Site icon Vistara News

Liver treatment : ಲಿವರ್‌, ಪ್ಯಾಂಕ್ರಿಯಾಸ್ ಚಿಕಿತ್ಸೆಗೆ ಲೇಟೆಸ್ಟ್‌ ಟೆಕ್ನಾಲಜಿ

Liver treatment

ಬೆಂಗಳೂರು: ಬದಲಾಗುತ್ತಿರುವ ಜೀವನ ಶೈಲಿಯು ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಅನೇಕ ಹೊಸ ಮಾದರಿಯ ಖಾಯಿಲೆಗಳು ಕಾಡಲು ಶುರು ಮಾಡಿವೆ. ಅದರಲ್ಲೂ ಲಿವರ್ ಹಾಗೂ ಪ್ಯಾಂಕ್ರಿಯಾಸ್ ವಿಚಾರವಾಗಿ (Liver treatment) ಅನೇಕ ಹೊಸ ಸಮಸ್ಯೆಗಳು ಕಂಡು ಬರುತ್ತಿವೆ. ಹೊಸ ಖಾಯಿಲೆಗಳಿಗೆ ಹೊಸ ಮಾದರಿಯ ಚಿಕಿತ್ಸೆ ಅವಶ್ಯವಾಗಿದ್ದು, ಇದಕ್ಕೆ ಬೇಕಾದ ವ್ಯವಸ್ಥೆಯನ್ನು ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟೆರಾಲಜಿ ಆ್ಯಂಡ್ ಟ್ರಾನ್ಸ್ ಪ್ಲಾಂಟ್ ಮಾಡಿದೆ.

ಭಾರತದ ವೈದ್ಯಕೀಯ ಇತಿಹಾಸದಲ್ಲೇ ಇದೇ ಪ್ರಪ್ರಥಮ ಬಾರಿಗೆ ಲಿವರ್ ಹಾಗೂ ಪ್ಯಾಂಕ್ರಿಯಾಸ್ ಟ್ರಾನ್ಸ್‌ಪ್ಲಾಂಟ್‌ಗೆ ಸಂಬಂಧಪಟ್ಟಂತ ಕಾನ್ ಕ್ಲೇವ್ ಆಯೋಜಿಸಿತ್ತು. ಭಾರತದ ಬಹುತೇಕ ಎಲ್ಲ ರಾಜ್ಯಗಳಿಂದ 700 ವೈದ್ಯರು ಹಾಗು 300 ಕ್ಕೂ ಅಧಿಕ ವಿದೇಶಿ ವೈದ್ಯರು ಈ ಕಾರ್ಯಾಗಾರದಲ್ಲಿ ಪಾಲ್ಕೊಂಡಿದ್ದರು.

ಲಿವರ್ ಹಾಗು ಪ್ಯಾಂಕ್ರಿಯಾಸ್ ಚಿಕಿತ್ಸೆಗಳಲ್ಲಿ ಅಳವಡಿಸಬಹುದಾದ ಲೇಟೆಸ್ಟ್ ತಂತ್ರಜ್ಞಾನದ ಕುರಿತು ತಿಳಿಯಲು ಈ ಕಾನ್ ಕ್ಲೇವ್ ನಡೆಸಲಾಯಿತು. ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟೆರಾಲಜಿ ಆ್ಯಂಡ್ ಟ್ರಾನ್ಸ್ ಪ್ಲಾಂಟ್‌ನ ಸಂಸ್ಥಾಪಕ ನಿರ್ದೇಶಕ ಡಾ. ನಾಗೇಶ್ ಆಯೋಜಿಸಿದ್ದ ಈ ಕಾರ್ಯಗಾರವನ್ನು ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಉದ್ಘಾಟಿಸಿದರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version