Site icon Vistara News

ಡ್ರಗ್ ಪೆಡ್ಲರ್‌ಗಳ ಹೆಡೆಮುರಿ ಕಟ್ಟೋಕೆ ರೆಡಿಯಾಯ್ತು ಸೌತ್ ಟೀಂ

ಡ್ರಗ್

ಬೆಂಗಳೂರು: ಕಾಲೇಜು-ಶಾಲೆಗಳಲ್ಲಿ ವಿದ್ಯಾರ್ಥಿಗಳು ಡ್ರಗ್‌ ದಾಸರಾಗುತ್ತಿದ್ದಾರೆ. ಇದು ನಿನ್ನೆ ಮೊನ್ನೆಯ ಕಥೆಯಲ್ಲ. ಸಾಕಷ್ಟು ವಿದ್ಯಾರ್ಥಿಗಳು ಡ್ರಗ್‌ನಿಂದಾಗಿ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಡ್ರಗ್ ಮಾಫಿಯಾ ನಗರದಲ್ಲಿ ಬೇರೂರಿ ಯುವಕರು ಚಟಕ್ಕೆ ದಾಸರಾಗುತ್ತಿದ್ದಾರೆ. ಇದೀಗ ಡ್ರಗ್ ಮಾಫಿಯಾ ತಡೆಯೋದಕ್ಕೆ ಹೊಸದೊಂದು ಸೆಲ್ ಹುಟ್ಟಿಕೊಳ್ಳುತ್ತಿದೆ. ಅದುವೇ ʼಹೆಬಿಚ್ಯುವಲ್ ಮಾನಿಟರಿಂಗ್ʼ ಸೆಲ್.

ರೌಡಿಗಳನ್ನು ಮಟ್ಟ ಹಾಕೋದಕ್ಕೆ ರೌಡಿ ಮಾನಿಟರಿಂಗ್ ಸೆಲ್ ರೆಡಿಯಾಗುತ್ತಿದೆ. ಸೇವನೆ ಮಾಡೋರೇ ಪೆಡ್ಲರ್‌ಗಳಾಗಿದ್ದು, ಡ್ರಗ್ ಪೆಡ್ಲಿಂಗ್ ಸಂಪೂರ್ಣವಾಗಿ ತೊಡೆದುಹಾಕಲು ಹೆಬಿಚ್ಯುವಲ್ ಮಾನಿಟರಿಂಗ್ ಸೆಲ್ ಸಿದ್ಧತೆಗೊಳ್ಳುತ್ತಿದೆ.

ಇದನ್ನೂ ಓದಿ | Explainer: ಅಮೆರಿಕದ ರೇʼಗನ್‌ʼಗಳ ಕತೆ ಇದು!

ಮಾನಿಟರಿಂಗ್ ಸೆಲ್ ಅಂದರೆ ಏನು ?

ಈ ಮಾನಿಟರಿಂಗ್ ಸೆಲ್‌ನಲ್ಲಿ ಒಬ್ಬ ಸಬ್ ಇನ್‌ಸ್ಪೆಕ್ಟರ್‌, ಒಬ್ಬ ಎಎಸ್‌ಐ, ನಾಲ್ವರು ಹೆಡ್‌ ಕಾನ್‌ಸ್ಟೇಬಲ್‌- ಪೊಲೀಸ್‌ ಕಾನ್‌ಸ್ಟೇಬಲ್‌ ಇರುತ್ತಾರೆ. ಪದೇಪದೇ ಡ್ರಗ್ಸ್ ಮಾರಾಟದಲ್ಲಿ ಒಬ್ಬ ಆರೋಪಿ ಸಿಕ್ಕಿಬಿದ್ದರೆ ಆತನ ಮೇಲೆ ಹೆಬಿಚ್ಯುವಲ್ ಮಾನಿಟರಿಂಗ್ ಸೆಲ್ ಕಣ್ಗಾವಲಾಗಿ ಇರುತ್ತದೆ.

ಆತ ಜೈಲು ಯಾವಾಗ ಸೇರಿದ, ಯಾವಾಗ ಜಾಮೀನಿನ ಮೂಲಕ ಹೊರಗಡೆ ಬಂದ, ಆತನ ಟೀಂನಲ್ಲಿರುವ ಸದಸ್ಯರು ಯಾರು, ಟೀಂ ಎಲ್ಲೆಲ್ಲಿ ಆಕ್ಟಿವ್ ಇರುತ್ತದೆ, ಆರೋಪಿಯ ಊರು, ವಾಸವಿರೋ ಸ್ಥಳ, ಮೊಬೈಲ್‌ ನಂಬರ್  ಇದೆಲ್ಲದರ ಜತೆ ಪದೇಪದೇ ಠಾಣೆಗೆ ಬಂದು ಆತನ ವಿಳಾಸವನ್ನು ನೀಡುವಂತೆ ಹಿಡಿತ ಸಾಧಿಸುವ ಕೆಲಸವನ್ನು ಪೊಲೀಸರು ಮಾಡುತ್ತಾರೆ.

ಅಷ್ಟೇ ಅಲ್ಲದೇ ಕೋರ್ಟ್‌ಗೆ ಹಾಜರಾಗದೇ ಸುಖಾಸುಮ್ಮನೆ ಕಾರಣವನ್ನು ಕೊಟ್ಟು ಗೈರಾಗುವವರ ಮೇಲೂ ಕಣ್ಣಿಡಲಾಗುತ್ತದೆ. ಕೋರ್ಟ್‌ಗೆ ಕೊಟ್ಟ ಕಾರಣ ಸುಳ್ಳು ಎಂತಾದರೆ ಆರೋಪಿಯ ಬಗೆಗೆ ಸರಿಯಾದ ಮಾಹಿತಿಯನ್ನು ಕೋರ್ಟ್‌ಗೆ ಒಪ್ಪಿಸುವಂತಹ ಕೆಲಸವನ್ನ ಮಾಡಲಾಗುತ್ತದೆ.

ಒಂದು ವೇಳೆ ಕೋರ್ಟ್‌ಗೆ ಮನವರಿಕೆ ಮಾಡಿದ್ದೇ ಹೌದಾದರೆ ಆರೋಪಿಯ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗುತ್ತದೆ. ತಕ್ಷಣ ಪೊಲೀಸರು ಡ್ರಗ್ ಪೆಡ್ಲರ್‌ನನ್ನು ಮತ್ತೆ ಜೈಲಿಗೆ ಕಳುಹಿಸುವಂತಹ ಕೆಲಸವನ್ನು ಮಾಡುತ್ತಾರೆ.

ಒಟ್ಟಿನಲ್ಲಿ ಡ್ರಗ್ ಪೆಡ್ಲರ್‌ಗಳ ಮೇಲೆ ಹೆಬಿಚ್ಯುವಲ್ ಸೆಲ್ ಸಿಬ್ಬಂದಿ ನಿಗಾ ವಹಿಸುವುದಕ್ಕೆ ಫುಲ್ ರೆಡಿಯಾಗಿದ್ದು, ಇನ್ನುಮುಂದೆ ಬೆಂಗಳೂರು ದಕ್ಷಿಣದಲ್ಲಿ ಹೆಬಿಚ್ಯುವಲ್ ಮಾನಿಟರಿಂಗ್ ಸೆಲ್ ಸೇನೆ ಆಕ್ಟಿವ್ ಆಗಲಿದೆ.

ಇದನ್ನೂ ಓದಿ | ಕಾನೂನು ಉಲ್ಲಂಘನೆ ಆರೋಪ; ಸಿದ್ದರಾಮಯ್ಯಗೆ ಕೋರ್ಟ್‌ ಸಮನ್ಸ್

Exit mobile version