ಬೆಂಗಳೂರು: ಅಯೋಧ್ಯೆಯ ರಾಮ ಜನ್ಮಭೂಮಿ ಆಂದೋಲನದ (Rama Mandir Movement) 496 ವರ್ಷಗಳ ರೋಚಕ ಕಥನವನ್ನು ಒಳಗೊಂಡ ʻಮಂದಿರವಲ್ಲೇ ಕಟ್ಟಿದೆವು!ʼ (Mandiravalle Kattidevu!) ಕೃತಿಯ ಮೊದಲ ಪ್ರತಿಯನ್ನು ಉಡುಪಿ ಪೇಜಾವರ ಮಠದ (Pejavara matt) ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು (Shri Vishwaprasanna theertha Swameeji) ಸ್ವೀಕರಿಸಿದರು. ಅಯೋಧ್ಯೆ ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರೂ ಆಗಿರುವ ಶ್ರೀಗಳು ಕೃತಿಯನ್ನು ಅವಲೋಕಿಸಿ ಶುಭ ಹಾರೈಸಿದರು.
ʻವಿಸ್ತಾರ ನ್ಯೂಸ್ʼ (Vistara News) ವೆಬ್‌ಸೈಟ್‌ನ ಸಂಪಾದಕ, ಹಿರಿಯ ಪತ್ರಕರ್ತ ರಮೇಶ್ ಕುಮಾರ್ ನಾಯಕ್ (Ramesh Kumar Naik) ಬರೆದಿರುವ ಈ ಕೃತಿಯು ಅಯೋಧ್ಯೆ ರಾಮಮಂದಿರ ಆಂದೋಲನದ ಸಂಪೂರ್ಣ (1528 ರಿಂದ 2024ರವರೆಗೆ) ಮಾಹಿತಿಯನ್ನು ಒಳಗೊಂಡಿದೆ. ಹಿಂದೆಂದೂ ಬಹಿರಂಗವಾಗಿರದ ಹಲವು ಕುತೂಹಲಕರ ವಿಷಯಗಳು ಈ ಕೃತಿಯಲ್ಲಿವೆ. 100ಕ್ಕೂ ಹೆಚ್ಚು ಅಪರೂಪದ ಚಿತ್ರಗಳು, ಕರಸೇವಕರ ಬಲಿದಾನದ ಸ್ಫೂರ್ತಿದಾಯಕ ಕತೆಗಳು, ಅಯೋಧ್ಯೆ ಆಂದೋಲನದ ತಿರುವುಗಳ ಮಾಹಿತಿ ಇದೆ.
ಶ್ರೀ ವಿಶ್ವಪ್ರಸನ್ನ ಶ್ರೀಪಾದರು ಅಯೋಧ್ಯೆ ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ನಲ್ಲಿ ದಕ್ಷಿಣ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಸಂತರಾಗಿದ್ದಾರೆ. ನೂರಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಪುಸ್ತಕ ಲೋಕಾರ್ಪಣೆಯಾಗುತ್ತಿದ್ದು, ಆರಂಭದಲ್ಲಿಯೇ ಶ್ರೀಗಳ ಆಶೀರ್ವಾದ ಸಿಕ್ಕಿದ್ದು ಸಂತಸವನ್ನು ಉಂಟುಮಾಡಿದೆ ಎಂದು ಈ ಕೃತಿಯ ಪ್ರಕಾಶಕರಾದ ಸ್ನೇಹ ಬುಕ್ ಹೌಸ್‌ನ ಕೆ.ಬಿ. ಪರಶಿವಪ್ಪ ತಿಳಿಸಿದ್ದಾರೆ.
ಬಿಡುಗಡೆಗೆ ಮೊದಲೇ ಮೂರನೇ ಮುದ್ರಣದತ್ತ
ಈ ಕೃತಿ ಸಾರ್ವಜನಿಕ ಸಮಾರಂಭದಲ್ಲಿ ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಆದರೆ, ಪ್ರಿ ರಿಲೀಸ್ ಆರ್ಡರ್‌ನಲ್ಲಿಯೇ ಭಾರಿ ಬೇಡಿಕೆಯನ್ನು ಪಡೆದುಕೊಂಡಿದೆ. ಪ್ರತಿಗಳನ್ನು ಮುಂಗಡ ಕಾಯ್ದಿರಿಸಲು ನೀಡಿದ ಅವಕಾಶದಲ್ಲೇ ಈಗಾಗಲೇ ಎರಡು ಮುದ್ರಣದ ಪ್ರತಿಗಳು ಖಾಲಿಯಾಗಿದ್ದು, ಮೂರನೇ ಮುದ್ರಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ, ಬೇರೆ ಬೇರೆ ರಾಜ್ಯಗಳಿಂದ, ವಿದೇಶದಿಂದ ಪುಸ್ತಕಕ್ಕೆ ಬೇಡಿಕೆ ಬರುತ್ತಿದೆ. ಅನೇಕ ಸಂಘಟನೆಗಳು ಈ ಕೃತಿಯನ್ನು ಬಿಡುಗಡೆ ಮಾಡಲು ತಾವಾಗಿಯೇ ಮುಂದಾಗಿವೆ ಎಂದು ಪರಶಿವಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.
ಸ್ವರ್ಣವಲ್ಲಿ ಶ್ರೀಗಳಿಂದ ಕೃತಿಯ ಮುಖಪುಟ ಲೋಕಾರ್ಪಣೆ
ʻಮಂದಿರವಲ್ಲೇ ಕಟ್ಟಿದೆವು!” ಕೃತಿಯ ಮುಖಪುಟವನ್ನು ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ವಿಸ್ತಾರ ನ್ಯೂಸ್ ಕಚೇರಿಯಲ್ಲಿ ಅನಾವರಣಗೊಳಿಸಿದ್ದರು. ವಿಸ್ತಾರ ನ್ಯೂಸ್ ವ್ಯವಸ್ಥಾಪಕ ನಿರ್ದೇಶಕರಾದ ಎಚ್ ವಿ ಧರ್ಮೇಶ್, ನಿರ್ದೇಶಕರಾದ ಹರಿಪ್ರಕಾಶ್ ಕೋಣೆಮನೆ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕರಾದ ಕಿರಣ್ ಕುಮಾರ್ ಡಿ.ಕೆ ಉಪಸ್ಥಿತರಿದ್ದರು.
ನೀವೂ ಆರ್ಡರ್ ಮಾಡಬಹುದು
ಪ್ರತಿಗಳನ್ನು ಮುಂಗಡ ಕಾಯ್ದಿರಿಸಿದವರಿಗೆ ವಿಶೇಷ ರಿಯಾಯಿತಿಯಲ್ಲಿ ಪುಸ್ತಕವನ್ನು ಒದಗಿಸಲಾಗುತ್ತಿದ್ದು, ಅಂಚೆ ವೆಚ್ಚವು ಉಚಿತವಾಗಿದೆ. ಜ.22ರಂದು ನಡೆಯಲಿರುವ ರಾಮೋತ್ಸವದಂದು ಹಂಚಲು, ಸ್ನೇಹಿತರಿಗೆ ನೀಡಿ ಶುಭ ಕೋರಲು ಮತ್ತು ಅಂದಿನ ಕಾರ್ಯಕ್ರಮದ ಅತಿಥಿಗಳಿಗೆ ನೀಡಲು ಇದು ಅತ್ಯಂತ ಉಪಯುಕ್ತ ಕೃತಿಯಾಗಿದೆ. ಆಸಕ್ತರು ಮೊಬೈಲ್ ನಂ. 98450 31335ಗೆ ಸಂಪರ್ಕಿಸಿ, ಪ್ರತಿಯನ್ನು ತರಿಸಿಕೊಳ್ಳಬಹುದಾಗಿದೆ.
ಬೆಂಗಳೂರಿನಲ್ಲಿ ಜನವರಿ 21ರಂದು ಬಿಡುಗಡೆ, ಅಯೋಧ್ಯೆಯಲ್ಲೂ ಅನಾವರಣ
ಈ ಕೃತಿಯನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿಯೂ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಬೆಂಗಳೂರಿನಲ್ಲಿ ಜನವರಿ 21ರಂದು ನಡೆಯುವ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಯಾಗುತ್ತಿದೆ ಎಂದು ಕೃತಿಯ ಲೇಖಕ ರಮೇಶ್ ಕುಮಾರ್ ನಾಯಕ್ ತಿಳಿಸಿದ್ದಾರೆ. 250 ರೂ. ಮುಖಬೆಲೆಯ ಪುಸ್ತಕ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ರಿಯಾಯಿತಿ ದರದಲ್ಲಿ 200 ರೂ.ಗೆ ಲಭ್ಯವಾಗಲಿದೆ.
ಇದನ್ನೂ ಓದಿ: Ram Mandir: ರಾಮ ಮಂದಿರಕ್ಕೆ ಕನ್ನಡಿಗ ಯೋಗಿರಾಜ್ ಕೆತ್ತನೆಯ ರಾಮಲಲ್ಲಾ ವಿಗ್ರಹ ಆಯ್ಕೆ
ಇದು ಸ್ನೇಹ ಬುಕ್ ಹೌಸ್‌ನ 500ನೇ ಕೃತಿ
ʻಮಂದಿರವಲ್ಲೇ ಕಟ್ಟುವೆವು!ʼ ಇದು ಸ್ನೇಹ ಬುಕ್ ಹೌಸ್‌ನ 500ನೇ ಪ್ರಕಟಣೆಯಾಗಿರುವುದು ವಿಶೇಷ. ಸಂಸ್ಥೆಯ 500ನೇ ಕೃತಿಯಾಗಿ ಇಂಥಹುದೊಂದು ಚಾರಿತ್ರಿಕ ಪುಸ್ತಕವನ್ನು ಪ್ರಕಟಿಸುತ್ತಿರುವುದು ಹೆಮ್ಮೆಯ ಕ್ಷಣ ಎಂದು ಸ್ನೇಹ ಬುಕ್ ಹೌಸ್‌ನ ಕೆ.ಬಿ. ಪರಶಿವಪ್ಪ ಹೇಳಿದ್ದಾರೆ. ಈ ಪುಸ್ತಕ ಬಿಡುಗಡೆ ಪೂರ್ವದಲ್ಲೇ ಭಾರಿ ಬೇಡಿಕೆಯನ್ನು ಪಡೆದುಕೊಂಡಿರುವುದು ಅವರಿಗೆ ಖುಷಿ ನೀಡಿದೆ. ರಾಜ್ಯಾದ್ಯಂತ ಮಾತ್ರವಲ್ಲ ವಿದೇಶದಿಂದಲೂ ಪುಸ್ತಕಕ್ಕೆ ಬೇಡಿಕೆ ಬರುತ್ತಿದ್ದು, ಅವುಗಳನ್ನು ಪೂರೈಸಲು ಅವರ ಟೀಮ್ ಟೊಂಕ ಕಟ್ಟಿ ನಿಂತಿದೆ.