Site icon Vistara News

Summer Special Trains: ಹಾಲಿಡೇ ಟ್ರಿಪ್‌ಗೆ ರೆಡಿನಾ? ಬೆಂಗಳೂರು-ಮೈಸೂರಿನಿಂದ ಈ ರಾಜ್ಯಗಳಿಗೆ ಸ್ಪೆಷಲ್‌ ಟ್ರೈನ್‌

summer special trains

ಬೆಂಗಳೂರು: ಶಾಲಾ-ಕಾಲೇಜು ಮುಗಿದಿದ್ದು ಬೇಸಿಗೆ ರಜೆ ಶುರುವಾಗಿದೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ತಮ್ಮ ಊರುಗಳಿಗೆ ತೆರಳುವವರಿಗೆ, ಪ್ರವಾಸಕ್ಕೆ ಹೋಗುವವರಿಗಾಗಿ ನೈರುತ್ಯ ಇಲಾಖೆಯು ವಿಶೇಷ ರೈಲುಗಳನ್ನು (Summer Special Trains) ನಿಯೋಜನೆ ಮಾಡಿದೆ. ಬೆಂಗಳೂರು-ಮೈಸೂರಿನಿಂದ ದಕ್ಷಿಣ ಹಾಗೂ ಉತ್ತರ ಭಾರತದ ರಾಜ್ಯಗಳಿಗೆ ರೈಲುಗಳ ಓಡಾಟ ಇರಲಿದೆ. ಜತೆಗೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕಾಗಿ ತಮ್ಮ ಊರುಗಳಿಗೆ ತೆರಳವು ಕಾರಣಕ್ಕೂ ವಿಶೇಷ ರೈಲು ಇರಲಿದೆ.

ಯಶವಂತಪುರದಿಂದ ಚೆನ್ನೈ ನಡುವೆ ವಿಶೇಷ ರೈಲುಗಳ ಸಂಚಾರ

ನೈರುತ್ಯ ರೈಲ್ವೆಯು ಯಶವಂತಪುರ ಹಾಗೂ ಡಾ.ಎಂ.ಜಿ.ಆರ್.ಚೆನ್ನೈ ಸೆಂಟ್ರಲ್ ನಡುವೆ 1 ಟ್ರಿಪ್ ಮತ್ತು ಎಸ್ಎಂವಿಟಿ ಬೆಂಗಳೂರು-ಹೌರಾ ನಿಲ್ದಾಣಗಳ ನಡುವೆ 6 ಟ್ರಿಪ್‌ಗಳಿಗೆ ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

ಆ ಪ್ರಕಾರ ರೈಲು ಸಂಖ್ಯೆ 06533/06534 ಯಶವಂತಪುರ-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್-ಯಶವಂತಪುರ ಎಕ್ಸ್‌ಪ್ರೆಸ್‌ ವಿಶೇಷ (1 ಟ್ರಿಪ್) ರೈಲು ಏಪ್ರಿಲ್ 18 ರಂದು ಯಶವಂತಪುರದಿಂದ ರಾತ್ರಿ 10:45ಕ್ಕೆ ಹೊರಟು, ಮರುದಿನ ಬೆಳಗ್ಗೆ 04:55 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ತಲುಪಲಿದೆ. ನಂತರ ರೈಲು ಸಂಖ್ಯೆ 06534 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ಏಪ್ರಿಲ್ 19ರಂದು ಬೆಳಗ್ಗೆ 06:45ಕ್ಕೆ ಹೊರಟು, ಅದೇ ದಿನ ಮಧ್ಯಾಹ್ನ 12.30ಕ್ಕೆ ಯಶವಂತಪುರ ತಲುಪಲಿದೆ.

ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ ಜಂಕ್ಷನ್, ಜೋಲಾರ್ಪೆಟ್ಟೈ ಜಂಕ್ಷನ್, ಅರಕ್ಕೋಣಂ ಜಂಕ್ಷನ್ ಮತ್ತು ಪೆರಂಬೂರ್ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲ್ಲಲಿದೆ. ಈ ವಿಶೇಷ ರೈಲುಗಳು ಎಸಿ ಫಸ್ಟ್ ಕ್ಲಾಸ್ -1, ಎಸಿ -2 ಶ್ರೇಣಿ -2, ಎಸಿ -3 ಶ್ರೇಣಿ -6, ಸ್ಲೀಪರ್ ಕ್ಲಾಸ್ -8, ಜನರಲ್ ಸೆಕೆಂಡ್ ಕ್ಲಾಸ್ -2 ಮತ್ತು ಬ್ರೇಕ್, ಲಗೇಜ್ ಕಮ್ ಜನರೇಟರ್ ಕಾರ್ -2 ಸೇರಿದಂತೆ ಒಟ್ಟು 21 ಬೋಗಿಗಳನ್ನು ಒಳಗೊಂಡಿರುತ್ತದೆ.

ಎಸ್ಎಂವಿಟಿ ಬೆಂಗಳೂರು-ಹೌರಾ-ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲು (6 ಟ್ರಪ್‌ಗಳು)

ರೈಲು ಸಂಖ್ಯೆ 06585 ಎಸ್ಎಂವಿಟಿ ಬೆಂಗಳೂರು-ಹೌರಾ ಸಾಪ್ತಾಹಿಕ ವಿಶೇಷ ರೈಲು ಏಪ್ರಿಲ್ 19, 26 ಮತ್ತು ಮೇ 3, 10, 17 ಮತ್ತು 24, ರಂದು 00:30 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಡಲಿದೆ. ಈ ರೈಲು ಮರುದಿನ 10:00 ಗಂಟೆಗೆ ಹೌರಾವನ್ನು ತಲುಪಲಿದೆ. ರೈಲು ಸಂಖ್ಯೆ 06586 ಹೌರಾದಿಂದ ಏಪ್ರಿಲ್ 20, 27, ಮೇ 4, 11, 18 ಮತ್ತು 25 ರಂದು ಮಧ್ಯಾಹ್ನ 1:05 ಗಂಟೆಗೆ ಹೊರಡಲಿದೆ. ಈ ರೈಲು ಮರುದಿನ ರಾತ್ರಿ 8:10 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.

ಈ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ಪೆಟ್ಟೈ, ಕಟಪಾಡಿ, ರೇಣಿಗುಂಟ, ಗುಡೂರು, ನೆಲ್ಲೂರು, ಒಂಗೋಲ್, ವಿಜಯವಾಡ, ರಾಜಮಂಡ್ರಿ, ದುವ್ವಾಡ, ಕೊಟ್ಟವಲಸ, ವಿಜಯನಗರಂ, ಶ್ರೀಕಾಕುಳಂ ರಸ್ತೆ, ಪಲಾಸ, ಬ್ರಹ್ಮಪುರ, ಖುರ್ದಾ ರಸ್ತೆ, ಭುವನೇಶ್ವರ, ಕಟಕ್ ಜಂಕ್ಷನ್, ಭದ್ರಾಕ್, ಬಾಲೇಶ್ವರ ಮತ್ತು ಖರಗ್ಪುರ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಇದನ್ನೂ ಓದಿ: Lok Sabha Election 2024: ಮಂಡ್ಯದಲ್ಲಿ ಕಾಂಗ್ರೆಸ್‌ ಪರ ಪ್ರಚಾರಕ್ಕೆ ಬಂದ ದರ್ಶನ್‌; ಯಾಕೆ ಸುಮಲತಾ ಸೈಲೆಂಟ್?

ಚೆನ್ನೈ-ವೈಟ್‌ಫೀಲ್ಡ್ ನಡುವೆ ವಿಶೇಷ ರೈಲುಗಳ ಓಡಾಟ

ತಮಿಳುನಾಡು ಚುನಾವಣೆಯ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಹಿನ್ನೆಲೆಯಲ್ಲೂ ಬೇಡಿಕೆಗೆ ಅನುಗುಣವಾಗಿ ರೈಲು ಸೇವೆಯನ್ನು ಒದಗಿಸಲಾಗುತ್ತಿದೆ. ರೈಲು ಸಂಖ್ಯೆ 06005 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ವೈಟ್‌ಫೀಲ್ಡ್‌ ವಿಶೇಷ ರೈಲು ಏಪ್ರಿಲ್ 18 ಮತ್ತು 20ರಂದು ಬೆಳಗ್ಗೆ 05:35ಕ್ಕೆ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ ಹೊರಡಲಿದೆ. ಈ ರೈಲು ಅದೇ ದಿನ ಮಧ್ಯಾಹ್ನ 12 ಗಂಟೆಗೆ ವೈಟ್ ಫೀಲ್ಡ್ ತಲುಪಲಿದೆ. ಈ ರೈಲು ಅರಕ್ಕೋಣಂ ಜಂಕ್ಷನ್, ವಾಲಾಜಾ ರಸ್ತೆ, ಕಟಪಾಡಿ ಜಂಕ್ಷನ್, ಜೋಲಾರ್ಪೆಟ್ಟೈ ಜಂಕ್ಷನ್, ಕುಪ್ಪಂ ಮತ್ತು ಬಂಗಾರಪೇಟೆ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

ಹಿಂದಿರುಗುವಾಗ ರೈಲು ಸಂಖ್ಯೆ 06006 ವೈಟ್‌ಫೀಲ್ಡ್‌-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್‌ ಏಪ್ರಿಲ್ 18 ಮತ್ತು 20 ರಂದು ಮಧ್ಯಾಹ್ನ 1ಗಂಟೆಗೆ ವೈಟ್‌ಫೀಲ್ಡ್‌ನಿಂದ ಹೊರಡಲಿದೆ. ಈ ರೈಲು ಅದೇ ದಿನ 07:00 ಗಂಟೆಗೆ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ತಲುಪಲಿದೆ. ಈ ರೈಲು ಬಂಗಾರಪೇಟೆ, ಕುಪ್ಪಂ, ಜೋಲಾರ್ಪೆಟ್ಟೈ ಜಂಕ್ಷನ್, ಕಟಪಾಡಿ ಜಂಕ್ಷನ್, ವಾಲಾಜಾ ರಸ್ತೆ, ಅರಕ್ಕೋಣಂ ಮತ್ತು ಪೆರಂಬೂರ್ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಈ ವಿಶೇಷ ರೈಲುಗಳು ಎಸಿ ಫಸ್ಟ್ ಕ್ಲಾಸ್-1, ಎಸಿ-2 ಟೈರ್-2, ಎಸಿ-3 ಟೈರ್-6, ಸ್ಲೀಪರ್ ಕ್ಲಾಸ್-7, ಪ್ಯಾಂಟ್ರಿ ಕಾರ್-1, ಜನರಲ್ ಸೆಕೆಂಡ್ ಕ್ಲಾಸ್-3, ಸೆಕೆಂಡ್ ಲಗೇಜ್ ಕಂ ಬ್ರೇಕ್ ವ್ಯಾನ್ಗಳು/ ಅಂಗವಿಕಲ ಬೋಗಿ-1 ಮತ್ತು ಬ್ರೇಕ್, ಲಗೇಜ್ ಮತ್ತು ಜನರೇಟರ್ ಕಾರ್-1 ಸೇರಿದಂತೆ ಒಟ್ಟು 22 ಬೋಗಿಗಳನ್ನು ಒಳಗೊಂಡಿರುತ್ತದೆ

ಎಸ್ಎಂವಿಟಿ ಬೆಂಗಳೂರು ಮತ್ತು ಕಲಬುರಗಿ ನಡುವೆ ಬೇಸಿಗೆ ವಿಶೇಷ ರೈಲು ಸೇವೆ

ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (ಎಸ್‌ಎಂವಿಟಿ) ಮತ್ತು ಕಲಬುರಗಿ ನಡುವೆ 9 ಟ್ರಿಪ್‌ಗಳಿಗೆ ಬೇಸಿಗೆ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ಈ ಹಿಂದೆ ತಿಳಿಸಲಾಗಿತ್ತು. ಈಗ ಈ ವಿಶೇಷ ರೈಲುಗಳ ಏಳು ಟ್ರಿಪ್‌ಗಳಲ್ಲಿ ದಿನಾಂಕ ಬದಲಾಗಿದೆ.

ರೈಲು ಸಂಖ್ಯೆ 06589 ಏಪ್ರಿಲ್ 21 ರಿಂದ ಮೇ 19ರವರೆಗೆ ಪ್ರತಿ ಭಾನುವಾರ ಮತ್ತು ಮಂಗಳವಾರ ರಾತ್ರಿ 11: 00 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 09:05 ಗಂಟೆಗೆ ಕಲಬುರಗಿಯನ್ನು ತಲುಪಲಿದೆ. ರೈಲು ಸಂಖ್ಯೆ 06590 ಏಪ್ರಿಲ್ 22 ರಿಂದ ಮೇ 20 ರವರೆಗೆ ಪ್ರತಿ ಸೋಮವಾರ ಮತ್ತು ಬುಧವಾರ ಸಂಜೆ 05:10 ಗಂಟೆಗೆ ಕಲಬುರಗಿಯಿಂದ ಹೊರಟು ಮರುದಿನ ಬೆಳಗ್ಗೆ 04:15 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.

ಮೈಸೂರಿನಿಂದಲ್ಲೂ ವಿಶೇಷ ರೈಲುಗಳ ಓಡಾಟ

ಬೇಸಿಗೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಮೈಸೂರು-ಮುಜಾಫರ್ಪುರ ನಿಲ್ದಾಣಗಳ ನಡುವೆ ಬೇಸಿಗೆ ವಿಶೇಷ ರೈಲು ಸೇವೆ ನಾಲ್ಕು ಟ್ರಿಪ್‌ಗಳಿಗೆ ಕಾರ್ಯನಿರ್ವಹಿಸಲಿದೆ. ರೈಲು ಸಂಖ್ಯೆ 06221 ಮೈಸೂರು-ಮುಜಾಫರ್ಪುರ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ವಿಶೇಷ ರೈಲು ಏಪ್ರಿಲ್ 15, 22, 29 ಮತ್ತು ಮೇ 6 ರಂದು ಬೆಳಗ್ಗೆ 10:30 ಕ್ಕೆ ಮೈಸೂರಿನಿಂದ ಹೊರಟು ಮೂರನೇ ದಿನ ಮಧ್ಯಾಹ್ನ 1:30 ಗಂಟೆಗೆ ಮುಜಾಫರ್ಪುರವನ್ನು ತಲುಪಲಿದೆ.

ರೈಲು ಸಂಖ್ಯೆ 06222 ಏಪ್ರಿಲ್ 18, 25, ಮೇ 2 ಮತ್ತು 9 ರಂದು ಮಧ್ಯಾಹ್ನ 1:00 ಗಂಟೆಗೆ ಮುಜಾಫರ್ಪುರದಿಂದ ಹೊರಟು ಮೂರನೇ ದಿನ 4:40 ಗಂಟೆಗೆ ಮೈಸೂರಿಗೆ ತಲುಪಲಿದೆ. ಈ ವಿಶೇಷ ರೈಲು ಮಂಡ್ಯ, ಕೆಎಸ್ಆರ್ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ಪೆಟ್ಟೈ, ಕಟಪಾಡಿ, ರೇಣಿಗುಂಟ, ಗುಡೂರು, ಒಂಗೋಲ್, ವಿಜಯವಾಡ, ರಾಜಮಂಡ್ರಿ, ದುವ್ವಾಡ, ಕೊಟ್ಟವಲಸ, ವಿಜಯನಗರಂ, ಶ್ರೀಕಾಕುಳಂ ರಸ್ತೆ, ಪಲಾಸ, ಬ್ರಹ್ಮಪುರ, ಖುರ್ದಾ ರಸ್ತೆ, ಭುವನೇಶ್ವರ, ಕಟಕ್ ಜಂಕ್ಷನ್, ಭದ್ರಾಕ್, ಬಾಲೇಶ್ವರ್, ಖರಗ್ಪುರ, ಡಂಕುನಿ, ಬೋಲ್ಪುರ್ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version