Site icon Vistara News

Fortis Hospital: ಜನನಾಂಗದಿಂದ ಹೊರಗೆ ಚಾಚಿದ್ದ ಗರ್ಭಕೋಶ ರೋಬೋಟಿಕ್‌ ಮೂಲಕ ಮರುಸ್ಥಾಪನೆ!

Fortis Hospital

ಬೆಂಗಳೂರು: 39 ವರ್ಷದ ಅನಿವಾಸಿ ಭಾರತೀಯ ಮಹಿಳೆಗೆ ತನ್ನ ಜನನಾಂಗದ ಮೂಲಕ ಹೊರಗೆ ಹಿಗ್ಗಿಕೊಂಡಿದ್ದ ಗರ್ಭಕೋಶವನ್ನು ಫೋರ್ಟಿಸ್‌ ಆಸ್ಪತ್ರೆ (Fortis Hospital) ವೈದ್ಯರ ತಂಡ ಯಶಸ್ವಿಯಾಗಿ ರೋಬೋಟಿಕ್‌ ಮೂಲಕ ಶಸ್ತ್ರಚಿಕಿತ್ಸೆಯ ನಡೆಸಿ ಯಥಾಸ್ಥಿತಿಗೆ ಪುನಃಸ್ಥಾಪಿಸಿದೆ.

ಫೋರ್ಟಿಸ್ ಆಸ್ಪತ್ರೆಯ ಮೂತ್ರಶಾಸ್ತ್ರ, ಸ್ತ್ರೀರೋಗ-ಆಂಕೊಲಾಜಿ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸೆಯ ಹಿರಿಯ ಸಲಹೆಗಾರರಾದ ಡಾ. ರುಬಿನಾ ಶಾನವಾಜ್ ಅವರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ.

ಇದನ್ನೂ ಓದಿ: Pralhad Joshi: ಮುಂಬೈ, ಕೋಲ್ಕತಾದಲ್ಲಿ ಇವಿ ಬ್ಯಾಟರಿ ಚಾರ್ಜರ್ ಘಟಕಕ್ಕೆ ಬೆಂಗಳೂರು ಮಾದರಿ

ಈ ಕುರಿತು ಮಾತನಾಡಿದ ಡಾ. ರುಬಿನಾ, ಎರಡು ಮಕ್ಕಳನ್ನು ಹೊಂದಿರುವ 39 ವರ್ಷದ ಎನ್‌ಆರ್‌ಐ ಮಹಿಳೆಗೆ ನಾಲ್ಕು ವರ್ಷಗಳ ಹಿಂದೆಯೇ ಗರ್ಭಕೋಶವು ಜನನಾಂಗದ ಮೂಲಕ ಹೊರಗೆ ಚಾಚಿಕೊಂಡಿತ್ತು. ಸಾಮಾನ್ಯವಾಗಿ ಋತುಬಂಧ ನಿಂತ ಬಳಿಕ ಈ ಸಮಸ್ಯೆ ಕೆಲವರಲ್ಲಿ ಕಾಣಿಸುತ್ತದೆ. ಆದರೆ ಇವರಿಗೆ ಋತುಬಂಧ ನಿಲ್ಲುವ ಮೊದಲೇ ಗರ್ಭಕೋಶ ಜನನಾಂಗದ ಮೂಲಕ ಚಾಚಿಕೊಂಡಿತ್ತು. ಈ ಸಮಸ್ಯೆಯಿಂದ ಇವರು ದಿನನಿತ್ಯದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲ, ಕಿಬ್ಬೊಟ್ಟೆ ನೋವು, ಹೊಟ್ಟೆ ಉಬ್ಬುವಿಕೆಯಿಂದ ತೊಡೆಗಳ ಅಸ್ವಸ್ಥತೆ, ಮೂತ್ರ ವಿಸರ್ಜನೆ ಮಾಡುವುದು ಸಹ ಕಷ್ಟಕರವಾಗಿತ್ತು. ಕೆಲವರು ಇದಕ್ಕೆ ಗರ್ಭಕೋಶವನ್ನೇ ತೆಗೆದುಹಾಕುವ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುತ್ತಾರೆ. ಆದರೆ, ಫೋರ್ಟಿಸ್‌ ಆಸ್ಪತ್ರೆಯಲ್ಲಿ ಕೆಳಗೆ ಜಾರಿದ ಗರ್ಭಕೋಶವನ್ನು ರೋಬೋಟಿಕ್‌ ಸಹಾಯದ ಮೂಲಕ ಮೇಲೆತ್ತುವ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ. ಅಂತೆಯೇ ಇವರಿಗೂ ಸಹ ಹಲವು ಆಸ್ಪತ್ರೆಗಳಲ್ಲಿ ಗರ್ಭಕೋಶವನ್ನು ತೆಗೆಸುವಂತೆಯೇ ಸಲಹೆ ನೀಡಲಾಗಿತ್ತು.

ಇದನ್ನೂ ಓದಿ: Gold Rate Today: ಆಭರಣ ಪ್ರಿಯರಿಗೆ ಗೋಲ್ಡನ್‌ ಟೈಮ್‌; ಚಿನ್ನದ ದರ ಇಂದು ಕೂಡ ಇಳಿಮುಖ

ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದ ಇವರಿಗೆ “ರೋಬೋಟ್-ಅಸಿಸ್ಟೆಡ್ ಸ್ಯಾಕ್ರೋ-ಹಿಸ್ಟರೊಪೆಕ್ಸಿ ಶಸ್ತ್ರಚಿಕಿತ್ಸೆಯ ಸಲಹೆ ನೀಡಲಾಯಿತು. ಈ ಶಸ್ತ್ರಚಿಕಿತ್ಸೆಯ ಮೂಲಕ ಕೆಳಗೆ ಜಾರಲಾದ ಗರ್ಭಕೋಶವನ್ನು ಅದೇ ಸ್ಥಳದಲ್ಲಿ ಕೂರಿಸಲಾಯಿತು. ಇದೀಗ ಅವರು ಚೇತರಿಸಿಕೊಂಡಿದ್ದಾರೆ ಎಂದು ವಿವರಿಸಿದರು.

Exit mobile version