Site icon Vistara News

Sagar puranik: ʼವೆಂಕ್ಯಾ’ ಅಂಗಳಕ್ಕೆ ಬಂದ ಶಿಮ್ಲಾ ಆ್ಯಪಲ್‌ನಂಥ ಬೆಡಗಿ

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ (National award winner) ಸಾಗರ್ ಪುರಾಣಿಕ್ (Sagar Puranik) ನಿರ್ದೇಶನದ ವೆಂಕ್ಯಾ (venkya) ಚಿತ್ರದಲ್ಲಿ ನಾಯಕಿಯಾಗಿ ಶಿಮ್ಲಾ (shimla) ಬೆಡಗಿ ಎಂಟ್ರಿ ಕೊಟ್ಟಿದ್ದಾರೆ.

ವೆಂಕ್ಯಾ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇದೇ ಮೊದಲ ಬಾರಿಗೆ ಸಾಗರ್ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಇದೀಗ ವೆಂಕ್ಯಾ ಬಳಗಕ್ಕೆ ಯುವ ನಟಿಯೊಬ್ಬರ ಆಗಮನವಾಗಿದೆ. ಶಿಮ್ಲಾದ ಬೆಡಗಿ ರೂಪಾಲಿ ಸೂದ್ (Rupali Sood) ವೆಂಕ್ಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.

ಮಾಡೆಲ್ ಗೂ ಸೈ

ಸಾಗರ್ ಪುರಾಣಿಕ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ರೂಪಾಲಿ ಮೂಲತಃ ಶಿಮ್ಲಾದವರು. ಕಾಲೇಜು ದಿನಗಳಲ್ಲಿದ್ದಾಗಲೇ ಮಾಡೆಲಿಂಗ್ ಅಖಾಡಕ್ಕೆ ಇಳಿದಿದ್ದ ಅವರು ಮಾಡೆಲಿಂಗ್ ಜೊತೆಗೆ ಹಲವು ಮ್ಯೂಸಿಕ್ ಆಲ್ಬಂಗಳಲ್ಲೂ ನಟಿಸಿದ್ದಾರೆ. ಹಾರ್ಡಿ ಸಂಧು ಅವರೊಂದಿಗಿನ ಸೂಪರ್ ಹಿಟ್ ಹಾಡು ‘ಹಾರ್ನ್ ಬ್ಲೋ’ನಲ್ಲಿ ಹೆಜ್ಜೆ ಹಾಕಿರುವ ಶಿಮ್ಲಾ ಚೆಲುವೆ ರೂಪಾಲಿ ಇದೀಗ ವೆಂಕ್ಯಾ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ವೆಂಕ್ಯಾ ಶೂಟಿಂಗ್ ನಲ್ಲಿ ಭಾಗಿಯಾಗಿರುವ ರೂಪಾಲಿ ಅವರು ಹಿಮಾಚಲದ ಪಹಾಡಿ ಹುಡುಗಿಯಾಗಿ ಅಭಿನಯಿಸುತ್ತಿದ್ದಾರೆ.

ಇದನ್ನು ಓದಿ: Karan Sharma: ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆಯ ಜನಪ್ರಿಯ ಜೋಡಿ

ಶೂಟಿಂಗ್ ಅನುಭವ

ಶೂಟಿಂಗ್ ಕುರಿತು ತಮ್ಮ ಅನುಭವ ಹಂಚಿಕೊಂಡ ರೂಪಾಲಿ, ನಾವು ಇತ್ತೀಚೆಗೆ ಮನಾಲಿಯ ಬಳಿ ಕೈಲಾಂಗ್‌ನಲ್ಲಿ, ಪರ್ವತಗಳ ನಡುವೆ ಸುಂದರವಾದ ಸ್ಥಳದಲ್ಲಿ ಕೆಲವು ಭಾಗಗಳನ್ನು ಚಿತ್ರೀಕರಿಸಿದ್ದೇವೆ. ಇದು ನನ್ನ ಸಿನಿಮಾ ವೃತ್ತಿಜೀವನಕ್ಕೆ ಅದ್ಭುತ ಆರಂಭ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ವೆಂಕ್ಯಾನಿಗೆ ಜೊತೆಯಾದ ಪವನ್ ಒಡೆಯರ್

ವೆಂಕ್ಯಾನಿಗೂ ಸಾಥ್ ನೀಡಿರುವ ಡೊಳ್ಳು ಸಿನಿಮಾ ನಿರ್ಮಾಪಕ ಪವನ್ ಒಡೆಯರ್ ಮಾಲೀಕತ್ವದ ಫಿಲ್ಮ್ಸ್ ನಡಿ ಈ ಚಿತ್ರ ಸಿದ್ಧವಾಗುತ್ತಿದೆ. ಚಿತ್ರಕ್ಕೆ ಅವಿನಾಶ್ ವಿ. ರೈ ಮತ್ತು ಮೋಹನ್ ಲಾಲ್ ಮೆನನ್ ನಿರ್ದೇಶಕರಾಗಿ ಕೈಜೋಡಿಸಿದ್ದಾರೆ.

ಉತ್ತರ ಕರ್ನಾಟಕದ ಕಥೆಯನ್ನು ಆಧರಿಸಿರುವ ವೆಂಕ್ಯಾ ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆ ಬರೆದವರು ಶ್ರೀನಿಧಿ ಡಿ.ಎಸ್. ಛಾಯಾಗ್ರಹಣದಲ್ಲಿ ಪ್ರಣವ್ ಮುಲೆ, ಸಂಗೀತದಲ್ಲಿ ಹೇಮಂತ್ ಜೋಯಿಸ್ ಅವರು ಮೋಡಿ ಮಾಡಲಿದ್ದಾರೆ.

Exit mobile version