Site icon Vistara News

Sanskrit Yuvajanotsavah: ಮಾ. 26ರಂದು ಮಲ್ಲೇಶ್ವರದಲ್ಲಿ ‘ಸಂಸ್ಕೃತ ಯುವಜನೋತ್ಸವಃ’ ಕಾರ್ಯಾಗಾರ

Sanskrit Yuvajanotsavah' workshop to be held at Malleshwaram on Mar.26

ಬೆಂಗಳೂರು: ಮೈತ್ರಿ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನದಿಂದ ಮಾರ್ಚ್ 26ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೆ ‘ಸಂಸ್ಕೃತ ಯುವಜನೋತ್ಸವಃ’ (Sanskrit Yuvajanotsavah) ಕಾರ್ಯಾಗಾರವನ್ನು ನಗರದ ಎಂಇಎಸ್‌ ಕಾಲೇಜಿನ ಕಲಾವೇದಿ ಸಭಾಂಗಣದಲ್ಲಿ ಹಮಿಕೊಳ್ಳಲಾಗಿದೆ. ಇದು ಸಂಸ್ಕೃತ ಕ್ಷೇತ್ರದಲ್ಲಿ ಕೆಲಸ ಮಾಡಬಯಸುವ ಯುವಕ-ಯುವತಿಯರಿಗಾಗಿ ಆಯೋಜಿಸಿರುವ ಒಂದು ದಿನದ ಕಾರ್ಯಾಗಾರವಾಗಿದೆ.

ಭವಿಷ್ಯದಲ್ಲಿ ಸಂಸ್ಕೃತ, ಸಂಸ್ಕೃತದ ಚಟುವಟಿಕೆಗಳು, ಸಂಸ್ಕೃತವನ್ನು ಪ್ರಚಾರ ಮಾಡುತ್ತಿರುವ ಸಂಘ-ಸಂಸ್ಥೆಗಳ ಪರಿಚಯ ಮತ್ತು ಸಂಸ್ಕೃತ ಕ್ಷೇತ್ರದಲ್ಲಿ ಯುವಜನರನ್ನು ಹೇಗೆ ತೊಡಗಿಸಿಕೊಳ್ಳುವುದು ಎಂಬ ವಿಚಾರಗಳ ಕುರಿತು ಈ ಕಾರ್ಯಾಗಾರವು ನಡೆಯಲಿದೆ. ನೂರಾರು ಜನ ಸಂಸ್ಕೃತ ಯುವಕ- ಯುವತಿಯರ ಸೇನೆಯನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ವಿಷಯ ತಜ್ಞರು ವಿವಿಧ ವಿಚಾರಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

ಇದನ್ನೂ ಓದಿ | ಮೇ 27, 28ರಂದು ವಿಸ್ತಾರ ಸಾಹಿತ್ಯ ಸಂಭ್ರಮ, ಪ್ರಕಾಶಕರ ಬೆಂಬಲ

ಬೆಂಗಳೂರಿನ ಐ.ಐ.ಎಸ್.ಸಿ ಹಿರಿಯ ವಿಜ್ಞಾನಿ ಪ್ರೊ.ಕೆ.ಜೆ.ರಾವ್, ಹಿರಿಯ ಸಂಸ್ಕೃತ ವಿದ್ವಾಂಸ ಪ್ರೊ. ಶೇಷಾದ್ರಿ ಅಯ್ಯಂಗಾರ್‌, ಚಲನಚಿತ್ರ, ರಂಗಭೂಮಿ ಕಲಾವಿದ ಸುಚೇಂದ್ರ ಪ್ರಸಾದ್, ಖ್ಯಾತ ನಗೆ ಬರಹಗಾರರು ಮತ್ತು ಹಿರಿಯ ಸಾಹಿತಿ ಎಂ.ಎಸ್. ನರಸಿಂಹಮೂರ್ತಿ, ಖ್ಯಾತ ಆಯುರ್ವೇದ ವೈದ್ಯ ಡಾ. ನಿರಂಜನ್, ಪ್ರೊ. ಮುರುಳಿಧರ್ ಶರ್ಮಾ ಹಾಗೂ ವಿವಿಧ ಸಂಸ್ಕೃತ ವಿದ್ವಾಂಸರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯುವಜನರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಸಂಸ್ಕೃತ ಭಾವಗೀತೆಗಳ ಪ್ರಸ್ತುತಿ ‘ಸಾಮರಸ್ಯಮ್’

ಕಾರ್ಯಕ್ರಮದ ಅಂಗವಾಗಿ ಸಂಜೆ 5ರಿಂದ 6 ಗಂಟೆವರೆಗೆ ʼಸಾಮರಸ್ಯಮ್ʼ ವಿಶೇಷ ಸಂಸ್ಕೃತ ಭಾವಗೀತೆಗಳ ಕಾರ್ಯಕ್ರಮ ನಡೆಯಲಿದೆ. ಕರುಣಾಳು ಬಾ ಬೆಳಕೆ…… ಯಾವಮೋಹನ ಮುರಳಿ ಕರೆಯಿತೋ……, ಭಾಗ್ಯಾದ ಬಳೆಗಾರ…… ಧರಣಿ ಮಂಡಲ ಮಧ್ಯದೊಳಗೆ…… ಮುಂತಾದ ಜನಪ್ರಿಯ ಕನ್ನಡದ ಭಾವಗೀತೆಗಳನ್ನು ಸಂಸ್ಕೃತದಲ್ಲಿ ಪ್ರಸ್ತುತಪಡಿಸುವ ಒಂದು ವಿಶೇಷ ಹಾಗೂ ವಿನೂತನ ಕಾರ್ಯಕ್ರಮವನ್ನು ಆಕಾಶವಾಣಿ ಕಲಾವಿದೆ ಭವಾನಿ ಹೆಗಡೆ ಮತ್ತು ತಂಡವು ನಡೆಸಿಕೊಡಲಿದೆ.

ʼಮನಸು ಅರಳಲಿʼ ಕೃತಿ ಲೋಕಾರ್ಪಣೆ

ಮನೋಲ್ಲಾಸ ಅಂಕಣಗಳ ಡಾ. ಗಣಪತಿ ಹೆಗಡೆ ಅವರು ಬರೆದ ವಿಜಯವಾಣಿಯ ಮನೋಲ್ಲಾಸ ಅಂಕಣಗಳ ಸಂಗ್ರಹ ‘ಮನಸು ಅರಳಲಿ’ ಪುಸ್ತಕದ ಲೋಕಾರ್ಪಣೆಯಾಗಲಿದೆ.

Exit mobile version