ಬೆಂಗಳೂರು: ರಾಜಧಾನಿಯಲ್ಲಿ ರೋಡ್ ರೇಜ್ (Road Rage Case) ಕಿರಿಕ್‌ಗಳು ಮುಂದುವರಿದಿವೆ. ಬೈಕ್‌ಗೆ ಡ್ಯಾಮೇಜ್ (Damage) ಮಾಡಿದ್ದೀರಿ, ಹಣ ಕೊಡಿ ಎಂದು ಬೈಕ್ ಸವಾರ (Bike rider) ಯುವಕನೊಬ್ಬ ಕಾರಿಗೆ ಅಡ್ಡ ನಿಂತು ಮುಂದೆ ಹೋಗಲು ಬಿಡದೆ ಪೀಡಿಸಿದ ಘಟನೆ ನಡೆದಿದೆ. ಇತ್ತೀಚೆಗೆ ರೋಡ್ ರೇಜ್ ಪ್ರಕರಣವೊಂದು ಕೊಲೆಯಾಗಿ ಪರಿವರ್ತನೆಯಾದ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ.
ದಾಸನಪುರದ ಮಾಕಳಿ ಕ್ರಾಸ್ ಬಳಿ ನಿನ್ನೆ ಸಂಜೆ ಘಟನೆ ನಡೆದಿದೆ. ಏಕಾಏಕಿ ಕಾರಿಗೆ ಅಡ್ಡ ಬಂದ ಬೈಕ್ ಸವಾರ, ನನ್ನ ಗಾಡಿಗೆ ಡಿಕ್ಕಿ ಹೊಡೆದಿದ್ದೀರಿ ಎಂದು ತಗಾದೆ ತೆಗೆದಿದ್ದಾನೆ. ನನ್ನ ಗಾಡಿ ಡ್ಯಾಮೇಜ್ ಮಾಡಿದ್ದೀರಿ ಅಂತ ಕಿರಿಕ್ ಶುರು ಮಾಡಿದ್ದಾನೆ. ಕಾರು ಚಲಾಯಿಸುತ್ತಿದ್ದವರು ಇಳಿದು ನೋಡಿದಾಗ, ಅವನು ಹೇಳುವ ರೀತಿ ಏನೂ ಆಗಿಲ್ಲ ಎಂದು ವಾಪಸ್ ಕಾರ್ ಹತ್ತಿದ್ದಾರೆ. ಆದರೆ ಯುವಕ ಹಣ ಕೊಡಿ ಎಂದು ಕಾರಿಗೆ ಅಡ್ಡ ಬಂದು ನಿಂತು ಗಲಾಟೆ ಮಾಡಿದ್ದಾನೆ. ಕೈಯಿಂದ ಕಾರಿನ ಗ್ಲಾಸ್‌ಗೆ ಗುದ್ದಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹೈಡ್ರಾಮಾ ಮಾಡಿದ್ದಾನೆ.
ಈ ಕುರಿತು ವಿಡಿಯೋ ಸಮೇತ ಘಟನೆ ಬಗ್ಗೆ ಎಕ್ಸ್‌ನಲ್ಲಿ ಕಾರು ಚಾಲಕ ಪೋಸ್ಟ್ ಮಾಡಿದ್ದಾನೆ. ಸುಮಾರು 15 ನಿಮಿಷ ನಮ್ಮ ಜೊತೆ ಹಣಕ್ಕಾಗಿ ಆತ ಗಲಾಟೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಎಕ್ಸ್‌ನಲ್ಲಿ ವಿಡಿಯೋವನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ.
Murder Case: ಟೀ ಕುಡಿಯಲು ಹೋದವ ಹಾಲು ತರಲು ಬಂದಿದ್ದವನಿಂದ ಹತ್ಯೆಯಾದ! ರೋಡ್ ರೇಜ್ ಕೊಲೆಯಲ್ಲಿ ಅಂತ್ಯ
ಬೆಂಗಳೂರು: ರಾಜಧಾನಿಯಲ್ಲಿ ದಿನೇ ದಿನೆ ರೋಡ್ ರೇಜ್ (Road Rage) ಕೇಸ್‌ಗಳು ಹೆಚ್ಚಾಗುತ್ತಿವೆ ಎಂಬ ಕಳವಳದ ನಡುವೆಯೇ, ಇಂಥದೇ ಒಂದು ಪ್ರಕರಣದಲ್ಲಿ ರಸ್ತೆಯ ಮೇಲೆ ಒಂದು ಕೊಲೆ (Murder Case) ನಡೆದಿದೆ. ರೋಡ್ ರೇಜ್, ಮರ್ಡರ್ ಆಗಿ ಪರಿವರ್ತನೆ ಆಗಿದೆ. ಇಲ್ಲಿಯವರೆಗೆ ರಸ್ತೆ ಮೇಲೆ ಹಲ್ಲೆ ಪ್ರಕರಣ, ಗಲಾಟೆ ನಡೆದದ್ದನ್ನು ನಾವು ನೋಡಿದ್ದೇವೆ. ಆದರೆ ನಿನ್ನೆ ನಡೆದ ಒಂದು ರೋಡ್ ರೇಜ್ ಘಟನೆಯಿಂದ ಒಬ್ಬ ಯುವಕನ ಕೊಲೆಯಾಗಿದೆ.
ಇಲ್ಲಿ ರೋಡ್ ರೇಜ್‌ನಲ್ಲಿ ಕೊಲೆಯಾದವನು ಮಹೇಶ್ ಎಂಬಾತ. ಕೊಂದವನು ಅರವಿಂದ್. ವೃತ್ತಿಯಲ್ಲಿ ಡೆಲಿವರಿ ಬಾಯ್ ಆಗಿದ್ದ ಮಹೇಶ್ ಆತನ ಗೆಳೆಯರಾದ ಬಾಲಾಜಿ ಮತ್ತು ನಿಕಿಲ್ ಜೊತೆಗೆ ಟೀ ಕುಡಿಯಲು ಹೋಗಿದ್ದಾರೆ. ಟೀ ಕುಡಿದು ಬೈಕ್‌ನಲ್ಲಿ ರಸ್ತೆಯಲ್ಲಿ ಬರುತ್ತಿದ್ದಾಗ, ಅರವಿಂದ್ ಚಲಾಯಿಸುತ್ತಿದ್ದ ಕಾರು ಸ್ಪೀಡ್ ಆಗಿ ಬಂದಿದೆ. ಸೈಡ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಹತ್ತಿರಕ್ಕೆ ಬಂದು ಹಾರ್ನ್ ಮಾಡಿದ್ದಾನೆ.
ಇದೇ ವೇಳೆ ಬೈಕು, ಕಾರ್‌ಗೆ ಸ್ವಲ್ಪ ಟಚ್ ಆಗಿದೆ ಎಂದು ಕಾರು ಚಾಲಕ ಅರವಿಂದ್ ಬೈಕ್ ಸವಾರರನ್ನು ವೇಗವಾಗಿ ಚೇಸ್ ಮಾಡಲು ಮುಂದಾಗಿದ್ದಾನೆ. ದಾರಿಯಲ್ಲಿ ಇಬ್ಬರು ಯುವಕರು ಮೇನ್ ರೋಡ್‌ನಿಂದ ಸಣ್ಣ ರೋಡ್‌ಗೆ ಬಂದಾಗ ಕೆಳಗೆ ಬಿದ್ದಿದ್ದಾರೆ. ಬೈಕ್ ಸವಾರನನ್ನು ಫಾಲೋ ಮಾಡಿ ವೇಗವಾಗಿ ಬಂದ ಕಾರು ಚಾಲಕ ಜಿ.ಕೆ.ವಿ.ಕೆ ಲೇಔಟ್‌ಲ್ಲಿ ಬೈಕ್‌ಗೆ ಡಿಕ್ಕಿ ಹೊಡೆಸಿದ್ದಾನೆ. ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಮುಂದೆ ಇದ್ದ ಮನೆಗೆ ರಭಸವಾಗಿ ಬೈಕ್ ಗುದ್ದಿ ಸ್ಥಳದಲ್ಲೆ ಬೈಕ್ ಸವಾರ ಮಹೇಶ್ ಮೃತಪಟ್ಟಿದ್ದಾನೆ.
ಕೊಲೆಯಾದ ಮಹೇಶ್ ನಿನ್ನೆ ಸಂಜೆ ಆತನ ಗೆಳೆಯರ ಜೊತೆಗೆ ಟೀ ಕುಡಿಯಲು ಹೋಗಿದ್ದ. ಇತ್ತ ಖಾಸಗಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿರುವ ಅರವಿಂದ್ ಆತನ ಗೆಳೆಯ ಕೇಶವ್ ಜೊತೆಗೆ ಹಾಲು ತರಲು ಹೋಗಿದ್ದನಂತೆ. ಸಂಬಂಧವೇ ಇಲ್ಲದ ಇಬ್ಬರು ಅವರವರ ಕೆಲಸ ಮುಗಿಸಿ ಮನೆಗೆ ಬಂದಿದ್ದರೆ ಇವತ್ತು ಪರಿಸ್ಥಿತಿ ಹೀಗಿರುತ್ತಿರಲಿಲ್ಲ! ಸದ್ಯ ಕೇಸ್ ದಾಖಲು ಮಾಡಿಕೊಂಡಿರುವ ವಿದ್ಯಾರಣ್ಯಪುರ ಪೊಲೀಸರು ಕೇಶವ್ ಮತ್ತು ಅರವಿಂದರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: Road Rage Incident: ಒಳಗೆ ಮಗು ಇದೆ ಅಂದ್ರೂ ಬಿಡದ ಕಿಡಿಗೇಡಿ; ಕಾರಿನ ಗ್ಲಾಸ್ ಒಡೆದು ದಾಂಧಲೆ!