Site icon Vistara News

Assault on security guard : ಡೆಲಿವರಿ ಸಿಬ್ಬಂದಿಯಿಂದ ಸೆಕ್ಯುರಿಟಿ ಗಾರ್ಡ್‌ ಮೇಲೆ ಹಲ್ಲೆ

security guard

ಬೆಂಗಳೂರು: ಡೆಲಿವರಿ ಸಿಬ್ಬಂದಿಯಿಂದ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆದ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿಯಲ್ಲಿ (Assault on security guard) ನಡೆದಿದೆ.

ಅಪಾರ್ಟ್‌ಮೆಂಟ್‌ಗೆ ದಿನಸಿ ವಸ್ತುಗಳನ್ನ‌ ಡೆಲಿವರಿ ಮಾಡಲು ಯುವಕ ಬಂದಿದ್ದ. ವಾಪಸ್ ಬರುವ ವೇಳೆ ಬ್ಯಾಗ್ ಚೆಕ್ ಮಾಡಬೇಕು ಎಂದು ಸೆಕ್ಯೂರಿಟಿ ಗಾರ್ಡ್ ತಿಳಿಸಿದ್ದ. ಬ್ಯಾಗ್ ಚೆಕ್ ಮಾಡಬೇಕು ಎಂದಾಗ ಸೆಕ್ಯೂರಿಟಿ ಮೇಲೆ ಡೆಲಿವರಿ ಸಿಬ್ಬಂದಿ ಗದ್ದಲ ಮಾಡಿದ್ದಾನೆ. ನಂತರ ಪೋನ್ ಮಾಡಿ ಕೆಲವು ಹುಡುಗರನ್ನು ಕರೆಸಿಕೊಂಡು ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದಾನೆ. ನಾಲ್ಕೈದು ಜನ ಯುವಕರಿಂದ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆದಿದೆ.

ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಂಪಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಯುವಕರನ್ನು ಸಂಪಿಗೆಹಳ್ಳಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Exit mobile version