Site icon Vistara News

Sai Datta: ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಇನ್ನಿಲ್ಲ

sayidatta

ಬೆಂಗಳೂರು: ಸಾಂಸ್ಥಿಕ ಅನ್ಯಾಯದ ವಿರುದ್ಧ ಹೋರಾಡುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಅವರು ಅನಾರೋಗ್ಯದಿಂದ ಬೆಂಗಳೂರಿನ ಜೆಪಿ ನಗರದ ಸುಪ್ರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಾಯಿದತ್ತಾ ಅವರನ್ನು ನಿನ್ನೆ ಜೆಪಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸಾಮಾಜಿಕ ಕಳಕಳಿಯ ವಿಷಯದಲ್ಲಿ ಸಾಯಿದತ್ತಾ ಅವರದು ದೊಡ್ಡ ಹೆಸರಾಗಿದ್ದು, ಜಾಹಿರಾತು ಮಾಫಿಯಾಕ್ಕೆ ಕಡಿವಾಣ ಹಾಕುವ ಹೋರಾಟದ ನೇತೃತ್ವ ವಹಿಸಿದ್ದರು. ರಾಜಧಾನಿ ಬೆಂಗಳೂರಿನಲ್ಲಿ ಜಾಹಿರಾತು ಫ್ಲೆಕ್ಸ್‌ಗಳು ಸಂಪೂರ್ಣ ನಿಷೇಧವಾಗಲು ಸಾಯಿದತ್ತಾ ಕಾರಣರಾಗಿದ್ದರು. ಅಕ್ರಮ ಕಟ್ಟಡಗಳ ವಿರುದ್ಧ, ಬಿಡಿಎನಲ್ಲಿ ನಡೆಯುತ್ತಿದ್ದ ಅಕ್ರಮಗಳ ವಿರುದ್ಧ ಸಾರ್ವಜನಿಕ ಹಿತಾಸಕ್ತಿಯನ್ನಿಟ್ಟುಕೊಂಡು ಹೋರಾಡುತ್ತಿದ್ದ ಸಾಯಿದತ್ತಾ ಬಿಬಿಎಂಪಿ, ಬಿಡಿಎಗೆ ತಮ್ಮ ಹೋರಾಟಗಳ ಮೂಲಕವೇ ಕೋಟ್ಯಂತರ ಮೌಲ್ಯದ ಸ್ವತ್ತನ್ನು ಉಳಿಸಿಕೊಟ್ಟಿದ್ದರು.

ಇದನ್ನೂ ಓದಿ: K.Viswanath: ʼಶಂಕರಾಭರಣಂʼ ಖ್ಯಾತಿಯ ಚಿತ್ರ ನಿರ್ದೇಶಕ, ನಿರ್ಮಾಪಕ ಕೆ. ವಿಶ್ವನಾಥ್‌ ಇನ್ನಿಲ್ಲ

Exit mobile version