ಬೆಂಗಳೂರು: ಇಲ್ಲಿನ ಗಾಂಧಿ ಬಜಾರ್‌ನಲ್ಲಿ ಬಿಬಿಎಂಪಿ (BBMP) ಜಾಗದಲ್ಲಿ ನಿರ್ಮಿಸಿದ್ದ ಶೆಡ್ ಹಾಗೂ ಕಾಂಪೌಂಡ್ ಅನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು. ಒಟ್ಟು 9,100 ಚದರ ಅಡಿಗಳ ಜಾಗವನ್ನು ಪಾಲಿಕೆಯ ವಶಕ್ಕೆ ಪಡೆಯಲಾಗಿದ್ದು, ಸ್ವತ್ತಿನ ಅಂದಾಜು ಮೌಲ್ಯ 30 ಕೋಟಿ ರೂ. ಬೆಲೆಬಾಳಲಿದೆ.
ಇಂಜಿನಿಯರಿಂಗ್ ಹಾಗೂ ಕಂದಾಯ ವಿಭಾಗದ ಸಿಬ್ಬಂದಿ ಸೇರಿ 60ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ ಬಂದೋಬಸ್ತ್‌ನೊಂದಿಗೆ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವಾರ್ಡ್ ಸಂಖ್ಯೆ 49 (ಹೊಸ ವಾರ್ಡ್ ಸಂಖ್ಯೆ: 142-ಸುಂಕೇನಹಳ್ಳಿ) ಗಾಂಧಿ ಬಜಾರ್ ಮುಖ್ಯ ರಸ್ತೆಯ ಪಾಲಿಕೆಯ ಜಾಗದಲ್ಲಿ ನೂತನವಾಗಿ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
ಈಗಾಗಲೇ ಹಲವು ಸ್ವತ್ತುಗಳನ್ನು ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಈ ಪೈಕಿ ಹಾಲಿ ಖಾತೆದಾರರ ಹೆಸರುಗಳಲ್ಲಿ ನಮೂದಾಗಿರುವ ಖಾತೆಗಳನ್ನು ರದ್ದುಪಡಿಸಿ ಪಾಲಿಕೆಯ ಆಯುಕ್ತರ ಹೆಸರಿನಲ್ಲಿ ಖಾತೆಯನ್ನು ಕಚೇರಿ ದಾಖಲಾತಿಯಲ್ಲಿ ನೋಂದಾಯಿಸಲಾಗಿದೆ.
ಇದನ್ನೂ ಓದಿ | ಬೆಂಗಳೂರಿನ ಪ್ರಮುಖ ರಸ್ತೆಗಳಿಂದ ಫುಟ್‌ಪಾತ್ ವ್ಯಾಪಾರಿಗಳ ಎತ್ತಂಗಡಿ, ಬಿಬಿಎಂಪಿ ನಿರ್ಧಾರ