Site icon Vistara News

ಪುಸ್ತಕ ಬಿಡುಗಡೆ | ಸಮಾನ ಚಿಂತಕರ ಬಳಗದಿಂದ ನಾಲ್ಕು ಕೃತಿಗಳ ಲೋಕಾರ್ಪಣೆ

book release function

ಬೆಂಗಳೂರು: ನಗರದ ಚಾಮರಾಜಪೇಟೆ ಮಾತಿನ ಮನೆಯಲ್ಲಿ ಸಮಾನ ಚಿಂತಕರ ಬಳಗದ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಬಳಗದ ಸದಸ್ಯರಾಗಿರುವ ಮೂವರು ಲೇಖಕರ ನಾಲ್ಕು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.

ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಲೇಖಕ ರೋಹಿತ್ ಚಕ್ರತೀರ್ಥ, ಸಮಾನ ಚಿಂತನೆಯನ್ನು ಮಾಡುತ್ತ ವಿಭಿನ್ನವಾಗಿ ಗುರುತಿಸಿಕೊಂಡಿರುವ ಸಾಹಿತ್ಯ, ಸಂಸ್ಕೃತಿ. ರಾಷ್ಟ್ರೀಯತೆಯನ್ನು ಒಗ್ಗೂಡಿಸಿಕೊಂಡು ಮುನ್ನುಗ್ಗುತ್ತಿರುವ ಬಳಗದ ಕಾರ್ಯ ಶ್ಲಾಘನೀಯ ಎಂದರು.

ಹನುಮಂತ ಮ. ದೇಶಕುಲಕರ್ಣಿ ಅವರ “ಶ್ರೀಕಾರʼʼ, ವಿನೋದ ಕಡಕೋಳ ಅವರ ಕೃತಿ “ಜೀನಿಯಸ್ ಐಎಎಸ್ ಕೈಪಿಡಿʼʼ, ಫಕೀರಚಂದ್ ಅವರ “ಬುಕ್ ಅಡ್ಡಾ ಮತ್ತು ಇತರೆ ಕಥೆಗಳುʼʼ ಕೃತಿ ಲೋಕಾರ್ಪಣೆಯಾದವು. ಇದೇ ಸಂದರ್ಭದಲ್ಲಿ ಸಮಾನ ಚಿಂತಕರು ಬಳಗದ ಸ್ಮರಣಸಂಚಿಕೆ ‘ಪಂಚಸಚಿ’ ಬಿಡುಗಡೆ ಮಾಡಲಾಯಿತು.

ಸಂಸ್ಕೃತಿ ಚಿಂತಕ ವಿದ್ವಾನ್ ನವೀನಶಾಸ್ತ್ರೀ ಪುರಾಣಿಕ, ಜಯಶೀಲಾ ಎಸ್.ಎನ್., ವಿನೋದ‌ ಕಡಕೋಳ ಕೃತಿಗಳ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ ಸೋಶಿಯಲ್ ಮೀಡಿಯಾದಲ್ಲಿ ಸತ್ಯವಲ್ಲದ ವಿಷಯಗಳು ಬಿತ್ತರಗೊಳ್ಳುತ್ತಿರುವ ಹಾಗೂ ಆಗುತ್ತಿರುವ ಪರಿಣಾಮವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಶ್ರೀ ಶಾರದಾ ಕಲಾನಿಕೇತನ ಬೆಂಗಳೂರು ಇವರಿಂದ ಟಿ.ಪಿ.ಕೈಲಾಸಂ ಅವರ ವಿರಚಿತ ಹೋಂ ರೂಲ್ ನಾಟಕವನ್ನು ಪ್ರದರ್ಶಿಸಲಾಯಿತು. ಹನುಮಂತ. ಮ. ದೇಶಕುಲಕರ್ಣಿ ಅವರ ವ್ಯಂಗ್ಯಚಿತ್ರ ಪ್ರದರ್ಶನವೂ ನಡೆಯಿತು. ಬಳಗದ ಸದಸ್ಯರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಹನುಮಂತ. ಮ. ದೇಶಕುಲಕರ್ಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಗದ ಸಂಚಾಲಕ ರಾ.ಸು. ವೆಂಕಟೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಯಶೀಲಾ ಎಸ್.ಎನ್. ನಿರೂಪಿಸದರು. ಸುಜಾತಾ ವಿಶ್ವನಾಥ ಸ್ವಾಗತಿಸಿದರು. ಡಾ.ಆರ್. ಶೈಲಜಾ ಶರ್ಮ ವಂದಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಮಾನ ಚಿಂತಕರು, ಬಳಗದ ಸರ್ವ ಸದಸ್ಯರು ಪಾಲ್ಗೊಂಡಿದ್ದರು.

ಇದನ್ನೂ ಓದಿ | Sunday Read | ಹೊಸ ಪುಸ್ತಕ | ಬೊಂಬಾಯ್‌ ಮಿಠಾಯಿ ಮಾಮ

Exit mobile version