Site icon Vistara News

Forced conversion | ಪತ್ನಿ ವಿರುದ್ಧವೇ ಬಲವಂತದ ಮತಾಂತರ ದೂರು ನೀಡಿದ ಪತಿ

Dalit school teacher set on fire by her relatives In Rajasthan

ಬೆಂಗಳೂರು: ಬೆಂಗಳೂರಿನಲ್ಲಿ ತನ್ನ ಪತ್ನಿ ಬಲವಂತದ ಮತಾಂತರ ಮತ್ತು ಕಿರುಕುಳ ನೀಡುತ್ತಿದ್ದಾಳೆ (Forced conversion) ಎಂದು ಪತಿ ದೂರು ದಾಖಲಿಸಿದ ಘಟನೆ ನಡೆದಿದೆ.

ದೀಪಕ್ ಎಂಬುವರು ತಮ್ಮ ಪತ್ನಿ ಸುನೀತಾ ಗ್ರೇಸಿ ವಿರುದ್ಧ ದೂರು ದಾಖಲಿಸಿದ್ದಾರೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೆಲಸದ ನಿಮಿತ್ತ ದೀಪಕ್‌ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದರು. ಆದರೆ ಗಂಡನಿಗೆ ಕಿರುಕುಳ ನೀಡಲು ಕಾಣೆಯಾಗಿದ್ದಾನೆಂಬ ಸುಳ್ಳು ದೂರುಗಳನ್ನ ಸುನೀತಾ ಗ್ರೇಸಿ ದಾಖಲಿಸುತ್ತಿದ್ದರು ಎನ್ನಲಾಗಿದೆ.

ಗಂಡನ ಹೆಸರಿನಲ್ಲಿ ಕಂಡ ಕಂಡವರ ಬಳಿ ಸಾಲ ಮಾಡಿ ಪತಿಯ ತಲೆಗೆ ಸಾಲದ ಹೊರೆ ಹೊರಿಸುತ್ತಿದ್ದರು ಎಂದೂ ದೂರಲಾಗಿದೆ. ದೀಪಕ್ ಕುಟುಂಬಸ್ಥರಿಗೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಒತ್ತಾಯ,ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಸುನೀತಾ ಗ್ರೇಸಿ ಹಾಗು ಆಕೆಯ ಸಂಬಂಧಿಕರಾದ ಶೋಭ ದಯಾನಿಧಿ , ತಮಿಳ್ ಮಣಿ , ಅಂತೋಣಿ ವಿರುದ್ಧವೂ ಮಹಾಲಕ್ಷ್ಮಿಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Exit mobile version