Site icon Vistara News

ಥಾಣೆಯಲ್ಲಿ ನ.19ಕ್ಕೆ ಸಪ್ತಕ-ಸಂಗೀತ, ಮುಂಬಯಿಯಲ್ಲಿ ನ.20ಕ್ಕೆ ಸ್ವರ-ಧಾರಾ ಕಾರ್ಯಕ್ರಮ

ಸಪ್ತಕ

ಮುಂಬಯಿ: ಬೆಂಗಳೂರಿನ ಸಪ್ತಕ ಸಂಸ್ಥೆ ಹಾಗೂ ಥಾಣೆಯ ಕಲ್ವಾ ʼಸಂಗೀತ ಪ್ರೇಮಿ ಮಂಡಲʼ ವತಿಯಿಂದ ಮುಂಬಯಿ ಸಮೀಪದ ಥಾಣೆ ಪಶ್ಚಿಮದ(Thane west) ಪ್ರಭಾತ್‌ ಟಾಕೀಸ್ ಸ್ಟೇಷನ್‌ ರಸ್ತೆ ಎದುರಿನ ಮರಾಠಿ ಗ್ರಂಥ ಸಂಗ್ರಹಾಲಯ ಹಾಲ್‌ನಲ್ಲಿ ನ.19 ರಂದು ಸಂಜೆ 6 ಗಂಟೆಗೆ ಸಪ್ತಕ-ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಪ್ತಕ ಸಂಚಾಲಕ ಜಿ.ಎಸ್‌.ಹೆಗಡೆ ತಿಳಿಸಿದ್ದಾರೆ.

ಬೆಂಗಳೂರಿನ‌ ಖ್ಯಾತ ಹಿಂದೂಸ್ತಾನಿ ಸಂಗೀತ ವಿದುಷಿ ಗೀತಾ ಹೆಗಡೆ ಮತ್ತು ಪುಣೆಯ ಸಂಗೀತ ಗುರು ಪಂಡಿತ್‌ ಉಲ್ಲಾಸ್‌ ಕಶಾಲ್ಕರ್ ಅವರ ಶಿಷ್ಯೆ, ಗಾಯಕಿ ಅನಘಾ ಭಟ್‌, ಮುಂಬಯಿಯ ಸೀಮಾ ಶಿರೋಡ್ಕರ್‌ ಅವರ ಶಿಷ್ಯೆ, ಹಾರ್ಮೋನಿಯಂ ಕಲಾವಿದೆ ಸುಪ್ರಿಯಾ ಜೋಶಿ, ಪುಣೆಯ ಸುರೇಶ್‌ ತಲ್ವಾಲ್ಕರ್‌ ಅವರ ಶಿಷ್ಯ, ತಬಲಾ ವಾದಕ ಅಜಿಂಕ್ಯಾ ಗಲಾಂಡೆ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಗೀತ ಪ್ರೇಮಿ ಮಂಡಲ ಅಧ್ಯಕ್ಷ ವಿದ್ಯಾಧರ್‌ ಥಾಣೆಕರ್‌, ಕಾರ್ಯದರ್ಶಿ ಮಂದರ್‌ ಘೈಸಾಸ್, ಪಂಡಿತ್ ಜಿ.ಜಿ.ಜೋಶಿ, ಗೌರವ ಖಜಾಂಚಿ ಸುಚಿತಾ ಘೈಸಾಸ್ ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದು ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | ವಿಸ್ತಾರ ಭಾಗ- 1 | ಹೊಸ ತಿಳಿವಿನ ಬಾಗಿಲು | ನೈತಿಕ ಶುದ್ಧತೆಯ ಬರಹಗಳು; ಹರಿಪ್ರಕಾಶ್‌ ಕೋಣೆಮನೆ ಅಂಕಣಗಳ ಸಂಗ್ರಹ

ಮುಂಬಯಿಯಲ್ಲಿ ನ.20 ರಂದು ಸ್ವರ-ಧಾರಾ ಕಾರ್ಯಕ್ರಮ

ಮುಂಬಯಿ: ಬೆಂಗಳೂರಿನ ಸಪ್ತಕ ಸಂಸ್ಥೆ ಹಾಗೂ ಮುಂಬಯಿಯ ವಿಲೇಜ್‌ ಮ್ಯೂಸಿಕ್‌ ಕ್ಲಬ್‌ ವತಿಯಿಂದ ಮುಂಬಯಿಯ ಕಾಂಡಿವಿಲಿ ಪೂರ್ವದ ಠಾಕೂರ್‌ ವಿಲೇಜ್‌ನ ಸನ್‌ಫ್ಲವರ್‌ ಸಿಎಚ್‌ಎಸ್‌ಎಲ್‌ ಎದುರಿನ ವ್ಯಾಲಿ ಆಫ್‌ ಫ್ಲವರ್ಸ್‌ ಕ್ಲಬ್‌ನಲ್ಲಿ ನ.20ರಂದು ಸಂಜೆ 5 ಗಂಟೆಗೆ ಸ್ವರ-ಧಾರಾ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕುಮಟಾ ಗೌರೀಶ ಯಾಜಿ ಅವರ ಶಿಷ್ಯ ಹಾಗೂ ಮುಂಬಯಿಯ ಪಂಡಿತ್‌ ಮಿಲಿಂದ್‌ ರಾಯ್ಕರ್‌ ಅವರ ಶಿಷ್ಯ, ಕೊಳಲು ವಾದಕ ಕಿಶೋರ್‌ ಕೊಂಡದಕುಳಿ, ಉದಯ್‌ ಜೋಶಿ ಮತ್ತು ಭೂಷಣ ಮುಂಜ ಅವರ ಶಿಷ್ಯ, ತಬಲಾ ವಾದಕ ಸೊಹಮ್‌ ಎಸ್‌. ಪರಾಲೆ, ಮುಂಬಯಿಯ ಗಾಯಕ ಉಸ್ತಾದ್‌ ರಾಜಾ ಮಿಯಾನ್‌, ತಬಲಾ ವಾದಕ ಪಂಡಿತ್‌ ರಾಜೇಂದ್ರ ಅಂತರಕರ, ಹಾರ್ಮೋನಿಯಂ ವಾದಕ ಪಂಡಿತ್‌ ಶ್ರೀನಿವಾಸ ಆಚಾರ್ಯ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಪ್ತಕ ಸಂಚಾಲಕ ಜಿ.ಎಸ್.ಹೆಗಡೆ, ವಿಲೇಜ್‌ ಮ್ಯೂಸಿಕ್‌ ಕ್ಲಬ್‌ ಸಂಯೋಜಕಿ ಭಾರತಿ ನಾಯಕ್‌ ಮತ್ತಿತರರು ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ | ವಿಸ್ತಾರ ಭಾಗ- 2 | ಹರಿವ ನದಿಗೆ ಸಾವಿರ ಕಾಲು | ಕಾಣದ್ದನ್ನೂ ಹೊಳೆಯಿಸುವ ಬರಹಗಳು | ಹರಿಪ್ರಕಾಶ್‌ ಕೋಣೆಮನೆ ಅಂಕಣಗಳ ಸಂಗ್ರಹ

Exit mobile version