ಬೆಂಗಳೂರು: ನಗರಕ್ಕೆ ಸೆ.26ರಿಂದ ಸೆ.28ರವರೆಗೆ ವಿವಿಧ ಗಣ್ಯರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಕಬ್ಬನ್‌ಪಾರ್ಕ್ ಮತ್ತು ಅಶೋಕನಗರ ಸಂಚಾರ ಪೊಲೀಸ್ ವ್ಯಾಪ್ತಿಯಲ್ಲಿನ ಕೆಲ ಮಾರ್ಗಗಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
ಈ ಕೆಳಕಂಡ ಏಕಮುಖ ಸಂಚಾರ ರಸ್ತೆಗಳನ್ನು ತಾತ್ಕಾಲಿಕವಾಗಿ ದ್ವಿಮುಖ ಸಂಚಾರ ರಸ್ತೆಗಳನ್ನಾಗಿ ಮಾರ್ಪಡಿಸಲಾಗಿದೆ.
- ಸೆ.25ರಿಂದ 27ರವರೆಗೆ ಕಬ್ಬನ್‌ಪಾರ್ಕ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ರಾಜಭವನ ರಸ್ತೆಯನ್ನು ರಾಜಭವನ ಮುಖ್ಯದ್ವಾರದಿಂದ ಪೊಲೀಸ್ ತಿಮ್ಮಯ್ಯ ವೃತ್ತದವರೆಗೆ ತಾತ್ಕಾಲಿಕವಾಗಿ ದ್ವಿಮುಖ ಸಂಚಾರ ರಸ್ತೆಯನ್ನಾಗಿ ಮಾರ್ಪಡಿಸಿದ್ದು, ಗಣ್ಯ ವ್ಯಕ್ತಿಗಳ ಕಾನ್ವಾಯ್ ಸಂಚರಿಸುವ ಸಮಯದಲ್ಲಿ ಮಾತ್ರ ಅನುವು ಮಾಡಿಕೊಡಲಾಗಿದೆ ಮತ್ತು ವಿಧಾನ ಸೌಧದ ನಿರ್ಗಮನ ಗೇಟ್ ನಂ-4ರಲ್ಲಿ ಹಾಲಿ ಪ್ರವೇಶ ನಿಷೇಧವಿದ್ದು, ಕಾನ್ವಾಯ್ ಸಂಚರಿಸುವ ಸಮಯದಲ್ಲಿ ಮುಕ್ತ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ.
- ಅಶೋಕ ನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ರಿಚ್ಮಂಡ್ ರಸ್ತೆಯಲ್ಲಿ ರಿಚ್ಮಂಡ್ ವೃತ್ತದಿಂದ ಬಾಲ್ಡ್‌ವಿನ್ ಬಾಲಕಿಯರ ಶಾಲೆಯ ವೃತ್ತದವರೆಗೆ ತಾತ್ಕಾಲಿಕವಾಗಿ ದ್ವಿಮುಖ ಸಂಚಾರ ರಸ್ತೆಯನ್ನಾಗಿ ಮಾರ್ಪಡಿಸಿ ಗೌರವಾನ್ವಿತ ಗಣ್ಯ ವ್ಯಕ್ತಿಗಳ ಕಾನ್ವಾಯ್ ಸಂಚರಿಸುವ ಸಮಯದಲ್ಲಿ ಮಾತ್ರ ಅನುವು ಮಾಡಿಕೊಡಲಾಗಿದೆ.
ಸಾರ್ವಜನಿಕರು ಈ ಕೆಳಕಂಡ ರಸ್ತೆಗಳನ್ನು ಬಳಸದೆ ಪರ್ಯಾಯ ರಸ್ತೆಗಳಲ್ಲಿ ಸಂಚರಿಸಬೇಕು:
- ಸೆ.26 ರಂದು ಸಂಜೆ 5.30 ರಿಂದ 6 ಗಂಟೆವರೆಗೆ ಹಳೇ ವಿಮಾನ ನಿಲ್ದಾಣ ರಸ್ತೆ-ಎಂ.ಜಿ.ರಸ್ತೆ – ಡಿಕನ್ಸನ್ ರಸ್ತೆ – ಕೆ.ಆರ್.ರಸ್ತೆ ಮತ್ತು ಕಬ್ಬನ್ ರಸ್ತೆ-ರಾಜಭವನ ರಸ್ತೆ.
- ಸೆ.27ರಂದು ಬೆಳಗ್ಗೆ 9.30 ಗಂಟೆಯಿಂದ 11.30 ಗಂಟೆವರೆಗೆ ರಾಜಭವನ ರಸ್ತೆ-ಇನ್ಫೆಂಟ್ರಿ ರಸ್ತೆ – ಕೆ.ಆರ್.ರಸ್ತೆ ಮತ್ತು ಕಬ್ಬನ್ ರಸ್ತೆ – ಡಿಕನ್ಸನ್ ರಸ್ತೆ – ಎಂ.ಜಿ.ರಸ್ತೆ – ಹಳೇ ವಿಮಾನ ನಿಲ್ದಾಣ ರಸ್ತೆ – ಸುರಂಜನ್ದಾಸ್ ರಸ್ತೆ. ಮಧ್ಯಾಹ್ನ 3.40ರಿಂದ ರಾತ್ರಿ 8 ಗಂಟೆಯವರೆಗೆ ರಾಜಭವನ ರಸ್ತೆ – ಇನ್ಫೆಂಟ್ರಿ ರಸ್ತೆ – ಕ್ವೀನ್ಸ್ ರಸ್ತೆ – ಕಸ್ತೂರಿ ಬಾ ರಸ್ತೆ – ರಿಚ್ಮಂಡ್ ರಸ್ತೆ – ಲ್ಯಾಂಗ್ ಫೋರ್ಡ್ ರಸ್ತೆ-ಅಂಬೇಡ್ಕರ್ ರಸ್ತೆ.
- ಸೆ.28ರಂದು ಬೆಳಗ್ಗೆ 9ರಿಂದ 9.30 ಗಂಟೆವರೆಗೆ ರಾಜಭವನ ರಸ್ತೆ-ಇನ್ಫೆಂಟ್ರಿ ರಸ್ತೆ – ಕೆ.ಆರ್.ರಸ್ತೆ ಮತ್ತು ಕಬ್ಬನ್ ರಸ್ತೆ – ಡಿಕೆನ್ಸನ್ ರಸ್ತೆ- ಎಂ.ಜಿ.ರಸ್ತೆ – ಹಳೇ ವಿಮಾನ ನಿಲ್ದಾಣ ರಸ್ತೆ.
ಇದನ್ನೂ ಓದಿ | ರಾಜ್ಯದಲ್ಲಿ ಮತ್ತೊಮ್ಮೆ ಜನಪರ ಸರ್ಕಾರ ಮರು ಸ್ಥಾಪನೆ ಎಂದ ಸಿಎಂ ಬೊಮ್ಮಾಯಿ