Site icon Vistara News

School Timing : ಮತ್ತೆ ಬದಲಾಗುತ್ತಾ ಶಾಲಾ ಸಮಯ!

Bengaluru traffic effect on school Timings

ಬೆಂಗಳೂರು: ಬೆಂಗಳೂರಿನ ಶಾಲೆಗಳ ಸಮಯ ಬದಲಾವಣೆ (School Timing) ಮಾಡುವ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಸಂಚಾರ ದಟ್ಟಣೆಯನ್ನು (Bengaluru Traffic ) ತಗ್ಗಿಸುವ ನಿಟ್ಟಿನಲ್ಲಿ ಶಾಲಾ ಅವಧಿಯಲ್ಲಿ ಬದಲಾವಣೆ ಮಾಡಲು ಶಿಕ್ಷಣ ಇಲಾಖೆಯಲ್ಲಿ ಚರ್ಚೆ ನಡೆದಿದೆ. ಆದರೆ ಶಾಲಾ ಸಮಯ ಬದಲಾವಣೆಗೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಪ್ರತಿ ಮನೆಯಲ್ಲಿ ಕನಿಷ್ಠ ಅಂದರೂ ಮೂರ್ನಾಲ್ಕು ವಾಹನಗಳು ಇದ್ದೆ ಇರುತ್ತೆ. ನಗರದಲ್ಲಿ ಟ್ರಾಫಿಕ್‌ ಕಂಟ್ರೋಲ್‌ ಮಾಡಲು ಸದ್ಯ ಶಿಕ್ಷಣ ಇಲಾಖೆ ಶಾಲಾ ಸಮಯ ಬದಲಾವಣೆ ಮಾಡಲು ಮುಂದಾಗಿದೆ.

ಇದನ್ನೂ ಓದಿ: Stars Festival fashion: ಗಣೇಶ ಹಬ್ಬದ ಸೆಲೆಬ್ರೇಷನ್‌ಗೆ ಟ್ರೆಡಿಷನಲ್‌ ಲುಕ್‌ನಲ್ಲಿ ಮಿನುಗಿದ ತಾರೆಯರು

ಸಂಚಾರ ದಟ್ಟಣೆಯನ್ನ ತಗ್ಗಿಸುವ ಸಲುವಾಗಿ ಶಾಲಾ ಅವಧಿಯಲ್ಲಿ ಬದಲಾವಣೆ ‌ಮಾಡಲು ಕೋರ್ಟ್ ಕೆಲ ದಿನಗಳ ಹಿಂದೆ ಶಿಕ್ಷಣ ಇಲಾಖೆಗೆ ಸೂಚನೆ ನೀಡಿತ್ತು. ಆದರೆ ಇದುವರೆಗೂ ಶಿಕ್ಷಣ ಇಲಾಖೆ ಶಾಲಾ ಸಮಯ ಬದಲಾವಣೆ ವಿಚಾರವಾಗಿ ಯಾರ ಜತೆಯೂ ಚರ್ಚೆ ನಡೆಸಿಲ್ಲ. ಪೋಷಕ ಸಮನ್ವಯ ಸಮಿತಿ, ಖಾಸಗಿ ಶಾಲಾ ಒಕ್ಕೂಟ ಮುಖಂಡರ ಜತೆ ಶಾಲೆ ಸಮಯ ಬದಲಾವಣೆ ಮಾಡಲು ಚರ್ಚೆ ನಡೆಸಿಲ್ಲ. ಇನ್ನು ಈ ಕುರಿತಂತೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಈಗ ಇರುವ ಅವಧಿಯೆ ಸೂಕ್ತವಾಗಿದ್ದು, ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು ಎಂದು ಮನವಿ ಮಾಡಿದ್ದಾರೆ.

ರಾಜ್ಯಾದ್ಯಂತ ಬಹುತೇಕ ಶಾಲೆಗಳಲ್ಲಿ ಬೆಳಗ್ಗೆ 8.45 ರಿಂದ ಮಧ್ಯಾಹ್ನ 3.30 ರವರೆಗೆ ತರಗತಿಗಳು ನಡೆಯುತ್ತವೆ. ಈ ಸಮಯವನ್ನು ಅರ್ಧತಾಸು ಇಳಿಕೆ ಮಾಡಿದರೆ ಹೇಗೆ ಎಂಬ ಚರ್ಚೆ ಕೂಡ ಅಧಿಕಾರಿಗಳು ‌ನಡೆಸಿದ್ದಾರೆ. ಆದರೆ ಟ್ರಾಫಿಕ್ ‌ಕಡಿಮೆ‌ ಮಾಡುವ ನಿಟ್ಟಿನಲ್ಲಿ ಶಾಲಾ ಅವಧಿ ಬೇಗ ಮಾಡುವುದು ಸರಿಯಲ್ಲ. ಯಾಕೆಂದರೆ ಮಕ್ಕಳ ದೈಹಿಕ ಚಟುವಟಿಕೆಗೆ ಕಾಲಾವಕಾಶ ಸಿಗಲ್ಲ. ಅಲ್ಲದೆ ನಿದ್ರೆ ಕೊರತೆಯಿಂದ ‌ಮಕ್ಕಳ ಆರೋಗ್ಯ ಸಮಸ್ಯೆಯಾಗಬಹುದು. ನಗರದಲ್ಲಿ ಎಲ್ಲಿ ಟ್ರಾಫಿಕ್ ಜಾಸ್ತಿಯಾಗಲಿದ್ಯೋ ಅಲ್ಲಿ ಶಾಲಾ ಸಮಯ ಬದಲಾವಣೆ ಮಾಡಿ ಎಂದು ಖಾಸಗಿ ಶಾಲಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಶಿಕ್ಷಣ ಇಲಾಖೆಗೆ ಸಲಹೆ ನೀಡಿದ್ದಾರೆ.

ನಗರದಲ್ಲಿ ಹೆಚ್ಚಾಗುತ್ತಿರುವ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಶಾಲಾ ಸಮಯ ಬದಲಾವಣೆಗೆ ಮುಂದಾಗಿದೆ. ಆದರೆ ಇದಕ್ಕೆ ಪರ- ವಿರೋಧ ವ್ಯಕ್ಯವಾಗಿದ್ದು, ಶಿಕ್ಷಣ ಇಲಾಖೆ ಯಾವ ರೀತಿ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version