Site icon Vistara News

ಪ್ರೀತಿಗಾಗಿ ಒಬ್ಬ ಆ್ಯಸಿಡ್‌ ಹಾಕಿದ, ಮತ್ತೊಬ್ಬ sorry ಕೇಳಿದ: ಈಗ ಮನೆ ಮಾಲೀಕನಿಗೆ ಚಿಂತೆ!

sorry case

ಬೆಂಗಳೂರು: ಪ್ರೀತಿಯ ವಿಚಾರಕ್ಕೆ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿರುವ ಹೆಸರು. ಈ ಪ್ರದೇಶದಲ್ಲೆ ಏಪ್ರಿಲ್‌ 28ರಂದು ಯುವತಿ ಮೇಲೆ ನಾಗೇಶ್‌ ಎಂಬಾತ ಆ್ಯಸಿಡ್‌ ಎರಚಿ ಓಡಿಹೋಗಿದ್ದ. ಮಂಗಳವಾರ ಇದೇ ಏರಿಯಾದಲ್ಲಿ ಇನ್ನೊಂದು ಪ್ರಕರಣದಲ್ಲಿ ಶಾಲಾ ಕಾಂಪೌಂಡ್‌, ಮೆಟ್ಟಿಲ ಮೇಲೆಲ್ಲ ಸ್ಪೃೇ ಪೈಂಟ್‌ ಬಳಸಿ ‘Sorry’ ಎಂದು ಗೀಚಿ ಹೋಗಿದ್ದಾನೆ. ಇಲ್ಲಿ ಮುಖ್ಯ ವಿಷಯ ಏನು ಎಂದರೆ, ಈ ಎರಡೂ ಘಟನೆಗಳು ನಡೆದ ಕಟ್ಟಡಗಳು ಒಬ್ಬರೇ ಮಾಲೀಕರಿಗೆ ಸೇರಿದ್ದು.

ಅಂದು ಯುವತಿಯನ್ನು ಆಕೆಯ ತಂದೆ, ಸುಂಕದಕಟ್ಟೆಯ ಮುತ್ತೂಟ್ ಮಿನಿ‌ ಫೈನಾನ್ಸ್ ಕಚೇರಿಗೆ ಡ್ರಾಪ್ ಮಾಡಿದರು. ಮೊದಲನೇ ಮಹಡಿಯಲ್ಲಿದ್ದ ಕಚೇರಿಗೆ ಮೆಟ್ಟಿಲು ಹತ್ತಿಕೊಂಡು ಹೋಗಬೇಕಿತ್ತು. ಕಚೇರಿಗೆ ಇನ್ನೂ ಯಾರೂ ಬಾರದೆ ಇದ್ದದ್ದರಿಂದ ಕಚೇರಿ ಬಾಗಿಲ ಹತ್ತಿರ ನಿಂತುಕೊಂಡಿದ್ದರು. ಈ ಸಮಯದಲ್ಲಿ ಆರೋಪಿ ನಾಗೇಶ್‌ ಹತ್ತಿರಕ್ಕೆ ಬಂದವನೇ, ಯುವತಿಯ ಮೈ ಮೇಲೆ ಆ್ಯಸಿಡ್‌ ಹಾಕಿ ಓಡಿ ಹೋಗಿದ್ದ. ಎದೆ, ಕೈಗಳು , ಹಾಗು ಬೆನ್ನಿಗೆ ಆ್ಯಸಿಡ್‌ ಬಿದ್ದು ಗಾಯಗಳಾಗಿದ್ದ ಯುವತಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅತ್ತ ತಲೆಮರೆಸಿಕೊಂಡಿದ್ದ ನಾಗೇಶನನ್ನು ಪೊಲೀಸರು ತಮಿಳುನಾಡಿನಿಂದ ಬಂಧಿಸಿ ಕರೆತಂದಿದ್ದಾರೆ. ಆ್ಯಸಿಡ್‌ ಎರಚಿತ ಘಟನೆ ನಡೆದ ಸ್ಥಳ, ಅಂದರೆ ಮುತ್ತೂಟ್‌ ಮಿನಿ ಫೈನಾನ್ಸ್‌ ಕಚೇರಿ ಇದ್ದ ಕಟ್ಟಡ ಗಂಗಾಧರಪ್ಪ ಎಂಬರಿಗೆ ಸೇರಿದ್ದು.

ಎರಡನೇ ಪ್ರರಕಣದಲ್ಲಿ, ಮಂಗಳವಾರ ಬೆಂಗಳೂರಿನ ಸುಂಕದಕಟ್ಟೆಯ ಶಾಂತಿಧಾಮ ಸ್ಕೂಲ್ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಇಡೀ  ರೋಡಿನ ತುಂಬಾ ಮತ್ತು, ಮನೆಯ ಕಾಂಪೌಂಡ್, ಮೆಟ್ಟಿಲ ಮೇಲೆಲ್ಲಾ ‘Sorry’ ಎಂದು ಬರೆದಿದ್ದ. ಈ ವಿಚಾರವಾಗಿ ಸ್ಥಳಿಯರಿಗೆ ಆಘಾತವಾಗಿದ್ದು, ಇದು ಯಾರು ಯಾರಿಗಾಗಿ ಬರೆದ ಬರಹ ಎಂದು ಕುತೂಹಲಗೊಂಡಿದ್ದರು. ಇದೀಗ ಕೂತೂಹಲ ಜತೆಗೆ ಪ್ರಖ್ಯಾತಿಯನ್ನೂ ಈ ಏರಿಯಾ ಪಡೆದಿದೆ. ಇಲ್ಲಿನ ವಿಶೇಷವೇನೆಂದರೆ, ಈಗ Sorry ಎಂದು ಬರೆಯಲಾಗಿರುವ ಶಾಲೆ ಹಾಗೂ ಮನೆಯೂ ಗಂಗಾಧರಪ್ಪ ಅವರಿಗೇ ಸೇರಿದ್ದು.

ದನ್ನೂ ಓದಿ | Acid Attack | 16 ದಿನದಲ್ಲಿ 100 ಪೊಲೀಸರಿಗೆ ಕೆಲಸ ಕೊಟ್ಟ ಆ್ಯಸಿಡ್‌ ನಾಗೇಶ್‌

ಈ ಹಿಂದೆ ನಾಗೇಶ್ ತನ್ನ ಪ್ರೀತಿ ಸಿಕ್ಕಿಲ್ಲ ಎಂದು ಆ್ಯಸಿಡ್‌ ಹಾಕಿದ್ದು ಇದೇ ಏರಿಯಾದ ಗಲ್ಲಿಯಲ್ಲಿ. ಈಗ ಹುಡುಗಿಗಾಗಿ ಊರು ತುಂಬಾ ‘sorry’ ಬರೆದು  ಪ್ರೀತಿಗಾಗಿ ಕ್ಷಮೆ ಕೇಳಿದವನು ಅದೇ ಏರಿಯಾದಲ್ಲಿ. ಇಡೀ ಕಾಮಾಕ್ಷಿಪಾಳ್ಯವನ್ನು ರಾಜ್ಯಾದ್ಯಂತ ಈ ರೀತಿ ಪ್ರಸಿದ್ಧಿಗೊಳಿಸಿದ ಎರಡೂ ಪ್ರಕರಣದಲ್ಲಿ ಗಂಗಾಧರಪ್ಪ ಮಾಲೀಕತ್ವದ ಕಟ್ಟಡಗಳು ಒಳಗೊಂಡಿವೆ. ಈ ವಿಚಾರ ಮಾಲೀಕನಿಗೆ ಸಂತೋಷಕ್ಕಿಂತಲೂ ಮುಜುಗರವನ್ನೇ ಉಂಟುಮಾಡುತ್ತಿವೆ.

ಇದನ್ನೂ ಓದಿ | Acid Attack | ಬೆಂಗ್ಳೂರ್‌ To ತಿರುವಣ್ಣಾಮಲೈ: ಆ್ಯಸಿಡ್‌ ನಾಗನ Travel History

Exit mobile version