ಬೆಂಗಳೂರು: ವ್ಯಾಸ್ಕ್ಯುಲಾರ್ ಸಮಸ್ಯೆಗಳನ್ನು ಪತ್ತೆ ಹಚ್ಚಲು ಹಾಗೂ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡಲು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ವ್ಯಾಸ್ಕ್ಯುಲಾರ್ ವಿಭಾಗ ಪ್ರಾರಂಭ ಮಾಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ (Sharan Prakash Patil) ತಿಳಿಸಿದರು. ಅವರು ವ್ಯಾಸ್ಕ್ಯುಲಾರ್ ಸೊಸೈಟಿ ಆಫ್ ಇಂಡಿಯಾ ಹಾಗೂ ವ್ಯಾಸ್ಕಾರ್ ವತಿಯಿಂದ ನಗರದ ಕಂಠೀರವ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ವಾಕಥಾನ್ ಗೆ ಚಾಲನೆ ನೀಡಿ ಮಾತನಾದಡಿದರು.
ಈಗಾಗಲೇ ಬೆಂಗಳೂರು ಹಾಗೂ ಮೈಸೂರಿನಲ್ಲಿ ವ್ಯಾಸ್ಕ್ಯುಲಾರ್ ವಿಭಾಗ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಲುಬುರುಗಿ, ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿಯೂ ಆರಂಭವಾಗಲಿದ್ದು, ವಿಕ್ಟೋರಿಯಾ ಹಾಗೂ ಸಂಜಯ್ ಗಾಂಧೀ ಆಸ್ಪತ್ರೆಯಲ್ಲಿಯೂ ವಿಭಾಗ ತೆರೆಯುವ ಉದ್ದೇಶವಿಟ್ಟುಕೊಂಡಿದ್ದೇವೆ ಎಂದರು.
ಹಿರಿಯ ವ್ಯಾಸ್ಕ್ಯುಲಾರ್ ಸರ್ಜನ್ ಡಾ.ಕೆ.ಆರ್.ಸುರೇಶ್ ಮಾತನಾಡಿ ಹೃದಯಾಘಾತದಂತೆ(ಹಾರ್ಟ್ ಅಟ್ಯಾಕ್) ಲೆಗ್ ಅಟ್ಯಾಕ್ ಕೂಡ ಮನುಷ್ಯನಿಗೆ ಪ್ರಾಣಾಂತಿಕವಾಗಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದಿದ್ದರೆ ಕಾಲು ಕತ್ತರಿಸುವ ಸಂದರ್ಭ ಉಂಟಾಗಿ ಜೀವಕ್ಕೆ ಹಾನಿಯಾಗಲಿದೆ. ಧೂಮಪಾನ, ಮಧುಮೇಹ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಉತ್ತಮ. ನಡೆಯುವಾಗ ಕಾಲಿನಲ್ಲಿ ನೋವು ಕಂಡು ಬಂದರೆ, ಕಾಲಿನಲ್ಲಿ ಜೋಮು ಹಾಗೂ ತಂಪಿನಂತಹ ಲಕ್ಷಣಗಳು ಕಂಡು ಬಂದಾಗ ಹತ್ತಿರದ ವ್ಯಾಸ್ಕ್ಯುಲಾರ್ ಸರ್ಜನ್ ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: Spandana Vijay Raghavendra: ಸ್ಪಂದನ ಅಗಲಿ ಒಂದು ವರ್ಷ, ಭಾವುಕ ಪೋಸ್ಟ್ ಮಾಡಿದ ವಿಜಯ್ ರಾಘವೇಂದ್ರ
ವ್ಯಾಸ್ಕಾರ್ ಅಧ್ಯಕ್ಷರಾದ ಡಾ.ವೆಂಕಟೇಶ್ ರೆಡ್ಡಿ ಮಾತನಾಡಿ ಕಳೆದ ಮೂರು ದಶಕಗಳಿಂದ ವ್ಯಾಸ್ಕ್ಯುಲರ್ ಸರ್ಜನ್ ಅಸೋಸಿಯೇಷನ್ ನಿರಂತರ ಸೇವೆ ಸಲ್ಲಿಸುತ್ತಾ ಬಂದಿದ್ದು, ದಿವಂಗತ ಡಾ.ಎನ್.ಕೆ ಭಗವಾನ್ ದೂರದೃಷ್ಠಿ ಹಾಗೂ ಪ್ರಸ್ತುತ ಡಾ.ಕೆ.ಆರ್.ಸುರೇಶ್‌ರವರ ಮಾರ್ಗದರ್ಶನದಲ್ಲಿ ಸಹಸ್ತ್ರಾರು ಶಸ್ತ್ರಚಿಕಿತ್ಸೆಗಳ ಮೂಲಕ ಸಾವಿರಾರು ರೋಗಿಗಳು ಶ್ವಾಶ್ವತ ಅಂಗವಿಕಲರಾಗುವುದನ್ನು ತಪ್ಪಿಸಿರುವುದು ಹೆಮ್ಮೆಯ ಸಂಗತಿಯಾಗಿದ್ದು ವ್ಯಾಸ್ಕಾರ್ ಅರಿವು ಕಾರ್ಯಕ್ರಮ ನಿರಂತರವಾಗಿರಲಿದೆ ಎಂದು ಎಂದರು.
ಕಂಠೀರವ ಸ್ಟೇಡಿಯಂನಿಂದ ಆರಂಭವಾದ ವಾಕಥಾನ್ ಕಸ್ತೂರ್ಬಾ ರಸ್ತೆ, ವಿಧಾನಸೌಧ, ನೃಪತುಂಗ ರಸ್ತೆ ಮುಖಾಂತರ ಕಂಠೀರವ ಸ್ಟೇಡಿಯಂನಲ್ಲಿ ಅಂತ್ಯಗೊಂಡಿತು. ರಾಜ್ಯದ ಸಾವಿರಕ್ಕೂ ಹೆಚ್ಚು ವೈದ್ಯರು, ವೈದ್ಯಕೀಯ ವಿದ್ಯಾರ್ಥಿ, ಶೂಶ್ರೂಷಕ ಸಿಬ್ಬಂಧಿ ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.
ರಾಜೀವ್ ಗಾಂಧೀ ಆರೋಗ್ಯ ವಿಶ್ವವಿದ್ಯಾಲಯ ಕುಲಪತಿ ರಮೇಶ್ ಎಂ.ಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ,ಜಯದೇವ ಕಾರ್ಡಿಯಾಕ್ ಆಸ್ಪತ್ರೆಯ ವ್ಯಾಸ್ಕ್ಯುಲಾರ್ ಸರ್ಜನ್ ಡಾ.ಮುರುಳಿ ಕೃಷ್ಣ,ರಾಷ್ಟ್ರೀಯ ಭದ್ರತೆ ಮಾಜಿ ಸಲಹೆಗಾರರಾದ ಪದ್ಮವಿಭೂಷಣ ವಿ.ಕೆ.ಆತ್ರೆ, ವಿಎಸ್‌ಐನ ಅಧ್ಯಕ್ಷರಾದ ಡಾ.ವಿವೇಕಾನಂದ್, ರಾಜ್ಯ ವ್ಯಾಸ್ಕರ್ ಸೊಸೈಟಿ ಕಾರ್ಯದರ್ಶಿ ಡಾ.ವಿಷ್ಣು, ಚಿತ್ರನಟಿ ಸಂಜನಾ ಗಲ್ರಾನಿ ಮುಂತಾದವರಿದ್ದರು