ಕಳೆದ ಮೂರು ದಿನಗಳಲ್ಲಿ ಅಮೆರಿಕದಲ್ಲಿ ತಿಂಗಳ ಹಿಂದೆ ಭಾರತದಲ್ಲಿ ಕಲಿತದ್ದಕ್ಕಿಂತ ಹೆಚ್ಚು ತಿಳಿದುಕೊಂಡಿರುವೆ. ಭಾರತದಲ್ಲಿ ಕಳೆದ ಎರಡು ತಿಂಗಳಿನಿಂದ ಕಂಪನಿಯನ್ನು ನೋಂದಣಿ ಮಾಡಲು ಯತ್ನಿಸುತ್ತಿದ್ದೇನೆ. ಆದರೆ ಸಾಧ್ಯವಾಗಿಲ್ಲ.

ನಾನು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಭವನೀಯ ಗ್ರಾಹಕರು, ಹೂಡಿಕೆದಾರರು, ಸಹ ಸಂಸ್ಥಾಪಕರಿಂದ ಸಲಹೆ ಪಡೆಯುವುದು ಕೂಡ ಸಮಸ್ಯೆಯಾಗಿದೆ. ಹೀಗಾಗಿ ಅಮೆರಿಕಕ್ಕೆ ವಲಸೆ ಹೋಗುವ ಸಮಯ ಬಂದಿದೆ. ಭಾರವಾದ ಹೃದಯದಿಂದ ಇದನ್ನು ನಾನು ಹೇಳುತ್ತಿದ್ದೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಬೆಂಗಳೂರು ಇಡೀ ಭಾರತದಲ್ಲಿ ಸ್ಟಾರ್ಟಪ್‌ ಕ್ಯಾಪಿಟಲ್‌ ಎನ್ನಿಸಿದೆ. ಬ್ರಿಜ್‌ ಸಿಂಗ್‌ ಅವರ ಟ್ವೀಟ್‌ ಅನ್ನು ಜಾಲತಾಣದಲ್ಲಿ 5,78,000 ವ್ಯೂಸ್‌ಗಳನ್ನು ಪಡೆದಿದೆ. 1300 ಲೈಕ್ಸ್‌ ಲಭಿಸಿದೆ. ಕೆಲವು ಬ್ರಿಜ್‌ ಸಿಂಗ್‌ ಅವರ ವಾದವನ್ನು ಒಪ್ಪಿದ್ದರೆ, ಇನ್ನು ಕೆಲವು ತಮಗೆ ಕಂಪನಿಗಳ ನೋಂದಣಿಯಲ್ಲಿ ವಿಳಂಬವಾಗಿಲ್ಲ, ಎರಡೇ ವಾರಗಳಲ್ಲಿ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

Exit mobile version