Site icon Vistara News

Robbery Case : ಫಾರ್ಮಸಿಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದವನು ಅರೆಸ್ಟ್‌

Robbery case in Bengaluru

ಬೆಂಗಳೂರು: ನಗರದ ಫಾರ್ಮಸಿಯನ್ನೇ ಗುರಿಯಾಗಿಸಿಕೊಂಡು ದರೋಡೆ (Robbery Case) ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ನಗರದ 13 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಮಾಡಿದ್ದ ಜೆ.ಸಿ.ನಗರ ನಿವಾಸಿ ಸಮಿ ಉದ್ದಿನ್ ಎಂಬಾತನನ್ನು ಬಂಧಿಸಿದ್ದಾರೆ.

ಸಮಿ ಉದ್ದಿನ್‌ ಬಹುತೇಕ ತನ್ನ ಕೆಲಸವನ್ನು ರಾತ್ರಿ ಸಮಯದಲ್ಲೇ ಇಟ್ಟುಕೊಳ್ಳುತ್ತಿದ್ದ. ಮಾತ್ರವಲ್ಲದೆ ವಾರಗಳ ಕಾಲ ಫಾರ್ಮಸಿ ಸುತ್ತಮುತ್ತ ಓಡಾಡಿಕೊಂಡು ಗಮನಿಸುತ್ತಿದ್ದ. ಬೈಕ್‌ನಲ್ಲಿ ಬಂದು ಹೆಲ್ಮೆಟ್‌ ಧರಿಸಿ ಫಾರ್ಮಸಿ ಒಳಗೆ ಬರುತ್ತಿದ್ದ. ಖರೀದಿಸುವ ನೆಪದಲ್ಲಿ ಸಿಬ್ಬಂದಿಯ ಗಮನವನ್ನು ಬೇರೆಡೆ ಸೆಳೆಯುತ್ತಿದ್ದ. ಸಿಬ್ಬಂದಿ ಆ ಕಡೆ ತಿರುಗಿ ನೋಡುವಷ್ಟರಲ್ಲಿ ಚಾಕು ಹಿಡಿದು ಕ್ಯಾಶ್‌ ಕೌಂಟರ್‌ ಬಳಿ ಬರುತ್ತಿದ್ದ.

ಹಲ್ಲೆ ಮಾಡಿ ಕ್ಯಾಶ್‌ ಬಾಕ್ಸ್‌ನಲ್ಲಿರುವ ಹಣ ಕೊಡುವಂತೆ ಬೆದರಿಕೆ ಹಾಕುತ್ತಿದ್ದ. ಒಂದು ವೇಳೆ ಸಿಬ್ಬಂದಿ ಹಣ ನೀಡಲು ವಿರೋಧ ವ್ಯಕ್ತಪಡಿಸಿದರೆ, ಚಾಕುವಿನಿಂದ ಇರಿಯುತ್ತಿದ್ದ. ಕ್ಷಣಾರ್ಧದಲ್ಲಿ ಹಣವನ್ನೆಲ್ಲ ದೋಚಿ ಪರಾರಿ ಆಗುತ್ತಿದ್ದ. ವಿದ್ಯಾರಣ್ಯಪುರದಲ್ಲೂ ಹೀಗೆ ಹಣ ದೋಚಲು ಹೋಗಿ ಪೊಲೀಸರಿಗೆ ಲಾಕ್‌ ಆಗಿದ್ದಾನೆ.

ಇದನ್ನೂ ಓದಿ: Love Case : ತಮ್ಮನ ಲವ್‌ ಅಫೆರ್‌ಗೆ ಬೇಸತ್ತು ಅಣ್ಣ ಆತ್ಮಹತ್ಯೆಗೆ ಯತ್ನ!

ವಿಚಾರಣೆ ವೇಳೆ ನಗರದಲ್ಲಿ ನಡೆದಿದ್ದ 13 ದರೋಡೆಯನ್ನು ಇವನೊಬ್ಬನೇ ಮಾಡಿದ್ದು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ತನ್ನದೇ ಸ್ಕೂಟರ್‌ನಲ್ಲಿ ಬರುತ್ತಿದ್ದ ಸಮಿ ಉದ್ದಿನ್‌ ಬೆಳಗ್ಗೆ ಮತ್ತು ರಾತ್ರಿ ಸಮಯ ಕೃತ್ಯವನ್ನು ಎಸಗುತ್ತಿದ್ದ. ಮೆಡಿಕಲ್ ತೆರೆದಾಗ ಮತ್ತು ಬಾಗಿಲು ಹಾಕುವ ಸಮಯದಲ್ಲಿ ಒಬ್ಬರು ಮಾತ್ರ ಇರುತ್ತಾರೆ ಎಂದು ಪ್ಲ್ಯಾನ್‌ ಮಾಡುತ್ತಿದ್ದ.

ಎಚ್‌ಎಸ್‌ಆರ್ ಲೇಔಟ್, ಮಾರತ್ ಹಳ್ಳಿ, ಸರ್ಜಾಪುರ, ಮಹದೇವಪುರ, ರಾಮಮೂರ್ತಿ ನಗರ ಹಾಗೂ ಕೆಂಗೇರಿ, ಹೆಬ್ಬಗೋಡಿ ಸೇರಿದಂತೆ ಬೆಳ್ಳಂದೂರು, ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯವೆಸಗಿದ್ದಾನೆ. ಸದ್ಯ ವಿದ್ಯಾರಣ್ಯಪುರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬೈಕ್‌-ಕಾರು ಕಳ್ಳರ ಬಂಧನ

ಬೈಕ್ ಮತ್ತು ಕಾರು ಕಳ್ಳತನ ಮಾಡಿ ಸುಲಿಗೆ ಮಾಡುತ್ತಿದ್ದ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 17ಲಕ್ಷ ಮೌಲ್ಯದ ಒಂದು ಕಾರು, 15 ಬೈಕ್, 11 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ. ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವೊಂದು ಮೂರು ಸುಲಿಗೆ ಪ್ರಕರಣ, ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಕಳ್ಳತನ, ಕೊತ್ತನೂರು, ಮಹಾದೇವಪುರ ಹಾಗೂ ಯಲಹಂಕ ಠಾಣೆಯ ಒಟ್ಟು 8 ಸುಲಿಗೆ ಪ್ರಕರಣಗಳು ಪತ್ತೆ ಮಾಡಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version