Site icon Vistara News

Tech Transform 2022 | ದೇಶದ ಅಭಿವೃದ್ಧಿಗೆ ತಂತ್ರಜ್ಞಾನ ಪರಿಣಾಮಕಾರಿಯಾಗಿ ಬಳಕೆಯಾಗಲಿ: ಡಾ. ಆನಂದ ಲಕ್ಷ್ಮಣನ್

Tech Transform 2022

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಲು ಮತ್ತು ಆಸಕ್ತಿ ಹೆಚ್ಚಿಸಲು ಯಲಹಂಕದ ಬಿಎಂಎಸ್ಐಟಿಯಲ್ಲಿ ಎರಡು ದಿನಗಳ ಟೆಕ್ ಟ್ರಾನ್ಸ್‌ಫಾರ್ಮ್-೨೦೨೨ ಹಮ್ಮಿಕೊಳ್ಳಲಾಗಿತ್ತು. ತಾಂತ್ರಿಕ ಸಂಬಂಧಿತ ಪ್ರಾತ್ಯಕ್ಷಿಕೆಗಳ ಪ್ರದರ್ಶನ, ವಿಚಾರ ಸಂಕಿರಣ, ತಾಂತ್ರಿಕ ಕ್ವಿಜ್ ಹಾಗೂ ನಾನಾ ಸ್ಪರ್ಧೆಗಳನ್ನೊಳಗೊಂಡ ಟೆಕ್ ಉತ್ಸವವನ್ನು ಸಿರ್ಪಿ ಪ್ರಾಡಕ್ಟ್ಸ್‌ ಮತ್ತು ಸರ್ವೀಸ್‌ನ ಸಂಸ್ಥಾಪಕ ಡಾ. ಆನಂದ ಲಕ್ಷ್ಮಣನ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಇಂಟರ್ನೆಟ್ ಆಧಾರಿತ ಬಹುತೇಕ ಕಂಪನಿಗಳು ಡೇಟಾ ಸೈನ್ಸ್ ತಂತ್ರಜ್ಞಾನವನ್ನು ಅವಲಂಬಿಸಿಕೊಂಡಿವೆ. ಅದರಿಂದಾಗಿ ಇತ್ತೀಚಿನ ದಿನಗಳಲ್ಲಿ ಡೇಟಾ ಸೈನ್ಸ್ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಲಭಿಸುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ | ವಿಶ್ವವಿದ್ಯಾಲಯ ಸಭೆಗಳು ಇನ್ನು ಖುಲ್ಲಂ ಖುಲ್ಲಾ: ಎಲ್ಲವನ್ನೂ ನೇರ ಪ್ರಸಾರ ಮಾಡಲು ಸರ್ಕಾರ ನಿರ್ಧಾರ

ಪ್ರಾಂಶುಪಾಲ ಡಾ.ಮೋಹನ್ ಬಾಬು ಜಿ.ಎನ್. ಮಾತನಾಡಿ, ಯಾವುದೇ ಒಂದು ದೇಶದ ಅಭಿವೃದ್ಧಿಗೆ ತಾಂತ್ರಿಕ ಮತ್ತು ಕೈಗಾರಿಕಾ ಕ್ಷೇತ್ರಗಳ ಪ್ರಗತಿ ಮುಖ್ಯ ಪಾತ್ರ ವಹಿಸುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಸಂಶೋಧನೆ, ಕೈಗಾರಿಕೆ, ತಂತ್ರಜ್ಞಾನವನ್ನು ದೇಶೀಯವಾಗಿ ಅಭಿವೃದ್ಢಿಪಡಿಸುವ ಕಡೆಗೆ ಗಮನಹರಿಸಬೇಕು. ಬಿಎಂಎಸ್ಐಟಿ ನಡೆಸುತ್ತಿರುವ ಟೆಕ್ ಟ್ರಾನ್ಸ್‌ಫಾರ್ಮ್ ವಿದ್ಯಾರ್ಥಿಗಳ ತಾಂತ್ರಿಕ ಕ್ರಿಯಾಶೀಲತೆಯನ್ನು ಪ್ರದರ್ಶಿಸುವ ವೇದಿಕೆಯಾಗಿದೆ. ಇದರ ಪ್ರಯೋಜನವನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆಯುವುದು ಮಾತ್ರವಲ್ಲದೇ ಸುತ್ತಮುತ್ತಲಿನ ಶಾಲಾ ಮಕ್ಕಳು ಬಂದು ವೀಕ್ಷಿಸುತ್ತಿರುವುದು ಸಂತಸದ ವಿಷಯ ಎಂದರು.

ಬಿಎಂಎಸ್ಐಟಿ ಅಧ್ಯಕ್ಷ ಅವಿರಾಮ್ ಶರ್ಮ ಅವರು, ಟೆಕ್ ಉತ್ಸವದ ಪ್ರಯೋಜನದ ಕುರಿತ ಮಾತುಗಳನ್ನಾಡಿದರು. ಇಸ್ರೋ ವಿಜ್ಞಾನಿ ಎಚ್.ಎಲ್.ಶ್ರೀನಿವಾಸ ಅವರು ವಿದ್ಯಾರ್ಥಿಗಳಿಗೆ ಇಸ್ರೋದ ಅನೇಕ ಸಾಧನೆಗಳ ಕಿರು ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಡಾ.ಗೋವಿಂದರಾಜು ಎಚ್.ಕೆ, ಡಾ.ಸೀಮಾ ಸಿಂಗ್ ಮತ್ತಿತರು ಉಪಸ್ಥಿತರಿದ್ದರು.

ಇದನ್ನೂ ಓದಿ | Digital Rupee | ಬೆಂಗಳೂರಿನಲ್ಲಿ ರಿಟೇಲ್ ಡಿಜಿಟಲ್‌ ರೂಪಾಯಿ ಡಿಸೆಂಬರ್‌ 1ಕ್ಕೆ ಬಿಡುಗಡೆ

Exit mobile version