Site icon Vistara News

Child Online Protection Award : ಸ್ಟೋಗೋ ಉತ್ಸವ, ಚೈಲ್ಡ್ ಆನ್‌ಲೈನ್ ಪ್ರೊಟೆಕ್ಷನ್ ಪ್ರಶಸ್ತಿ 2024 ಘೋಷಣೆ

Child Online Protection Award

ಬೆಂಗಳೂರು: ಎಚ್‌ಕೆ ಕನ್ಸಲ್ಟೆನ್ಸಿ ಸಂಸ್ಥೆ ಹಾಗೂ ಟಾಕ್ಯೋನ್ ಸಿಸ್ಟಂ ಸೊಲ್ಯೂಷನ್ಸ್ ಪ್ರೈವೇಟ್ ಲಿ. ಸಂಸ್ಥೆಗಳು ಪ್ರಸಿದ್ಧ ಆರ್ ಆರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಸಹಭಾಗಿತ್ವದಲ್ಲಿ ಸ್ಟೋಗೋ ಫೆಸ್ಟ್(STOGO FEST) 2024 ಮತ್ತು ಚೈಲ್ಡ್ ಆನ್‌ಲೈನ್ ಪ್ರೊಟೆಕ್ಷನ್ ಪ್ರಶಸ್ತಿ(COP) 2024 ಅನ್ನು ಘೋಷಿಸುತ್ತಿದೆ (Child Online Protection Award:). ಆರ್ ಆರ್ ಸಮೂಹ ಸಂಸ್ಥೆಯ ಕ್ಯಾಂಪಸ್‌ನಲ್ಲಿ 2024ರ ಡಿಸೆಂಬರ್ 9 ಮತ್ತು 10ರಂದು ಕರ್ನಾಟಕದ ಪ್ರಾದೇಶಿಕ ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಸ್ಟೋಗೋ ಫೆಸ್ಟ್ 2024 ಎನ್ನುವುದು ಅಂತಾರಾಷ್ಟ್ರೀಯ ಸ್ಟೀಮ್ ಸ್ಪರ್ಧೆಯಾಗಿದ್ದು, ಗ್ರೇಡ್ 4ರಿಂದ 12ನೇ ಗ್ರೇಡ್ ವರೆಗಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ. “ಮಕ್ಕಳ ಡಿಜಿಟಲ್ ಯೋಗಕ್ಷೇಮಕ್ಕಾಗಿ ಎಐ ಮತ್ತು ರೊಬೋಟಿಕ್ಸ್ ಬಳಕೆ” ಎಂಬ ಥೀಮ್‌ನಡಿ ಈ ಸ್ಪರ್ಧೆ ನಡೆಯಲಿದೆ. ವಿಶೇಷವೆಂದರೆ, ಪ್ರಾದೇಶಿಕ ಸ್ಟೋಗೋ ಫೆಸ್ಟ್ ವಿಜೇತರು 2025ರ ಫೆಬ್ರವರಿ 06ರಂದು ಯುಎಇಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸ್ಟೋಗೋ ಫೆಸ್ಟ್ (ಗ್ರೇಡ್ 4ರಿಂದ ಗ್ರೇಡ್ 12)ನಲ್ಲಿ ಮಿಂಚಲಿದ್ದಾರೆ. ಇಲ್ಲಿ ಈ ಸ್ಟೋಗೋ ಉತ್ಸವ-2024ರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಯುಎಇ ಸಹಿಷ್ಣು ಮತ್ತು ಸಹಬಾಳ್ವೆ ಸಚಿವರಾದ ಗೌರವಾನ್ವಿತ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರ ಬೆಂಬಲದೊಂದಿಗೆ ಈ ಕಾರ್ಯಕ್ರಮ ಜರುಗಲಿದೆ.

ಕಳೆದ ವರ್ಷ, ಪದ್ಮ ಪ್ರಶಸ್ತಿ ಪುರಸ್ಕೃತ ಜಿ.ಮಾಧವನ್ ನಾಯರ್ (ಇಸ್ರೋ ಮಾಜಿ ಮುಖ್ಯಸ್ಥ) ಹಾಗೂ ಇಸ್ರೋದ ಮಾಜಿ ವಿಜ್ಞಾನಿಗಳ ಪ್ರೋತ್ಸಾಹದೊಂದಿಗೆ ಸಾರಾಭಾಯಿ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿಯಲ್ಲಿ ಪ್ರಾದೇಶಿಕ ಸ್ಟೋಗೋ ಉತ್ಸವವು ನಡೆದಿತ್ತು.

ಚೈಲ್ಡ್ ಆನ್‌ಲೈನ್ ಪ್ರೊಟೆಕ್ಷನ್ ಪ್ರಶಸ್ತಿ 2024:

ಮಕ್ಕಳ ಆನ್ ಲೈನ್ ಸುರಕ್ಷತೆಯೆಂಬ ಸಂಕೀರ್ಣ ಸವಾಲಿಗೆ ಪರಿಹಾರ ಕಂಡುಕೊಳ್ಳುವ ಮತ್ತು ಈ ನಿಟ್ಟಿನಲ್ಲಿ ಸಕ್ರಿಯ ಉಪಕ್ರಮಗಳನ್ನು ಸಾಧಿಸಿರುವ ಶಾಲೆಗಳನ್ನು ಚೈಲ್ಡ್ ಆನ್‌ಲೈನ್ ಪ್ರೊಟೆಕ್ಷನ್ ಪ್ರಶಸ್ತಿಯ ಮೂಲಕ ಗೌರವಿಸಲಾಗುತ್ತದೆ. ಇಲ್ಲಿ ಪದಗಳಿಗಿಂತ, ಶಾಲೆಗಳು ಮಾಡಿರುವ ಸಾಧನೆಗಳಿಗೆ ಮನ್ನಣೆ ನೀಡಲಾಗುತ್ತದೆ.
ಅಂತರ್ಜಾಲ ಮತ್ತು ಡಿಜಿಟಲ್ ಸಾಧನಗಳನ್ನು ಜವಾಬ್ದಾರಿಯುತವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯವನ್ನು ಹೊಂದುವಂತೆ ಮಕ್ಕಳನ್ನು ಸಜ್ಜುಗೊಳಿಸುವ ಉದ್ದೇಶದಿಂದಲೇ ವಿಶೇಷವಾಗಿ ಈ ಉಪಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ತಮ್ಮ ಜತೆಗಾರರ ಡಿಜಿಟಲ್ ಯೋಗಕ್ಷೇಮವನ್ನು ವರ್ಧಿಸುವಂಥ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಕ್ಕಳು ಸಕ್ರಿಯವಾಗಿ ಕೊಡುಗೆ ನೀಡುವುದು, ಅದರಲ್ಲಿ ಪಾಲ್ಗೊಳ್ಳುವಂತೆ ಮಾಡುವುದು, ಜಾಗೃತಿ ಹಾಗೂ ಅನುಭವವನ್ನು ಗಳಿಸುವಂತೆ ಮಾಡುವುದು ಕೂಡ ಸಿಒಪಿ ಪ್ರಶಸ್ತಿಯ ಮೂಲ ಉದ್ದೇಶವಾಗಿದೆ.

ಇದನ್ನೂ ಓದಿ: Yuvraj Singh : ಶೀಘ್ರದಲ್ಲೇ ತೆರೆಗೆ ಬರಲಿದೆ ಯುವರಾಜ್ ಸಿಂಗ್‌ ಬಯೋಪಿಕ್‌

ಆರ್ ಆರ್ ಸಮೂಹ ಸಂಸ್ಥೆಯ ಕ್ಯಾಂಪಸ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸ್ಟೋಗೋ ಫೆಸ್ಟ್ ಸ್ಥಾಪಕರಾದ ಶ್ರೀ ಜಯೇಶ್ ಸೆಬಾಸ್ಟಿಯನ್, ಸ್ಟೋಗೋ ಫೆಸ್ಟ್ ನ ಜಾಗತಿಕ ಯೋಜನಾ ಪ್ರವರ್ತಕರಾದ ಲಿಂಡಾ ಆರ್., ಸ್ಟೋಗೋ ಫೆಸ್ಟ್ ನ ಕರ್ನಾಟಕದ ಸಮನ್ವಯಕಾರರಾದ ಶ್ರೀ ಎಸ್.ಕೆ.ಶಫೀ ಮತ್ತಿತರರು ಉಪಸ್ಥಿತರಿರಲಿದ್ದಾರೆ.
ಇನ್ನೇಕೆ ತಡ, ಬೆಂಗಳೂರಿನ ಆರ್ ಆರ್ ಗ್ರೂಪ್ ಆಫ್ ಇನ್ ಸ್ಟಿಟ್ಯೂಷನ್ಸ್ ನಲ್ಲಿ ಇದೇ ಡಿ.9 ಮತ್ತು 10ರಂದು ನಡೆಯಲಿರುವ ಉತ್ಸವದಲ್ಲಿ ಭಾಗಿಯಾಗಿ. ನಾವೀನ್ಯತೆಯ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳಿ.

Exit mobile version