ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ದೇಶದ ಅತಿದೊಡ್ಡ ಹಣಕಾಸು ಸೇವಾ ಗುಂಪುಗಳಲ್ಲಿ ಒಂದಾದ ಬಜಾಜ್ ಫಿನ್‌ಸರ್ವ್ ಲಿಮಿಟೆಡ್‌ನ ಭಾಗವಾಗಿರುವ ಬಜಾಜ್ ಫೈನಾನ್ಸ್ ಲಿಮಿಟೆಡ್‌ನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಓಯು) ಸಹಿ ಹಾಕಿದೆ. ಈ ಮೂಲಕ ಬಜಾಜ್ ಫೈನಾನ್ಸ್ ಸಂಸ್ಥೆ ಟಾಟಾ ಮೋಟಾರ್ಸ್‌ನ (Tata Motors) ಸಂಪೂರ್ಣ ವಾಣಿಜ್ಯ ವಾಹನ ಉತ್ಪನ್ನಗಳಿಗೆ ಹಣಕಾಸು ವ್ಯವಸ್ಥೆ ಒದಗಿಸುತ್ತದೆ ಮತ್ತು ಗ್ರಾಹಕರು ಕಂಪನಿಯ ವಿಸ್ತಾರವಾದ ವ್ಯಾಪ್ತಿ, ಸ್ಪರ್ಧಾತ್ಮಕ ಬಡ್ಡಿ ದರಗಳು, ಫ್ಲೆಕ್ಸಿ ಲೋನ್ ಮತ್ತು ಡಿಜಿಟಲ್ ಆಧರಿತ ಸಾಲ ಪ್ರಕ್ರಿಯೆಗಳ ಪ್ರಯೋಜನಗಳನ್ನು ಪಡೆಯುತ್ತಾರೆ.
ಈ ಕುರಿತು ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ಟ್ರಕ್ಸ್ ವೈಸ್ ಪ್ರೆಸಿಡೆಂಟ್ ಮತ್ತು ಬಿಸಿನೆಸ್ ಹೆಡ್ ರಾಜೇಶ್ ಕೌಲ್ ಮಾತನಾಡಿ, ಗ್ರಾಹಕರ ಸಂತೋಷಕ್ಕಾಗಿ ಉನ್ನತ ದರ್ಜೆಯ ಉತ್ಪನ್ನಗಳನ್ನು ಒದಗಿಸುವ ನಮ್ಮ ದೃಷ್ಟಿಯನ್ನು ಹೊಂದಿರುವ ಕಂಪನಿಯಾದ ಬಜಾಜ್ ಫೈನಾನ್ಸ್ ಜತೆ ಪಾಲುದಾರಿಕೆ ಹೊಂದಲು ನಾವು ಸಂತೋಷ ಪಡುತ್ತೇವೆ. ವಾಣಿಜ್ಯ ವಾಹನಗಳ ಫೈನಾನ್ಸಿಂಗ್ ಕ್ಷೇತ್ರದ ಅವರ ಈ ಆರಂಭಿಕ ಹೆಜ್ಜೆಯು ಸಾರಿಗೆ ವಲಯದ ಅಗಾಧ ಸಾಮ್ರಾಜ್ಯವನ್ನು ಅವರದನ್ನಾಗಿ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ನಾವಂದು ಕೊಂಡಿದ್ದೇವೆ.
ಇದನ್ನೂ ಓದಿ: Bengaluru News: ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ ಉದ್ಘಾಟನೆ ಜೂ.30ಕ್ಕೆ
ಜತೆಗೆ ಈ ಪಾಲುದಾರಿಕೆಯು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬಜಾಜ್ ಫೈನಾನ್ಸ್‌ನ ದೊಡ್ಡ ನೆಟ್‌ವರ್ಕ್‌ನ ಪ್ರಯೋಜನವನ್ನು ನೀಡುತ್ತದೆ. ಗ್ರಾಹಕರು ಅವಶ್ಯಕತೆಗಳಿಗೆ ಅನುಗುಣವಾಗಿ ಹಣಕಾಸು ಪರಿಹಾರಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ನಮ್ಮ ಮೌಲ್ಯಯುತ ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಬಜಾಜ್ ಫೈನಾನ್ಸ್‌ನ ಉಪ ವ್ಯವಸ್ಥಾಪಕ ನಿರ್ದೇಶಕ ಅನುಪ್ ಸಹಾ ಮಾತನಾಡಿ, ಬಜಾಜ್ ಫೈನಾನ್ಸ್‌ನಲ್ಲಿನ ನಮ್ಮ ವ್ಯವಹಾರದ ನೀತಿಯಲ್ಲಿ ಗ್ರಾಹಕರ ಕೇಂದ್ರಿತತೆ ಬೇರೂರಿದೆ. ನಾವು ಗ್ರಾಹಕರಿಗೆ ಅನುಕೂಲಕರ ಹಣಕಾಸು ಪರಿಹಾರಗಳನ್ನು ಒದಗಿಸುತ್ತೇವೆ. ಆ ಮೂಲಕ ಅವರು ಮಾಲೀಕತ್ವದ ಸಂತೋಷಕರ ಅನುಭವವನ್ನು ಹೊಂದುತ್ತಾರೆ. ಟಾಟಾ ಮೋಟಾರ್ಸ್ ಜತೆಗಿನ ನಮ್ಮ ಪಾಲುದಾರಿಕೆಯು ಈ ಬದ್ಧತೆಗೆ ಪುರಾವೆಯಾಗಿದೆ. ಇಂಡಿಯಾ ಸ್ಟಾಕ್ ಅನ್ನು ಬಳಸಿಕೊಂಡು ನಮ್ಮ ಅತ್ಯುತ್ತಮ- ದರ್ಜೆಯ ವ್ಯವಸ್ಥೆಯ ಮೂಲಕ ಗ್ರಾಹಕರಿಗೆ ವಾಣಿಜ್ಯ ವಾಹನವನ್ನು ಖರೀದಿಸುವ ಪ್ರಕ್ರಿಯೆಯನ್ನು ಸುಲಭ ಮತ್ತು ತೊಂದರೆ- ಮುಕ್ತಗೊಳಿಸುವ ಗುರಿಯನ್ನು ಹೊಂದಿದ್ದೇವೆ. ಪಾಲುದಾರಿಕೆಯು ಹೆಚ್ಚಿನ ವಾಣಿಜ್ಯ ವಾಹನ ಮಾಲೀಕರಿಗೆ ಹಣಕಾಸು ಪರಿಹಾರಗಳನ್ನು ಒದಗಿಸಿ ಸಶಕ್ತಗೊಳಿಸುತ್ತದೆ ಎಂದು ನಮಗೆ ವಿಶ್ವಾಸವಿದೆ ಎಂದು ಹೇಳಿದರು.
ಟಾಟಾ ಮೋಟಾರ್ಸ್ 1-ಟನ್‌ನಿಂದ 55-ಟನ್ ತೂಕದ ಸರಕು ವಾಹನಗಳು ಮತ್ತು 10-ಆಸನಗಳಿಂದ 51-ಆಸನಗಳ ಸಮೂಹ ಚಲನಶೀಲತೆ ಪರಿಹಾರಗಳು ಅಂದರೆ ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳನ್ನು ಒದಗಿಸುತ್ತದೆ. ಸಣ್ಣ ವಾಣಿಜ್ಯ ವಾಹನಗಳು ಮತ್ತು ಪಿಕಪ್‌ಗಳು, ಟ್ರಕ್‌ಗಳು ಮತ್ತು ಬಸ್‌ಗಳನ್ನು ಒದಗಿಸುವ ಮೂಲಕ ಸರಕು ಸಾಗಣೆ ಮತ್ತು ಪ್ರಯಾಣಿಕರ ಪ್ರಯಾಣ ವಿಭಾಗದ ಅಗತ್ಯತೆಗಳನ್ನು ಪೂರೈಸುತ್ತದೆ. ಕಂಪನಿಯು ತನ್ನ 2500+ ಟಚ್‌ಪಾಯಿಂಟ್‌ಗಳ ವ್ಯಾಪಕ ನೆಟ್‌ವರ್ಕ್ ಮೂಲಕ ಅತ್ಯುತ್ತಮ ಗುಣಮಟ್ಟ ಮತ್ತು ಸರ್ವೀಸ್ ಅನ್ನು ಒದಗಿಸುತ್ತದೆ. ಈ ಟಚ್ ಪಾಯಿಂಟ್‌ಗಳು ತರಬೇತಿ ಪಡೆದ ಪರಿಣಿತರಿಂದ ನಿರ್ವಹಿಸಲ್ಪಡುತ್ತದೆ ಮತ್ತು ಅಲ್ಲಿ ಟಾಟಾದ ಅಸಲಿ ಭಾಗಗಳು ಲಭ್ಯವಾಗುತ್ತವೆ.
ಇದನ್ನೂ ಓದಿ: Kannada New Movie: ಅದ್ಧೂರಿಯಾಗಿ ನಡೆದ ’ದ ಪ್ರಸೆಂಟ್’ ಚಿತ್ರದ ಮುಹೂರ್ತ
ಬಜಾಜ್ ಫೈನಾನ್ಸ್ ಭಾರತದಲ್ಲಿನ ಅತ್ಯಂತ ವೈವಿಧ್ಯಮಯ ಎನ್‌ಬಿಎಫ್‌ಸಿಗಳಲ್ಲಿ ಒಂದಾಗಿದೆ. ಇದು ಸಾಲ, ಠೇವಣಿ (ಡಿಪಾಸಿಟ್) ಮತ್ತು ಪಾವತಿ ವಿಭಾಗಗಳಲ್ಲಿ 83.64 ಮಿಲಿಯನ್ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಮಾರ್ಚ್ 31, 2024ರ ಪ್ರಕಾರ ಕಂಪನಿಯ ಅಸೆಟ್ ಅಂಡರ್ ಮ್ಯಾನೇಜ್ಮೆಂಟ್ (ಎಯುಎಂ) ₹3,30,615 ಕೋಟಿಗಳಷ್ಟಿದೆ.