Site icon Vistara News

Water Crisis: ನೀರಿನ ಕೊರತೆಯ ಎಫೆಕ್ಟ್‌; ಬೆಂಗಳೂರಿನ ಕೆಲವು ಶಾಲೆ, ಕೋಚಿಂಗ್‌ ಸೆಂಟರ್‌ಗೆ ಬೀಗ!

School closed for water crisis

ಬೆಂಗಳೂರು: ಭೀಕರ ಬರಗಾಲ ಕರ್ನಾಟಕವನ್ನು ಕಂಗಾಲಾಗಿಸಿದೆ. ಬಿರು ಬೇಸಿಗೆಗೆ ತತ್ತರಿಸಿರುವ ಮಂದಿಗೆ ನೀರಿನ ಕೊರತೆಯ (Water Crisis) ಶಾಕ್‌ ಎದುರಾಗಿದೆ. ಅದರಲ್ಲೂ ಈಗ ರಾಜಧಾನಿ ಬೆಂಗಳೂರಿನಲ್ಲಿ ನೀರಿಲ್ಲ. ತೀವ್ರ ಸಮಸ್ಯೆ (Bangalore Water Problem) ತಲೆದೋರಿದ್ದು, ರಾಜ್ಯ ಸರ್ಕಾರ ಕೆಲವು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ. ಅಲ್ಲದೆ, ಬೆಂಗಳೂರು ಜಲ ಮಂಡಳಿ 6 ಚಟುವಟಿಕೆ ಮೇಲೆ ನಿರ್ಬಂಧ ವಿಧಿಸಿದ್ದು, ನಿಯಮ ಮೀರಿದರೆ 5 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಸುತ್ತೋಲೆ ಹೊರಡಿಸಿದೆ. ಈ ಮಧ್ಯೆ ತೀವ್ರ ಜಲಾಘಾತದಿಂದ ಬೆಂಗಳೂರಿನ ಕೆಲವು ಶಾಲೆಗಳು (Bangalore Schools) ಹಾಗೂ ಕೋಚಿಂಗ್‌ ಸೆಂಟರ್‌ಗಳನ್ನು (Coaching Centres) ಸ್ಥಗಿತಗೊಳಿಸಿ, ಆನ್‌ಲೈನ್‌ ಕ್ಲಾಸ್‌ಗೆ‌ (Online Class) ಮೊರೆಹೋಗಲಾಗಿದೆ ಎಂದು ವರದಿಯಾಗಿದೆ.

ಈಗ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಗಾಢವಾಗಿದ್ದು, ಕೆಲವು ಕಡೆ ಟ್ಯಾಂಕರ್‌ಗಳ ಮೂಲಕ ನೀರಿನ ಸರಬರಾಜನ್ನು ಮಾಡಲಾಗುತ್ತಿದೆ. ಇದಕ್ಕೆ ದುಬಾರಿ ಹಣ ತೆರಬೇಕಿದೆ. ಇನ್ನು ಕೆಲವು ಕಡೆ ದುಡ್ಡು ಕೊಡುತ್ತೇವೆ ಎಂದರೂ ನೀರು ಸಿಗದ ಪರಿಸ್ಥಿತಿ ಇದೆ. ಹೆಚ್ಚಿದ ಬೇಡಿಕೆ ಹಿನ್ನೆಲೆಯಲ್ಲಿ ಅಗತ್ಯ ಇರುವ ಕಡೆ ಪೂರೈಕೆ ಮಾಡಲೂ ಸಾಧ್ಯವಾಗದಷ್ಟು ಸಮಸ್ಯೆ ಆಗುತ್ತಿದೆ. ಈ ಮಧ್ಯೆ ಬನ್ನೇರುಘಟ್ಟದ ಶಾಲೆಯೊಂದರಲ್ಲಿ ಈಗ ನೀರಿನ ಅಭಾವ ತಲೆದೋರಿದ್ದರಿಂದ ಶಾಲೆಯನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ ಎಂಬ ಸಂದೇಶವನ್ನು ರವಾನೆ ಮಾಡಲಾಗಿದೆ. ಅಲ್ಲದೆ, ಮಕ್ಕಳಿಗೆ ಆನ್‌ಲೈನ್‌ ಮೂಲಕ ತರಗತಿಗಳನ್ನು ನಡೆಸಲಾಗುವುದು ಎಂದು ಸ್ಪಷ್ಟನೆ ನೀಡಿದೆ. ಇದು ತಾತ್ಕಾಲಿಕ ಕ್ರಮವಾಗಿದ್ದು, ನೀರಿನ ಸಮಸ್ಯೆ ತಲೆದೋರುತ್ತಿದ್ದಂತೆ ಯಥಾಸ್ಥಿತಿಗೆ ಮರಳಲಾಗುವುದು ಎಂದು ಪೋಷಕರಿಗೆ ತಿಳಿಸಿದೆ.

ವಿಜಯನಗರದಲ್ಲಿರುವ ಕೋಚಿಂಗ್‌ ಸೆಂಟರ್‌ವೊಂದರಲ್ಲಿಯೂ ನೀರಿನ ತೀವ್ರ ಅಭಾವವಾಗಿದ್ದರಿಂದ ವಿದ್ಯಾರ್ಥಿಗಳಿಗೆ ಒಂದು ವಾರದವರೆಗೆ ತರಗತಿಗಳಿಗೆ ಬಾರದಂತೆ ಮೆಸೇಜ್‌ ಮಾಡಲಾಗಿದೆ. ನೀರಿನ ಸಮಸ್ಯೆ ತಲೆದೋರುವವರೆಗೆ ಆನ್‌ಲೈನ್‌ ಮುಖಾಂತರ ಕ್ಲಾಸ್‌ ಮಾಡುವ ಭರವಸೆ ನೀಡಲಾಗಿದೆ.

ಈ ನಡುವೆ ಸಂಸದ ತೇಜಸ್ವಿ ಸೂರ್ಯ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ಬೆಂಗಳೂರು ಜಲಮಂಡಳಿಯು ಕೆಲವೊಂದು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ. ಅವರಿಂದ ಪರಿಣಾಮಕಾರಿಯಾಗಿ ಸಮಸ್ಯೆಗೆ ಮುಕ್ತಿಯನ್ನು ಕಂಡುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ತೇಜಸ್ವಿ ಸೂರ್ಯ ಸಲಹೆಗಳೇನು?

ಇದನ್ನೂ ಓದಿ: Water Crisis: ಬೆಂಗಳೂರಲ್ಲಿ ಈ 6 ಕೆಲಸಕ್ಕೆ ನೀರು ಬಳಸಿದ್ರೆ 5000 ರೂ. ದಂಡ! ನೀವೂ ದೂರು ಕೊಡಿ

ಈ ವಿಚಾರಗಳ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಈ ವಿಧಾನಗಳನ್ನು ಅನುಸರಿಸಿ ಕ್ರಮ ಕೈಗೊಳ್ಳಿ ಎಂದು ಹೇಳಿದ್ದರು.

Exit mobile version