ಬೆಂಗಳುರು: ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಹಿನ್ನೆಲೆಯಲ್ಲಿ ತಮ್ಮ ಊರುಗಳಿಗೆ ತೆರಳುವವರಿಗೆ, ಪ್ರವಾಸಕ್ಕೆ ಹೋಗುವವರಿಗಾಗಿ ನೈರುತ್ಯ ಇಲಾಖೆಯು ವಿಶೇಷ ರೈಲುಗಳನ್ನು (Summer Special Trains) ನಿಯೋಜನೆ ಮಾಡಿದೆ. ಬೇಸಿಗೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಮುಜಾಫರ್ಪುರ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಎರಡು ಹೆಚ್ಚುವರಿ ಟ್ರಿಪ್‌ಗಳನ್ನು ಓಡಿಸಲು ನೈರುತ್ಯ ಇಲಾಖೆ ನಿರ್ಧರಿಸಿದೆ.
ರೈಲು ಸಂಖ್ಯೆ 05271/05272 ಮುಜಾಫರ್ಪುರ-ಯಶವಂತಪುರ-ಮುಜಾಫರ್ಪುರ ಬೇಸಿಗೆ ವಿಶೇಷ ರೈಲು. ಈ ರೈಲು ಮೇ 24 ಮತ್ತು 31 ರಂದು ಮಧ್ಯಾಹ್ನ 03:30 ಗಂಟೆಗೆ ಮುಜಾಫರ್ಪುರದಿಂದ ಹೊರಟು ಭಾನುವಾರ ರಾತ್ರಿ 7 ಗಂಟೆಗೆ ಯಶವಂತಪುರಕ್ಕೆ ಆಗಮಿಸಲಿದೆ. ನಂತರ ರೈಲು ಸಂಖ್ಯೆ 05272 ಯಶವಂತಪುರದಿಂದ ಮೇ 27 ಮತ್ತು ಜೂನ್ 3 ರಂದು 07:30ಕ್ಕೆ ಹೊರಟು ಬುಧವಾರ ಮಧ್ಯಾಹ್ನ 12:00 ಗಂಟೆಗೆ ಮುಜಾಫರ್ಪುರ ನಿಲ್ದಾಣವನ್ನು ತಲುಪಲಿದೆ.
ಈ ರೈಲು ಎರಡು ಮಾರ್ಗಗಳಲ್ಲಿ ಹಾಜಿಪುರ, ಪಾಟಲಿಪುತ್ರ, ಅರಾ, ಬಕ್ಸಾರ್, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ಪ್ರಯಾಗ್ರಾಜ್ ಚಿಯೋಕಿ, ಮಾಣಿಕ್ಪುರ, ಸತ್ನಾ, ಕಟ್ನಿ, ಜಬಲ್ಪುರ್, ನರಸಿಂಗಪುರ, ಪಿಪರಿಯಾ, ಇಟಾರ್ಸಿ, ನಾಗ್ಪುರ, ಬಲ್ಹಾರ್ಷಾ, ಸಿರ್ಪುರ್ ಕಾಖಜನಗರ್, ರಾಮಗುಂಡಂ, ಕಾಜಿಪೇಟ್, ಜಂಗಾಂವ್, ಕಾಚಿಗುಡ, ಶಾದ್ನಗರ್, ಜಡ್ ಚರ್ಲಾ, ಮಹಬೂಬ್ ನಗರ್ ಸೇರಿದಂತೆ ಗದ್ವಾಲ್, ಕರ್ನೂಲ್ ಸಿಟಿ, ಡೋನ್, ಗುತ್ತಿ, ಅನಂತಪುರ & ಧರ್ಮಾವರಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಇದನ್ನು ಓದಿ: Murder case : ದನ ಕಟ್ಟುವ ವಿಚಾರಕ್ಕೆ ಕಿರಿಕ್; ಕಾಲಿಂದ ಒದ್ದು ಕುಡುಗೋಲಿನಿಂದ ಹೊಡೆದು ದೊಡ್ಡಮ್ಮನನ್ನೇ ಕೊಂದ ದುಷ್ಟ
ಇನ್ನೂ ಬೇಸಿಗೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಬೆಂಗಳೂರಿನ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಭುವನೇಶ್ವರ ಮತ್ತು ಎಸ್ಎಂವಿಟಿ ಬೆಂಗಳೂರು-ಸಂಬಲ್ಪುರ ನಿಲ್ದಾಣಗಳ ನಡುವೆ ಒಂದು ಟ್ರಿಪ್ ಬೇಸಿಗೆ ವಿಶೇಷ ರೈಲುಗಳನ್ನು ನೈರುತ್ಯ ರೈಲ್ವೆ ಇಲಾಖೆಯು ನಿಯೋಜಿಸಿದೆ.
ರೈಲು ಸಂಖ್ಯೆ 06271/06272 ಎಸ್ಎಂವಿಟಿ ಬೆಂಗಳೂರು-ಭುವನೇಶ್ವರ ಸಮ್ಮರ್ ಸ್ಪೆಷಲ್ ಎಕ್ಸ್ ಪ್ರೆಸ್.. ಈ ರೈಲು (06271) ಮೇ 31 ರಂದು ಮಧ್ಯರಾತ್ರಿ 12:10 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ 04:00 ಗಂಟೆಗೆ ಭುವನೇಶ್ವರವನ್ನು ತಲುಪಲಿದೆ. ರೈಲು ಸಂಖ್ಯೆ 06272 ಜೂನ್ 2 ರಂದು 06:30 ಗಂಟೆಗೆ ಭುವನೇಶ್ವರದಿಂದ ಹೊರಟು ಮರುದಿನ 09:00 ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ಡಾಣಕ್ಕೆ ಆಗಮಿಸಲಿದೆ.
ಈ ವಿಶೇಷ ರೈಲುಗಳು ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ ಪೆಟ್ಟೈ, ಕಟಪಾಡಿ , ರೇಣಿಗುಂಟ, ಗುಡೂರು, ನೆಲ್ಲೂರು, ಒಂಗೋಲ್, ವಿಜಯವಾಡ, ರಾಜಮಂಡ್ರಿ, ದುವ್ವಾಡ, ಕೊತ್ತವಲಸ, ವಿಜಯನಗರಂ, ಶ್ರೀಕಾಕುಳಂ ರೋಡ್, ಪಲಾಸ, ಬ್ರಹ್ಮಪುರ ಮತ್ತು ಖುರ್ದಾ ರೋಡ್ ನಿಲ್ದಾಣಗಳಲ್ಲಿ ನಿಲ್ಲಲಿವೆ.
ರೈಲು ಸಂಖ್ಯೆ 06279/06280 ಎಸ್ಎಂವಿಟಿ ಬೆಂಗಳೂರು-ಸಂಬಲ್ಪುರ-ಎಸ್ಎಂವಿಟಿ ಬೆಂಗಳೂರು ಸಮ್ಮರ್ ಸ್ಪೆಷಲ್ ಎಕ್ಸ್ ಪ್ರೆಸ್: ಈ ರೈಲು ಜೂನ್ 7 ರಂದು ಮಧ್ಯರಾತ್ರಿ 12:10 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು ಮರುದಿನ 05:00 ಗಂಟೆಗೆ ಸಂಬಲ್ಪುರವನ್ನು ತಲುಪಲಿದೆ. ರೈಲು ಸಂಖ್ಯೆ 06280 ಜೂನ್ 8 ರಂದು 11:35 ಗಂಟೆಗೆ ಸಂಬಲ್ಪುರದಿಂದ ಹೊರಟು ಮರುದಿನ 19:30 ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ಡಾಣಕ್ಕೆ ಆಗಮಿಸಲಿದೆ.
ಈ ವಿಶೇಷ ರೈಲು ಎರಡು ಮಾರ್ಗಗಳಲ್ಲಿ ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ ಪೆಟ್ಟೈ, ಕಟಪಾಡಿ , ರೇಣಿಗುಂಟ, ಗುಡೂರು, ನೆಲ್ಲೂರು, ಒಂಗೋಲ್, ವಿಜಯವಾಡ , ರಾಜಮಂಡ್ರಿ, ದುವ್ವಾಡಾ, ಕೊತ್ತವಲಸ, ವಿಜಯನಗರಂ, ಬೊಬ್ಬಿಲಿ, ಪಾರ್ವತಿಪುರಂ, ರಾಯಗಡ, ಮುನಿಗುಡ, ಕೇಸಿಂಗಾ, ಟಿಟ್ಲಾಘರ್, ಬಾಲಂಗಿರ್ ಮತ್ತು ಬಾರ್ಘರ್ ರೋಡ್ ನಿಲ್ದಾಣಗಳಲ್ಲಿ ನಿಲ್ಲಲಿವೆ.
ಇನ್ನೂ ಬುಕಿಂಗ್ ಮತ್ತು ವೇಳಾಪಟ್ಟಿ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು www.enquiry.indianrail.gov.in ವೆಬ್ ಸೈಟ್‌ಗೆ ಭೇಟಿ ನೀಡಿ ಅಥವಾ ಸಹಾಯವಾಣಿ 139 ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ