ಬೆಂಗಳೂರು: ರಾಜ್ಯದಲ್ಲಿ 108 ಆಂಬ್ಯುಲೆನ್ಸ್ ಸೇವೆ ಒದಗಿಸುವ ಟೆಂಡರ್ ರದ್ದಾಗಿ ಏಳು ವರ್ಷ ಕಳೆದರೂ ಈವರೆಗೂ ಹೊಸಬರಿಗೆ ಟೆಂಡರ್ ನೀಡಲು ಆರೋಗ್ಯ ಇಲಾಖೆಗೆ ಸಾಧ್ಯವಾಗಿಲ್ಲ. ಇದು ತುರ್ತು ಆರೋಗ್ಯ ಸೇವೆಗಳ ಬಗೆಗಿನ ವಿಳಂಬ ಧೋರಣೆಯ ದ್ಯೋತಕ ಎಂಬ ಆರೋಪ ಕೇಳಿ ಬಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ (TA Sharavana) ಪ್ರಶ್ನಿಸಿದರು.
ಈ ಕುರಿತು ಸದನದ ಶೂನ್ಯ ವೇಳೆಯಲ್ಲಿ ಪ್ರಶ್ನಿಸಿದ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಅವರು, ರಾಜ್ಯದಲ್ಲಿ ಡೆಂಗ್ಯೂ ರುದ್ರನರ್ತನ ಹಿನ್ನೆಲೆಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಆದರೆ, 108 ಆಂಬ್ಯುಲೆನ್ಸ್ ಸೇವೆ ಒದಗಿಸುವ ಟೆಂಡರ್ ರದ್ದಾಗಿ ಏಳು ವರ್ಷ ಕಳೆದರೂ ಈವರೆಗೂ ಹೊಸಬರಿಗೆ ಟೆಂಡರ್ ನೀಡಲೂ ಆರೋಗ್ಯ ಇಲಾಖೆಗೆ ಸಾಧ್ಯವಾಗಿಲ್ಲ. ಇದು ತುರ್ತು ಆರೋಗ್ಯ ಸೇವೆಗಳ ಬಗೆಗಿನ ವಿಳಂಬ ಧೋರಣೆಯ ದ್ಯೋತಕ ಎಂಬ ಆರೋಪ ಕೇಳಿ ಬಂದಿದೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Karnataka Rain : ನಿರಂತರ ಮಳೆಗೆ ಮೈಸೂರಿನ ಒಲಂಪಿಯಾ ಚಿತ್ರಮಂದಿರದ ಗೋಡೆ ಕುಸಿತ; ನಾಲ್ವರು ಗಂಭೀರ
ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆಂಬ್ಯುಲೆನ್ಸ್ ಸೇವೆಯಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ 2023ರ ಜು.22ರಂದು ತಾಂತ್ರಿಕ ಸಲಹಾ ಸಮಿತಿ ನೇಮಿಸಲಾಗಿತ್ತು. ಈ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿ ತಿಂಗಳುಗಳೇ ಕಳೆದರೂ ಈವರೆಗೂ ಟೆಂಡರ್ ಕರೆಯಲು ಉನ್ನತ ಮಟ್ಟದ ಸಮಿತಿ ಒಪ್ಪಿಗೆ ನೀಡಿಲ್ಲ. ಹೀಗಾಗಿ ಆಂಬ್ಯುಲೆನ್ಸ್ ಸೇವೆಗೆ ಹಿಡಿದಿರುವ ಗ್ರಹಣ ಮುಂದುವರಿದಿದೆ. ರಾಜ್ಯದಲ್ಲಿ ತುರ್ತು ಅನಾರೋಗ್ಯ ಸಂದರ್ಭಗಳಲ್ಲಿ ಆರೋಗ್ಯ ಕವಚ ಆಂಬ್ಯುಲೆನ್ಸ್ ಸೇವೆ ಒದಗಿಸಲು 2007ರಲ್ಲಿ ಟೆಂಡರ್ ಪಡೆದಿದ್ದ ಜಿವಿಕೆಯ ಸಂಸ್ಥೆಯ ಗುತ್ತಿಗೆಯನ್ನು ಆಸಮರ್ಪಕ ಸೇವೆ ಹಾಗೂ ನಿಯಮ ಉಲ್ಲಂಘನೆ ಕಾರಣ ನೀಡಿ 2017ರಲ್ಲಿ ಟೆಂಡರ್ ರದ್ದುಪಡಿಸಿತ್ತು. ಜೆವಿಕೆ-ಇಎಂಆರ್ಇ ಸಂಸ್ಥೆಯು ವಿಳಂಬ ಸೇವೆ, ಜಿಪಿಎಸ್ ಆಳವಡಿಕೆ ಮಾಡದಿರುವುದು ಸಿಬ್ಬಂದಿಯ ನಿರ್ವಹಣೆ ವೈಫಲ್ಯ ಸೇರಿದಂತೆ ಟೆಂಡರ್ ಷರತ್ತುಗಳನ್ನು ಉಲ್ಲಂಘಿಸಿದೆ ಎಂಬ ಕಾರಣಕ್ಕೆ ಟೆಂಡರ್ ರದ್ದುಪಡಿಸಲಾಗಿತ್ತು ಬಳಿಕ 3 ಬಾರಿ ಟೆಂಡರ್ ಕರೆದಿದ್ದರೂ ಯಾರೊಬ್ಬರೂ ಭಾಗವಹಿಸಿರಲಿಲ್ಲ. ಹೀಗಾಗಿ 2019ರಲ್ಲಿ ಜಿವಿಕೆ ಹಾಗೂ ತುರ್ತು ಗ್ರೀನ್ ಹೆಲ್ತ್ ಜತೆ ಒಡಂಬಡಿಕೆ ಆಧಾರದ ಮೇಲೆ ಆಂಬ್ಯುಲೆನ್ಸ್ ಸೇವೆ ನೀಡಲಾಗುತ್ತಿದೆ ಆದರೆ, 7 ವರ್ಷದಿಂದ ಅಧಿಕೃತ ಟೆಂಡರ್ ಪಡೆದಿರುವ ಆಂಬ್ಯುಲೆನ್ಸ್ ಸೇವಾದಾರ ಸಂಸ್ಥೆ ಇಲ್ಲದಂತಾಗಿದೆ. ಅದ್ದರಿಂದ, ಆಂಬ್ಯುಲೆನ್ಸ್ ಸೇವೆಯಲ್ಲಿ ಸತತವಾಗಿ ವ್ಯತ್ಯಯವಾಗುತ್ತಿದೆ ಎಂದು ಅವರು ವಿವರಿಸಿದರು.
108 ಆಂಬ್ಯುಲೆನ್ಸ್ ಸೇವೆ ಕುರಿತು 2014-19 ರವರೆಗಿನ ಪ್ರಕರಣಗಳ ಬಗ್ಗೆ ಸಿಎಜಿ ವರದಿ ಸಲ್ಲಿಸಿದ್ದು ಶೇ.60ರಷ್ಟು ಎಮರ್ಜನ್ಸಿ ಪ್ರಕರಣಗಳಲ್ಲಿ 108 ಆಂಬ್ಯುಲೆನ್ಸ್ ಸೇವೆ ನಿಗದಿತ ಸಮಯಕ್ಕೆ ದೊರೆತಿಲ್ಲ. ಮತ್ತು 51 ಲಕ್ಷ ಎಮರ್ಜೆನ್ಸಿ ಪ್ರಕರಣಗಳಲ್ಲಿ 41.9 ಲಕ್ಷ ಮಾತ್ರ ಆಂಬ್ಯುಲೆನ್ಸ್ ನಿಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಟೆಂಡರ್ ರದ್ದುಪಡಿಸಿ ಬೇರೆ ಕಂಪನಿಗೆ ಟೆಂಡರ್ ನೀಡಲು ನಿರ್ಧರಿಸಲಾಗಿತ್ತು. ಆದರೆ ಒಡಂಬಡಿಕೆ ಆಧಾರದ ಮೇಲೆ 746 ಆಂಬ್ಯುಲೆನ್ಸ್ ನಿರ್ವಹಿಸಲು ಅವಕಾಶ ನೀಡಲಾಗಿತ್ತು.
ಇದನ್ನೂ ಓದಿ: Job Alert: ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಅಪ್ಲೈ ಮಾಡುವ ವಿಧಾನ ಇಲ್ಲಿದೆ
ಆದರೆ ಒಡಂಬಡಿಕೆ ಮಾಡಿಕೊಂಡಿರುವ ಸಂಸ್ಥೆಗೆ ಸರ್ಕಾರ ಕಾಲಕಾಲಕ್ಕೆ ವೇತನ ನೀಡುತ್ತಿದ್ದರೂ ಅವರು ಸಿಬ್ಬಂದಿಗೆ ನೀಡುತ್ತಿಲ್ಲ, ಗುತ್ತಿಗೆ ಜತೆಗೆ ಸರ್ಕಾರಿ ಆಸ್ಪತ್ರೆ ಬದಲಿಗೆ ಖಾಸಗಿ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗುವುದು, ರೋಗಿಯ ಬಳಿ ಹಣ ಪಡೆಯುವುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಈವರೆಗೆ ಪರಿಹಾರ ಕಂಡುಕೊಂಡಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ತುರ್ತಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಎಂಎಲ್‌ಸಿ ಟಿ.ಎ.ಶರವಣ ಆಗ್ರಹಿಸಿದರು.