ಬೆಂಗಳೂರು: ವಾಹನ ಸವಾರರಿಗೆ ರಾಜ್ಯ ಸಾರಿಗೆ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ. ಡಿಎಲ್, ಆರ್‌ಸಿ ಕಾರ್ಡ್‌ಗಾಗಿ ಇನ್ನು ಮುಂದೆ ಆರ್‌ಟಿಓ (regional transport office) ಕಚೇರಿಯ ಅಲೆದಾಟಕ್ಕೆ ಬ್ರೇಕ್ ಬೀಳಲಿದೆ. ಡಿಎಲ್ (driving license) ಹಾಗೂ ಆರ್‌ಸಿ (registration certificate) ಕಾರ್ಡ್‌ಗಳನ್ನು ಮನೆಗಳಿಗೆ ತಲುಪಿಸಲು ಆರ್‌ಟಿಓ (RTO news) ವ್ಯವಸ್ಥೆ ಮಾಡುತ್ತಿದೆ.
ಆರ್‌ಸಿ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್‌ಗಳನ್ನು ಅಂಚೆ ಮೂಲಕವೇ ಮನೆಗಳಿಗೆ ಆರ್‌ಟಿಓ ಕಚೇರಿ ಕೊರಿಯರ್ ಮಾಡಲಿದೆ. ಎನ್ವಲಪ್ ಕವರ್‌ನಲ್ಲಿ ವಿಶೇಷ ಸೂಚನೆಗಳೊಂದಿಗೆ ಕೊರಿಯರ್ ವ್ಯವಸ್ಥೆ ಮಾಡಲಾಗುತ್ತಿದೆ. ಈ ಸಂಬಂಧ ಅಂಚೆ ಇಲಾಖೆಯೊಂದಿಗೆ RTO ಒಪ್ಪಂದ ಮಾಡಿಕೊಂಡಿದೆ.
DL & RC ಕಾರ್ಡ್ ಮನೆಗೆ ರವಾನೆ ಸಂಬಂಧ ಸರ್ಕಾರದಿಂದಲೂ ಅನುಮೋದನೆ ದೊರೆತಿದೆ. ಸಾರಿಗೆ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಆದೇಶ ದೊರೆತಿದೆ. ಮುಖ್ಯ ಅಂಚೆ ಕಚೇರಿ ಆಯುಕ್ತ, ಸಾರಿಗೆ ಮುಖ್ಯ ಆಯುಕ್ತರು ಸಭೆಯಲ್ಲಿ ಭಾಗಿಯಾಗಿ ನೂತನ ವ್ಯವಸ್ಥೆಗೆ ಅಸ್ತು ಎಂದಿದ್ದಾರೆ. ಈ ಮೂಲಕ ಇನ್ನು ಮುಂದೆ ಸ್ಪೀಡ್ ಪೋಸ್ಟ್ ಮೂಲಕವೇ RC- DL ಕಾರ್ಡ್‌ಗಳು ಮನೆಬಾಗಿಲಿಗೆ ದೊರೆಯಲಿವೆ.
ಅರ್ಜಿದಾರರು ಆನ್‌ಲೈನ್ ಮೂಲಕವೂ ದಾಖಲೆಗಳನ್ನು ಟ್ರ್ಯಾಕ್ ಮಾಡಲು ಅವಕಾಶವಿದೆ. ಈ ನೂತನ ವ್ಯವಸ್ಥೆ ಬಗ್ಗೆ ರಾಜ್ಯ ಸಾರಿಗೆ ಇಲಾಖೆಯಿಂದ ಪ್ರಕಟಣೆ ಹೊರಡಿಸಲಾಗಿದೆ.
ಇದನ್ನೂ ಓದಿ: Karnataka Election 2023: ಫೀಲ್ಡಿಗಿಳಿದ ಆರ್‌ಟಿಒ ಅಧಿಕಾರಿಗಳಿಂದ ವಾಹನಗಳ ತಪಾಸಣೆ, 20 ಜನರಿಗೆ ನೋಟಿಸ್, 7 ವಾಹನಗಳು ಸೀಜ್