Site icon Vistara News

Textbook Revision: ಫೀಸ್ ಕಟ್ಟಲು ಸಾಧ್ಯವಿಲ್ಲದ ಮಕ್ಕಳಿಗೆ ಮಾತ್ರ ಎಸ್‌ಇಪಿ: ರಾಜ್ಯ ಸರ್ಕಾರದ ವಿರುದ್ಧ ಬಿ.ಸಿ. ನಾಗೇಶ್‌ ಕಿಡಿ

BC Nagesh

#image_title

ಬೆಂಗಳೂರು: ಸಿಬಿಎಸ್‌ಸಿ, ಐಸಿಎಸ್‌ಸಿ ಶಾಲೆಗಳಲ್ಲಿ ಈಗಾಗಲೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿದೆ. ಆದರೆ, ಫೀಸ್ ಕಟ್ಟಲು ಸಾಧ್ಯವಿಲ್ಲದ ಮಕ್ಕಳಿರುವ ಸರ್ಕಾರಿ ಶಾಲೆಗಳಲ್ಲಿ ಮಾತ್ರ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) (Textbook Revision) ನಡೆಯುತ್ತದೆ. ಡಿಕೆಶಿ, ಎಂಬಿ ಪಾಟೀಲ್, ಖರ್ಗೆ, ಖಂಡ್ರೆ ಅವರ ಶಾಲೆಗಳಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯ ಇರುತ್ತದೆ. ಈ ತರಹದ ಹುಡುಗಾಟದ ವ್ಯವಸ್ಥೆ ರಾಜ್ಯದಲ್ಲಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಕಿಡಿಕಾರಿದ್ದಾರೆ.

ಪಠ್ಯ ಬದಲಾವಣೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜುಕೇಶನ್ ವತಿಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಪೀಪಲ್ಸ್ ಫೋರಂ ರಾಜ್ಯ ಪ್ರವಾಸ ಮಾಡಿ, ಮಾಹಿತಿ ಸಂಗ್ರಹ ಮಾಡುವ ಕೆಲಸ ಮಾಡಿದೆ. ಶಿಕ್ಷಣ ರಾಜಕೀಯದಿಂದ ದೂರ ಇರಬೇಕು ಅಂತ ಎಲ್ಲರ ಭಾವನೆ. ಒಂದಷ್ಟು ಜನ ಶಿಕ್ಷಣವನ್ನು ರಾಜಕೀಯಕ್ಕೆ ಹೋಗದೆ, ಮುಂದಿನ ಪೀಳಿಗೆಗೆ ಹೇಗೆ ಇರಬೇಕು ಏಂದು ಆಲೋಚಿಸುವವರು ಇದ್ದಾರೆ. ಆದರೆ ಪರಿಷ್ಕೃತ ಪಠ್ಯವನ್ನು ರಾಜ್ಯ ಸರ್ಕಾರ ಹಿಂಪಡೆಯಲು ಮುಂದಾಗಿರುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ | Power Point with HPK : ಮುಂದಿನ ವರ್ಷಕ್ಕೆ 600 ಕೆಪಿಎಸ್‌ ಶಾಲೆ; ಮಕ್ಕಳಿಗೆ ತಗ್ಗಲಿದೆ ಬ್ಯಾಗ್‌ ಹೊರೆ!

1975ರಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್‌) ರಚನೆಯಾಯಿತು. 1988ರಲ್ಲಿ ಒಂದು ಎನ್‌ಸಿಎಫ್‌ ಬಂತು. ಅದರ ಉದ್ದೇಶ ಪಠ್ಯ ಪುಸ್ತಕ ಹೇಗೆ ಇರಬೇಕು ಅಂತ ನಿರ್ಧಾರ ಮಾಡುವುದಾಗಿದೆ. NCF ಆವತ್ತಿನ ಬೆಳವಣಿಗೆಗೆ ಸಂಬಂಧಿಸಿದಂತೆ ಪಠ್ಯ ಪರಿಷ್ಕರಣೆ ಮಾಡುತ್ತಿತ್ತು. 2009ರಲ್ಲಿ 511 ಪಠ್ಯ ಪರಿಷ್ಕರಣೆ ಮಾಡಿತು. ಮೊದಲ ಬಾರಿಗೆ ಅಂದು ಪಠ್ಯ ಬದಲಾವಣೆ ಮಾಡಿತು. ಮಕ್ಕಳ ಮಾನಸಿಕತೆ ಆಧಾರದ ಮೇಲೆ ಪಠ್ಯ ರಚನೆ ಮಾಡಲಾಯಿತು. ಇದಕ್ಕಾಗಿ 511 ಕಮಿಟಿ ಮಾಡಿ, ಪ್ರತಿ ಕಮಿಟಿಗೆ 6 ಜನ ತಜ್ಞರನ್ನು ನೇಮಕ ಮಾಡಿದ್ದರು. ಮೂರು ವರ್ಷಗಳ ಬಳಿಕ ಪಠ್ಯ ರಚನೆಯಾಯಿತು ಎಂದು ತಿಳಿಸಿದರು.

ಯಡಿಯೂರಪ್ಪ ಅವರು ಸಿಎಂ, ಕಾಗೇರಿ ಶಿಕ್ಷಣ ಸಚಿವರಾಗಿದ್ದಾಗ ಎನ್‌ಸಿಎಫ್‌ ಆಧಾರದ ಮೇಲೆ ಪಠ್ಯ ರಚನೆ ಮಾಡಲಾಗಿತ್ತು. ಶಿಕ್ಷಣ ಎಂಬುವುದು ಮುಂದೆ ಹೋಗುವುದೇ ಹೊರತು ಹಿಂದೆ ಬರುವುದಲ್ಲ. ಎನ್‌ಸಿಎಫ್‌ ಜಾರಿಗೆ ತರಲು ಯಾರೆಲ್ಲಾ ಓಡಾಡಿದರು ಎಂಬುವುದು ಗೊತ್ತಿದೆ. ಆದರೆ, 2005ರ ಎನ್‌ಸಿಎಫ್‌ NCF ಪಠ್ಯ ಅಳಿಸುವ ಮೂರ್ಖ ಪ್ರಯತ್ನ ಮಾಡಿದ್ದಾರೆ. ಹೊಸ ಸಮಿತಿ ಮಾಡಿ ಒಂದಷ್ಟು ಹಣ ಖರ್ಚು ಮಾಡಿದ್ದು ಬಿಟ್ಟರೆ ಬೇರೇನೂ ಆಗಲಿಲ್ಲ. 2023ರ ಎನ್‌ಸಿಎಫ್‌ ಈಗಾಗಲೇ ಬಂದಿದೆ. ಮುಂದೆ ಮಕ್ಕಳು ಏನನ್ನು ಕಲಿಯಬೇಕು ಅಂತ ನಿರ್ಧಾರ ಆಗಿದೆ ಎಂದು ತಿಳಿಸಿದರು.

ಇವರು ಮತ್ತೆ 2005ರ ಶಿಕ್ಷಣಕ್ಕೆ ಹೋಗುತ್ತೇವೆ ಎಂದು ಕುಳಿತಿದ್ದಾರೆ. ಆಶ್ಚರ್ಯ ಎಂದರೆ ಶಿಕ್ಷಣ ಮಂತ್ರಿ ಯಾರು ಅಂತಲೇ ಗೊತ್ತಿಲ್ಲ. ಒಂದು ಕಡೆ ರಾಮಲಿಂಗಾರೆಡ್ಡಿ, ಮತ್ತೊಂದು ಕಡೆ ಡಿಕೆಶಿ ಮಾತನಾಡುತ್ತಾರೆ. ಇವರೆಲ್ಲಾ ಮಾತನಾಡಿದ ಬಳಿಕ‌ ಶಿಕ್ಷಣ ಸಚಿವರು ಆಯ್ತು ಅಂತ ಒಪ್ಪಿಕೊಳ್ಳುವರ ತರಹ ಆಗಿದೆ ಎಂದು ಹೇಳಿದರು.

ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜುಕೇಶನ್‌ನ ರಾಮಚಂದ್ರ ಶೆಟ್ಟರ್ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಹೇಳಿದ ಒಂದೇ ಕಾರಣಕ್ಕೆ, ಮೂರು ಸಾವಿರ ಶಿಕ್ಷಣ ತಜ್ಞರು ಚರ್ಚೆ ಮಾಡಿ ನಿರ್ಧಾರ ಮಾಡಿದ ಪಠ್ಯವನ್ನೇ ಬದಲಿಸಲು ಸರ್ಕಾರ ಮುಂದಾಗಿದೆ. ಇದು ತುಘಲಕ್ ನಿರ್ಧಾರವಾಗಿದೆ. ಆರ್ಯರ ವಲಸೆ ಸಿದ್ಧಾಂತವನ್ನು ಸಂಪೂರ್ಣ ವಿರೋಧ ಮಾಡಿದವರು, ಮತ್ತೆ ಅದನ್ನೇ ಮಕ್ಕಳಿಗೆ ಕಲಿಸಲು ಮುಂದಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ | Power Point with HPK : ಜನ ನಮಗೆ ಅಧಿಕಾರ ಕೊಟ್ಟಿದ್ದೇ ಪಠ್ಯಪುಸ್ತಕ ಪರಿಷ್ಕರಣೆ ಮಾಡಲು!

ಐದನೇ ತರಗತಿಯ ಮಕ್ಕಳಿಗೆ ಜಾತಿ ವಿಷ ಬೀಜ ಬಿತ್ತುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ತಜ್ಞರಿಂದಲೇ ಸಿದ್ಧವಾದ ಪಠ್ಯವನ್ನೇ ಜಾರಿಗೆ ತರಲು ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ. ಇದಕ್ಕಾಗಿ ವಿದ್ಯಾರ್ಥಿಗಳು ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆ ನಡೆಸುವವರ ನಡುವೆ ಜಾಗೃತಿ ಮೂಡಿಸಬೇಕಿದೆ. ರಾಜ್ಯಾದ್ಯಂತ ಈ ಸಂಬಂಧ ಮಕ್ಕಳಿಗೆ ಅವೈಜ್ಞಾನಿಕ ಪಠ್ಯ ಬೋಧಿಸುವುದನ್ನು ಹಿಂಪಡೆಯುವಂತೆ ಆಗ್ರಹ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ, ಅ. ದೇವೇಗೌಡ ಮತ್ತಿತರರು ಇದ್ದರು.

Exit mobile version