Site icon Vistara News

Student Death : ಗುಂಡು ಹಾರಿಸಿಕೊಂಡು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

College student commits suicide by shooting himself

ಬೆಂಗಳೂರು: ಇಲ್ಲಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುಂಡು ಹಾರಿಸಿಕೊಂಡು (College Student Death) ಕಾಲೇಜು ವಿದ್ಯಾರ್ಥಿಯೊಬ್ಬ (commits suicide by shooting) ಮೃತಪಟ್ಟಿದ್ದಾನೆ. ಚಿಕ್ಕಬಿದರಕಲ್ಲು ಬಳಿಯ ತಿರುಮಲಪುರದಲ್ಲಿ ಕೊಡಗು ಮೂಲದ ವಿಶು ಉತ್ತಪ್ಪ (19) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆರ್‌.ಆರ್ ಕಾಲೇಜುನಲ್ಲಿ ಪ್ರಥಮ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದ. ನಿನ್ನ ಬುಧವಾರ ಸಂಜೆ 6.30 ರ ಸುಮಾರಿಗೆ ಮನೆಯಲ್ಲೇ ಗುಂಡು ಹಾರಿಸಿಕೊಂಡಿದ್ದಾನೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಎದೆಯ ಎಡಭಾಗದ ಹೃದಯದ ಮೇಲೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. ಮನೆಯಿಂದ ಹೊರ ಹೋಗಿದ್ದ ಪೋಷಕರು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ವಿಶು ತಂದೆ ರವಿ ತಮ್ಮಯ್ಯ ಅವರು ಮನೆಗೆ ಬಂದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನನ್ನು ಕಂಡು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಒಂದು ಗಂಟೆಗಳ ಚಿಕಿತ್ಸೆ ಕೊಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿಶು ಉತ್ತಪ್ಪ ಮೃತಪಟ್ಟಿದ್ದಾನೆ.

ಸದ್ಯ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸೋಕೋ, ಎಫ್ಎಸ್‌ಎಲ್ ತಂಡಗಳಿಂದ ತನಿಖೆ ನಡೆಸುತ್ತಿದ್ದು, ವಿಶುವಿನ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ವಿಶು ತಂದೆ ರವಿ ತಿಮ್ಮಯ್ಯ ನೈಸ್ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ‌ ಮಾಡುತ್ತಿದ್ದಾರೆ. ತಂದೆಯ ಲೈಸೆನ್ಸ್ ಹೊಂದಿರುವ ಡಬ್ಬಲ್ ಬ್ಯಾರಲ್ ಗನ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ.

ಅಂಗನವಾಡಿ ‌ಸಹಾಯಕಿಯ ಮೂಗು ಕತ್ತರಿಸಿದ ರಾಕ್ಷಸ; ಹೆಬ್ಬಾಳ್ಕರ್‌ ಕ್ಷೇತ್ರದಲ್ಲಿ ಕೃತ್ಯ

ಬೆಳಗಾವಿ: ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ‌ಹೆಬ್ಬಾಳ್ಕರ್ (Lakshhmi Hebbalkar) ಕ್ಷೇತ್ರದಲ್ಲಿ ಅತ್ಯಂತ ಅಮಾನವೀಯ ರಾಕ್ಷಸಿ ಕೃತ್ಯವೊಂದು ನಡೆದಿದೆ. ಧೂರ್ತನೊಬ್ಬ ಅಂಗನವಾಡಿ ಸಹಾಯಕಿಯ (Anganavadi assistant) ಮೂಗನ್ನೇ ಕತ್ತರಿಸಿ ಕ್ರೌರ್ಯ ಮೆರೆದಿದ್ದಾನೆ. ಪುಟ್ಟ ಮಕ್ಕಳು ಹೂವು ಕಿತ್ತರೆಂಬ ಕಾರಣವನ್ನೇ ಮುಂದಿಟ್ಟು ಸಹಾಯಕಿಯ ಮೂಗನ್ನೇ (Nose cut) ಆತ ಕತ್ತರಿಸಿದ್ದಾನೆ (Crime News).

ಬೆಳಗಾವಿ ತಾಲೂಕಿನ (Belagavi News) ‌ಬಸುರ್ತೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಅಂಗನವಾಡಿ ಸಹಾಯಕಿ ಸುಗಂಧಾ ಮೋರೆ (50) ಅವರೇ ದೌರ್ಜನ್ಯಕ್ಕೆ ಒಳಗಾದವರು. ಅಂಗನವಾಡಿ ಪಕ್ಕದ ಮನೆಯ ಕಲ್ಯಾಣಿ ಮೋರೆ ಎಂಬಾತನೇ ಹಲ್ಲೆ ಮಾಡಿದ ದುಷ್ಕರ್ಮಿ.

ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಈ ಊರಿನ ಅಂಗನವಾಡಿಯ ಪಕ್ಕದಲ್ಲಿ ಕಲ್ಯಾಣಿ ಮೋರೆ ಎಂಬಾತನ ಮನೆ ಇದೆ. ಕೆಲವು ದಿನಗಳ ಹಿಂದೆ ಆತನ ಮನೆಯ ಆವರಣದ ಗಿಡದಿಂದ ಪುಟಾಣಿ ಮಕ್ಕಳು ಹೂವು ಕಿತ್ತರೆಂದು ಹೇಳಲಾಗಿದೆ. ಪುಟ್ಟ ಮಕ್ಕಳು ಏನೋ ತಪ್ಪು ಮಾಡಿದ್ದಾರೆ ಎಂಬುದನ್ನೂ ಅರ್ಥ ಮಾಡಿಕೊಳ್ಳದ ಅಸಾಮಿ ಅದೇ ವಿಷಯವನ್ನು ಇಟ್ಟುಕೊಂಡು ಅಂಗನವಾಡಿಗೆ ಬಂದು ಗಲಾಟೆ ಮಾಡಿದ್ದಾನೆ.

ಮಕ್ಕಳನ್ನು ನಿಂದಿಸುವ ಜತೆಗೆ ಸಹಾಯಕಿಯಾಗಿರುವ ಸುಗಂಧಾ ಮೋರೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ. ನಿನಗೆ ಮಕ್ಕಳನ್ನು ನೋಡಿಕೊಳ್ಳಲು ಆಗುವುದಿಲ್ಲವೇ ಎಂದು ಕೇಳಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಆತ ಪಿತ್ತವನ್ನು ಇನ್ನಷ್ಟು ನೆತ್ತಿಗೇರಿಸಿಕೊಂಡ ಮನೆ ಮಾಲೀಕ ಕಲ್ಯಾಣಿ ಮೋರೆ, ಹರಿತವಾದ ಆಯುಧವೊಂದನ್ನು ತಂದು ಆಕೆಯ ಮುಖವನ್ನೇ ಕತ್ತರಿಸಿದ್ದಾನೆ. ಆತನ ಹೊಡೆತಕ್ಕೆ ಸುಗಂಧಾ ಅವರ ಮೂಗೇ ಕತ್ತರಿಸಿ ಹೋಗಿದೆ.

ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಸುಗಂಧಾ ಮೋರೆ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂರು ದಿನಗಳ ಹಿಂದೆ ಘಟನೆ ನಡೆದಿದೆ. ಕಳೆದ ಮೂರು ದಿನದ ಹಿಂದೆ ಅವರು ನಮ್ಮಲ್ಲಿ ಅಡ್ಮಿಟ್‌ ಆಗಿದ್ದಾರೆ. ಅವರಿಗೆ ಈಗಾಗಲೇ ಒಂದು ಸರ್ಜರಿ ನಡೆದಿದೆ. ಅವರ ಪರಿಸ್ಥಿತಿ ಸ್ಥಿರವಾಗಿದೆ. ಮುಂದಿನ ಪರಿಸ್ಥಿತಿ ನೋಡಿಕೊಂಡು ಸರ್ಜರಿ ಮಾಡಬೇಕೇ ಎನ್ನುವುದು ನಿರ್ಧಾರ ಆಗಲಿದೆ ಎಂದು ಸುಗಂಧಾ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯೆ ಡಾ. ಸಿಂಧೂ ಹೇಳಿದ್ದಾರೆ. ಪೊಲೀಸರು ಕಿರಣ್‌ ಮೋರೆ ಅವರನ್ನು ಬಂಧಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version