Site icon Vistara News

Rajasthan Murder: ಕನ್ನಯ್ಯಲಾಲ್ ಹತ್ಯೆ ಖಂಡಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆದ ಶ್ರೀರಾಮ ಸೇನೆ

kannaih lal murder

ಬೆಂಗಳೂರು: ರಾಜಸ್ಥಾನದಲ್ಲಿ ನಡೆದ ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ರಾಜ್ಯದಲ್ಲೂ ಪ್ರತಿಭಟನೆ ನಡೆಸಲಾಗುತ್ತಿದೆ. ಈ ವಿಚಾರವಾಗಿ ರಾಷ್ಟ್ರಪತಿಗಳಿಗೆ ಶ್ರೀರಾಮ ಸೇನೆ ಪತ್ರ ಬರೆದಿದ್ದು, ಹತ್ಯೆ ಮಾಡಿದ ಮೊಹಮ್ಮದ್ ರಿಯಾದ್ ಅಕ್ತರ್ ಮತ್ತು ಮೊಹಮ್ಮದ್ ಗೌಸ್​​ಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯ ಮಾಡಿದೆ.

ಇದನ್ನು ಓದಿ | ರಾಜಸ್ಥಾನ ಹತ್ಯೆ; ಟೇಲರ್‌ ಕನ್ಹಯ್ಯಲಾಲ್‌ಗೆ ಮುಸ್ಲಿಂ ದುಷ್ಕರ್ಮಿಗಳು ಇರಿದಿದ್ದು 26 ಬಾರಿ !

ಕನ್ಹಯ್ಯ ಲಾಲ್​ ಹತ್ಯೆ ಮಾಡಿದ ದುಷ್ಕರ್ಮಿಗಳಾದ ಮೊಹಮ್ಮದ್ ರಿಯಾದ್ ಅಕ್ತರ್ ಹಾಗೂ ಮೊಹಮ್ಮದ್ ಗೌಸ್ ಈ ಇಬ್ಬರು ಜಿಹಾದಿಗಳು ದೇಶದ ಪ್ರಧಾನಮಂತ್ರಿಗಳಿಗೂ ಜೀವ ಬೆದರಿಕೆಯನ್ನು ಹಾಕಿದ್ದಾರೆ. ಇಂತಹ ಜಿಹಾದಿ ಮನಸ್ಥಿತಿಯ ಮತಾಂಧರನ್ನು ಮತ್ತು ಅವರ ಹಿಂದೆ ಇರುವ ದುಷ್ಟಶಕ್ತಿಗಳನ್ನು ತನಿಖೆ ಮಾಡಬೇಕು. ಈ ಆರೋಪಿಗಳನ್ನು ಗುಂಡು ಹಾರಿಸಿ ಸಾಯಿಸಬೇಕು, ಇಲ್ಲದಿದ್ದರೆ ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು.

ಮೃತ ಕನ್ಹಯ್ಯ ಲಾಲ್​ಗೆ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು. ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾವಣೆ ಮಾಡಬೇಕು. ಆರೋಪಿಗಳಿಗೆ ಸಾರ್ವಜನಿಕರ ಮಧ್ಯೆ ಗಲ್ಲು ಶಿಕ್ಷೆ ವಿಧಿಸಬೇಕು. ಇಂತಹ ಪ್ರಕರಣಗಳು ದೇಶದಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಶ್ರೀರಾಮ ಸೇನೆಯ ಬೆಂಗಳೂರು ನಗರ ಅಧ್ಯಕ್ಷ ಕೋಟೆ ಚಂದ್ರಶೇಖರ್ ರಾಷ್ಟ್ರಪತಿಗಳಲ್ಲಿ ಮನವಿ ಮಾಡಿದ್ದಾರೆ

ಇದನ್ನು ಓದಿ| ಉದಯಪುರದ ಹಿಂದೂ ಟೈಲರ್‌ ಶಿರಚ್ಛೇದ ಮಾಡಿದ ಹಂತಕರಿಗೆ ಐಸಿಸ್‌ ಲಿಂಕ್‌!

Exit mobile version