Site icon Vistara News

Road accident | ಕುಡಿದ ಮತ್ತಿನಲ್ಲಿ ಕಾರು ಚಾಲನೆ, ಆಟೊ, ಬೈಕ್‌ಗಳಿಗೆ ಡಿಕ್ಕಿಯಾಗಿ ಸರಣಿ ಅಪಘಾತ

accident

ಬೆಂಗಳೂರು: ಬೆಂಗಳೂರಿನ ಆನಂದ ರಾವ್ ಸರ್ಕಲ್ ಬಳಿ ಚಾಲಕನೊಬ್ಬ ಮದ್ಯಪಾನ ಮಾಡಿದ ಮತ್ತಿನಲ್ಲಿ ಕಾರನ್ನು ಚಲಾಯಿಸಿ ಆಟೊ ರಿಕ್ಷಾ, ಬೈಕ್ ಗಳಿಗೆ (Road accident) ಡಿಕ್ಕಿ ಹೊಡೆಸಿದ್ದಾನೆ.

ಒನ್ ವೇ ಯಲ್ಲಿ ಕಾರನ್ನು ನುಗ್ಗಿಸಿದ ಪರಿಣಾಮ ಆಟೊ ರಿಕ್ಷಾ ಮತ್ತು ಬೈಕ್ ಗಳಿಗೆ ಡಿಕ್ಕಿಯಾಗಿದೆ.

ಕುಡಿದು ಸರಣಿ ಅಪಘಾತ ಮಾಡಿದವನ ಮೇಲೆ ಇತರ ವಾಹನ ಸವಾರರು ಹಲ್ಲೆ ನಡೆಸಿದ್ದಾರೆ. ಆನಂದ್ ರಾವ್ ಸರ್ಕಲ್ ಬಳಿ ಇರುವ ಗಾಂಧಿ ಸ್ಟ್ಯಾಚ್ಯೂ ಬಳಿ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ.

Exit mobile version