Site icon Vistara News

Telangana Results 2023 : ತೆಲಂಗಾಣದಲ್ಲಿ ಗೆದ್ದ‌ ಕೈ ಶಾಸಕರೆಲ್ಲರೂ ಹೈದರಾಬಾದ್‌ಗೆ ಶಿಫ್ಟ್

DK Shivakumar Telangana congress

ಬೆಂಗಳೂರು: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ (Telangana Results 2023) ಕಾಂಗ್ರೆಸ್‌ ಗೆಲುವಿನ ನಾಗಾಲೋಟದಲ್ಲಿದೆ. 119 ಕ್ಷೇತ್ರಗಳ ಪೈಕಿ 70ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಆಡಳಿತವನ್ನು ಕಳೆdದಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.

ಈ ಹಂತದಲ್ಲಿ ಕಾಂಗ್ರೆಸ್‌ ತನ್ನೆಲ್ಲ ಸಂಭಾವ್ಯ ಶಾಸಕರನ್ನು ಹೈದರಾಬಾದ್‌ ಗೆ ಕರೆಸಿಕೊಳ್ಳಲಾಗಿದೆ. ಒಂದು ವೇಳೆ ಇನ್ನು ಫಲಿತಾಂಶದಲ್ಲಿ ಏನಾದರೂ ಏರುಪೇರು ಉಂಟಾದರೆ ಪರಿಸ್ಥಿತಿಯನ್ನು ಎದುರಿಸಲು ಈ ತಂತ್ರಗಾರಿಕೆ ಮಾಡಲಾಗಿದೆ. ಗೆಲುವು ಸನಿಹದಲ್ಲೇ ಇದ್ದರೂ ನಿರ್ಲಕ್ಷ್ಯ ಮಾಡುವುದು ಬೇಡ ಎಂಬ ಕಾರಣಕ್ಕಾಗಿ ಎಲ್ಲರನ್ನು ಒಂದೇ ಕಡೆ ಸೇರಿಸುವ ಪ್ಲ್ಯಾನ್‌ ಮಾಡಲಾಗಿದೆ.

ಅತಂತ್ರ ಪರಿಸ್ಥಿತಿ ಅಥವಾ ಸರಳ ಬಹುಮತ ಬಂದರೆ ಚೆಸ್ ಗೇಮ್ ಆಡಲು ಕಳುಹಿಸಿಕೊಟ್ಟಿರುವ ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವ ಕರ್ನಾಟಕ ಕಾಂಗ್ರೆಸ್ ಟೀಮ್ ಸಜ್ಜಾಗಿ ನಿಂತಿದೆ. ಒಂದು ವೇಳೆ ಅವಶ್ಯ ಬಿದ್ದರೆ ಕಾಂಗ್ರೆಸ್‌ ನ ಎಲ್ಲ ಶಾಸಕರನ್ನು ಬೆಂಗಳೂರಿಗೆ ಶಿಫ್ಟ್‌ ಮಾಡಲು ಮೂರು ಬಸ್‌ ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.

ಡಿ.ಕೆ ಶಿವಕುಮಾರ್, ಸಚಿವರಾದ ಜಮೀರ್ ಅಹ್ಮದ್, ನಾಗೇಂದ್ರ, ಬೋಸರಾಜು. ಕೆ ಜೆ ಜಾರ್ಜ್ , ಎಂ.ಸಿ ಸುಧಾಕರ್, ಶಾಸಕರಾದ ರಿಜ್ವಾನ್ ಅರ್ಷದ್, ಪ್ರಿಯಾಕೃಷ್ಣ, ಪ್ರದೀಪ್ ಈಶ್ವರ್, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿ ಖಾನ್ ಸೇರಿ ಹಲವು ನಾಯಕರು ಈಗ ಹೈದರಾಬಾದ್‌ನಲ್ಲೇ ಬೀಡುಬಿಟ್ಟಿದ್ದಾರೆ.

ಒಂದೊಮ್ಮೆ ಅಗತ್ಯಬಿದ್ದರೆ ರೆಸಾರ್ಟ್‌ ಗೆ ಕರೆದುಕೊಂಡು ಹೋಗಲು ಕೂಡಾ ವ್ಯವಸ್ಥೆ ಮಾಡಲಾಗಿದೆ. ಹೈದರಾಬಾದ್‌ ನ ಹೋಟೆಲ್‌ ಮುಂದೆ ನಿಂತಿರುವ ಬಸ್‌ಗಳನ್ನು ಈ ಕಾರಣಕ್ಕಾಗಿಯೇ ಸಿದ್ಧಪಡಿಸಿ ಇಡಲಾಗಿದೆ.

ತೆಲಂಗಾಣದ ಈಗಿನ ಮುನ್ನಡೆ ಪ್ರವೃತ್ತಿ ಹೇಗಿದೆ?

119 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 70 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಬಿ.ಆರ್‌ಎಸ್‌ 37ರಲ್ಲಿ, ಬಿಜೆಪಿ ಎಂಟು ಮತ್ತು ಎಐಎಂಐಎಂ ನಾಲ್ಕರಲ್ಲಿ ಮುನ್ನಡೆ ಸಾಧಿಸಿದೆ.

Exit mobile version